ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ಕಡ್ಡಾಯ ರೂಲ್ಸ್ ಜಾರಿ! ಬಿಗ್ ಅಪ್ಡೇಟ್

ಸರ್ಕಾರ ಕೆಲವೊಂದು ಪ್ರಮುಖ ಮಾಹಿತಿಗಳನ್ನ ತಿಳಿಸಿದ್ದು ಅವುಗಳ ಆಧಾರದ ಮೇಲೆ ನೀವು ಬ್ಯಾಂಕ್ ಖಾತೆಯನ್ನು (Bank Account) ಈಗ ಪರಿಶೀಲಿಸಿಕೊಳ್ಳಬೇಕು.

ನೀವು ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗೆ ಅರ್ಜಿ ಸಲ್ಲಿಸಿ ಹಣ ಬರುವುದಕ್ಕಾಗಿ ಕಾಯ್ತಾ ಇದ್ದೀರಾ? ಹಾಗಾದ್ರೆ ಮೊದಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದಾದರೂ ಸಮಸ್ಯೆ ಇದೆಯಾ ಅಂತ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಸರ್ಕಾರ ಕೆಲವೊಂದು ಪ್ರಮುಖ ಮಾಹಿತಿಗಳನ್ನ ತಿಳಿಸಿದ್ದು ಅವುಗಳ ಆಧಾರದ ಮೇಲೆ ನೀವು ಬ್ಯಾಂಕ್ ಖಾತೆಯನ್ನು (Bank Account) ಈಗ ಪರಿಶೀಲಿಸಿಕೊಳ್ಳಬೇಕು.

ಹೌದು, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 2000 ಗಳನ್ನ ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಾಗಿದೆ. ಈಗಾಗಲೇ 90ರಷ್ಟು ಮಹಿಳೆಯರ ಖಾತೆಗೆ ಏಳು ಕಂತಿನ ಹಣ ಬಿಡುಗಡೆ ಆಗಿದೆ ಎನ್ನುವ ಮಾಹಿತಿ ಇದೆ.

ಆದರೆ ಇನ್ನು ಸುಮಾರು ಎಂಟು ಲಕ್ಷದಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದರು ಕೂಡ ಹಣ ಮಾತ್ರ ಖಾತೆಗೆ ಬಂದು ತಲುಪುತ್ತಿಲ್ಲ ಇದರಿಂದ ಮಹಿಳೆಯರಿಗೆ ಸಾಕಷ್ಟು ಅಸಮಾಧಾನ ಉಂಟಾಗಿದೆ.

ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ಕಡ್ಡಾಯ ರೂಲ್ಸ್ ಜಾರಿ! ಬಿಗ್ ಅಪ್ಡೇಟ್ - Kannada News

ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್!

ಈ ಕೆಲಸ ಮಾಡಿ ಹಣ ಬರುತ್ತೆ!

ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ಮೊದಲು ನೀವು ಬ್ಯಾಂಕ್ ಗೆ ಭೇಟಿ ನೀಡಬೇಕು. ನಿಮ್ಮ ಬ್ಯಾಂಕ್ ಖಾತೆ (bank account) ಎಲ್ಲಿದಿಯೋ ಅದೇ ಬ್ಯಾಂಕ್ ಗೆ ಹೋಗಿ KYC update, npci mapping, Aadhar card seeding, account update ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಬೇಕು. ಬ್ಯಾಂಕ್ ಸಿಬ್ಬಂದಿಗಳ ಜೊತೆಗೆ ಸರಿಯಾಗಿ ಕೂತು ಮಾತನಾಡಿ ಈ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಿ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗಿರುವುದು ಕಡ್ಡಾಯ ಆದರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಆಗದೇ ಇದ್ದರೆ ಖಾತೆಗೆ ಕಾರ್ಡ್ ಲಿಂಕ್ ಆಗಿದ್ದರು ಕೂಡ ಹಣ ಬರದೇ ಇರುವ ಸಾಧ್ಯತೆ ಇರುತ್ತದೆ. ಹತ್ತು ವರ್ಷ ಹಳೆಯದಾಗಿರುವ ಆಧಾರ ಕಾರ್ಡ್ ಬಳಕೆ ಮಾಡುತ್ತಿದ್ದರೆ ತಕ್ಷಣ ಅದನ್ನು ಅಪ್ಡೇಟ್ ಮಾಡಿಸಿ.

ಇಂತಹವರಿಗೆ ಸಿಗದೇ ಇರಬಹುದು ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್

Gruha Lakshmi Yojanaಇನ್ನು ಮೂರನೆಯದಾಗಿ ನೀವು ಸಿಡಿಪಿಓ ಕಚೇರಿ (CDPO office) ಗೆ ಭೇಟಿ ನೀಡಿ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸರಿಯಾಗಿ ಸಲ್ಲಿಕೆ ಆಗಿದ್ಯೋ ಇಲ್ಲವೋ ಅಂತ ಚೆಕ್ ಮಾಡಿ ಒಂದು ವೇಳೆ ನೀವು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿದ ನಂತರ ಅದು ಸರ್ಕಾರಕ್ಕೆ ಸಂದಾಯವಾಗದೆ ಇದ್ದರೆ ತಕ್ಷಣ ಹೊಸ ಅರ್ಜಿ ಸಲ್ಲಿಸಿ ಮುಂದಿನ ಕಂತಿನ ಹಣ ಬರುವಂತೆ ಮಾಡಿಕೊಳ್ಳಿ.

ಸಿಹಿ ಸುದ್ದಿ! ಇಂತಹ ರೈತರಿಗೆ ಸರ್ಕಾರದಿಂದ ಭೂಮಿ ಹಂಚಿಕೆ, ಸಿಗಲಿದೆ ಹಕ್ಕು ಪತ್ರ

8ನೇ ಕಂತಿನ ಹಣ ಬಿಡುಗಡೆಗೆ ಮಹಿಳೆಯರು ಖುಷ್!

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಡಿ ಬಿ ಟಿ ಹಣ ಫಲಾನುಭವಿಗಳ ಖಾತೆಗೆ ಹಾಕುವ ಪ್ರಕ್ರಿಯೆ ಬಹಳ ವೇಗವಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೇ ಅಂದರೆ ಮಾರ್ಚ್ ಮೂರನೇ ವಾರ 7ನೇ ಕಂತಿನ ಹಣ ಬಿಡುಗಡೆ ಆಗಿತ್ತು.

ಈಗ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಅಂದರೆ ಮಾರ್ಚ್ 30 2024ಕ್ಕೆ ಎಂಟನೇ ಕಂತಿನ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು ಈಗಾಗಲೇ ಕೆಲವು ಮಹಿಳೆಯರ ಖಾತೆಗೆ ಹಣ ತಲುಪಿದೆ, ಏಪ್ರಿಲ್ ಮೊದಲ ವಾರದಲ್ಲಿ 8ನೇ ಕಂತಿನ ಹಣ ಎಲ್ಲಾ ಫಲಾನುಭವಿಗಳ ಖಾತೆಯನ್ನು ಸೇರಲಿದೆ ಎಂದು ವರದಿಯಾಗಿದೆ.

ನಿಮ್ಮ ರೇಷನ್ ಕಾರ್ಡ್ E-KYC ಆಗಿದೆಯಾ ಇಲ್ವಾ? ಈ ರೀತಿ ಸುಲಭವಾಗಿ ಚೆಕ್ ಮಾಡಿಕೊಳ್ಳಿ

mandatory rules for the 8th installment of Gruha Lakshmi Yojana

Follow us On

FaceBook Google News