Karnataka NewsBangalore News

ಇಂಥವರು ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದು; ಮಹತ್ವದ ಸೂಚನೆ!

ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಮೊದಲಾದ ಗುರುತಿನ ಚೀಟಿಗಳು ನಮಗೆ ಪ್ರತಿಯೊಂದು ಕೆಲಸಕ್ಕೂ ಎಷ್ಟು ಮುಖ್ಯವೋ ಅದೇ ರೀತಿ ರೇಷನ್ ಕಾರ್ಡ್ (ration card) ಎನ್ನುವುದು ಕೂಡ ಇಂದು ಪ್ರಮುಖ ದಾಖಲೆಯಾಗಿದೆ.

ಅದರಲ್ಲೂ ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗೆ (BPL Ration Card) ಹೆಚ್ಚಿನ ಮಹತ್ವ ಇದೆ, ಇದಕ್ಕೆ ಕಾರಣ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು.

Ration Card: ಯಾವೆಲ್ಲಾ ಜನರ ಬಿಪಿಎಲ್ ಕಾರ್ಡ್ ರದ್ದಾಗುತ್ತೆ? ಇಲ್ಲಿದೆ ಅಪ್ಡೇಟ್

ಹೌದು, ಗ್ಯಾರಂಟಿ ಯೋಜನೆಗಳ ಪ್ರಯೋಜನ ನೀವು ಪಡೆದುಕೊಳ್ಳಬೇಕು ಎಂದಾದರೆ ನಿಮ್ಮ ಬಳಿ ರೇಷನ್ ಕಾರ್ಡ್ ಇರಬೇಕು, ಅದರಲ್ಲೂ ಬಿಪಿಎಲ್ ಕಾರ್ಡ್ ಇರುವವರಿಗೆ ಅನ್ನಭಾಗ್ಯ ಯೋಜನೆ ಹಣ ಖಾತೆಗೆ ನೇರವಾಗಿ ಡಿ ಬಿ ಟಿ (DBT) ಆಗುತ್ತದೆ. ಇದರ ಜೊತೆಗೆ ಸರ್ಕಾರದ ಇನ್ನೊಂದಿಷ್ಟು ಯೋಜನೆಗಳ ಪ್ರಯೋಜನವನ್ನು ನೇರವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಹೊಸ ಪಡಿತರ ಚೀಟಿ ಪಡೆಯಲು ಬಯಸುವವರಿಗೆ ಇನ್ಮುಂದೆ ಸರ್ಕಾರದ ಹೊಸ ನಿಯಮ!

ಪಡಿತರ ಚೀಟಿ ವಿಲೇವಾರಿ ಬಗ್ಗೆ ಸರ್ಕಾರದ ಸ್ಪಷ್ಟನೆ!

ರಾಜ್ಯ ಸರ್ಕಾರ ಈಗಾಗಲೇ ತಿಳಿಸಿರುವಂತೆ ರಾಜ್ಯ ಸರ್ಕಾರಕ್ಕೆ ಈ ಹಿಂದೆ ಸಲ್ಲಿಕೆ ಆಗಿರುವ ಈ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಿ ಅವುಗಳ ವಿತರಣೆ ಕಾರ್ಯವನ್ನು ಏಪ್ರಿಲ್ ತಿಂಗಳಿನಿಂದ ಆರಂಭಿಸಲಾಗುವುದು ಎಂದು ಮಾಹಿತಿ ಸಿಕ್ಕಿತ್ತು. ಅದೇ ರೀತಿ ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭವಾಗಿದೆ. ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಅಥವಾ ಸೇವಾ ಕೇಂದ್ರಗಳಲ್ಲಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ.

ಹೊಸದಾಗಿ ಅರ್ಜಿ ಹಾಕಬೇಕು ಅನ್ನುವವರು ಈ ಅರ್ಹತೆಗಳನ್ನು ಹೊಂದಿರಬೇಕು!

* ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತೆ.

* ವಾರ್ಷಿಕ ಕುಟುಂಬದ ಆದಾಯ ಒಂದು ಲಕ್ಷ ರೂಪಾಯಿಗಳಿಗಿಂತ ಕೆಳಗಡೆ ಇದ್ದರೆ ಬಿಪಿಎಲ್ ಕಾರ್ಡ್ ಪಡೆಯಬಹುದು.

* ಇನ್ನು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಆದಾಯದ ಆಧಾರದ ಮೇಲೆ ಬಿಪಿಎಲ್ ಮತ್ತು ಎಪಿಎಲ್ ವಿಂಗಡಣೆ ಮಾಡಿ ಪಡಿತರ ಚೀಟಿ ವಿತರಣೆ ಮಾಡಲಾಗುವುದು.

* ಹೊಸದಾಗಿ ಮದುವೆಯಾಗಿರುವ ಗಂಡ ಹೆಂಡತಿ ಪ್ರತ್ಯೇಕ ಮನೆಯಲ್ಲಿ ವಾಸ ಮಾಡುವುದಿದ್ದರೆ ಅರ್ಜಿ ಸಲ್ಲಿಸಬಹುದು.

* ಈಗಾಗಲೇ ರೇಷನ್ ಕಾರ್ಡ್ ಇದ್ರೆ ಮತ್ತೆ ಅರ್ಜಿ ಸಲ್ಲಿಸೋಕೆ ಆಗಲ್ಲ.

* ಪಡಿತರ ಚೀಟಿಗೆ ಸಂಬಂಧಪಟ್ಟ ಮಾನದಂಡಗಳನ್ನು ಮೀರಿ ಅರ್ಜಿ ಸಲ್ಲಿಸುವಂತಿಲ್ಲ

* ಸರ್ಕಾರಿ ನೌಕರಿಯಲ್ಲಿ ಇದ್ರೆ ಅಥವಾ ತೆರಿಗೆ ಪಾವತಿ ಮಾಡುವವರಾಗಿದ್ದರೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಡಿ.

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ! ಖಾತೆ ಚೆಕ್ ಮಾಡಿ

BPL Ration Cardಬಿಪಿಎಲ್ ಕಾರ್ಡ್ ಪಡ್ಕೋಬೇಕು ಅಂದ್ರೆ ಇದಿಷ್ಟು ದಾಖಲೆಗಳು ಬೇಕು

* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಬಯೋಮೆಟ್ರಿಕ್ ದಾಖಲೆ

* ಆದಾಯ ಪ್ರಮಾಣ ಪತ್ರ (ಯಾರ ಹೆಸರಿನಲ್ಲಿ ರೇಷನ್ ಕಾರ್ಡ್ ತೆಗೆದುಕೊಳ್ಳಲು ಬಯಸುತ್ತೀರೋ ಅವರ ಹೆಸರಿನಲ್ಲಿಯೇ ಇರಬೇಕು)

* ವಿಳಾಸ ಪುರಾವೆ

* ಜಾತಿ ಪ್ರಮಾಣ ಪತ್ರ

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಹತ್ತಿರದ ಸೇವಾ ಕೇಂದ್ರಗಳಲ್ಲಿಅವಕಾಶ ಇದೆ.

ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ವರ್ಗಾವಣೆ ಆಗಲ್ಲ! ಬಿಗ್ ಅಪ್ಡೇಟ್

ಆನ್ಲೈನಲ್ಲಿ ಸ್ಟೇಟಸ್ ಚೆಕ್ ಮಾಡಿ

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನಿಮಗೆ ಆನ್ಲೈನ್ ಮೂಲಕವೇ ಪಡಿತರ ಚೀಟಿಗೆ ಸಂಬಂಧಪಟ್ಟ ಎಲ್ಲಾ ಅಪ್ಡೇಟ್ ಗಳನ್ನ ತಿಳಿದುಕೊಳ್ಳಲು ಸಾಧ್ಯವಿದೆ.

Only such people can apply for a new ration card

Our Whatsapp Channel is Live Now 👇

Whatsapp Channel

Related Stories