ಗೃಹಜ್ಯೋತಿ ಯೋಜನೆಯ ಮತ್ತೊಂದು ಅಪ್ಡೇಟ್; ವಿದ್ಯುತ್ ದರ ಇನ್ನಷ್ಟು ಇಳಿಕೆ!

ಸರ್ಕಾರ ಗೃಹಜ್ಯೋತಿ (Gruha jyothi scheme) ಯೋಜನೆಯ ಮೂಲಕ ಇನ್ನೂರು ಯೂನಿಟ್ ಗಳ ವರೆಗೆ ಉಚಿತವಾದ ವಿದ್ಯುತ್ತನ್ನು (free electricity) ನೀಡುತ್ತಿದೆ.

ರಾಜ್ಯ ಸರ್ಕಾರ ಗೃಹಜ್ಯೋತಿ (Gruha jyothi scheme) ಯೋಜನೆಯ ಮೂಲಕ ಇನ್ನೂರು ಯೂನಿಟ್ ಗಳ ವರೆಗೆ ಉಚಿತವಾದ ವಿದ್ಯುತ್ತನ್ನು (free electricity) ನೀಡುತ್ತಿದೆ. ಇದರಿಂದ ರಾಜ್ಯಾದ್ಯಂತ ಲಕ್ಷಾಂತರ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ವಿದ್ಯುತ್ ಪಡೆದುಕೊಂಡರು ಕೂಡ ಇನ್ನು ಕೆಲವರು 200 ಯೂನಿಟ್ಗಿಂತ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡುವವರು, ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆದುಕೊಳ್ಳುವಂತಿಲ್ಲ. ಇದರ ಜೊತೆಗೆ ಅವರು ಪಾವತಿಸಬೇಕಾದ ವಿದ್ಯುತ್ ದರ ಮೊತ್ತ ಕೂಡ ಅಷ್ಟೇ ಜಾಸ್ತಿ ಇರುತ್ತದೆ.

ಆದರೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು ಗೃಹಜೋತಿ ಯೋಜನೆಯ ಫಲಾನುಭವಿ ಅಲ್ಲದೆ ಇರುವವರಿಗೂ ಕೂಡ ಇದು ಹೆಚ್ಚು ಅನುಕೂಲವಾಗಲಿದೆ.

ಗೃಹಜ್ಯೋತಿ ಯೋಜನೆಯ ಮತ್ತೊಂದು ಅಪ್ಡೇಟ್; ವಿದ್ಯುತ್ ದರ ಇನ್ನಷ್ಟು ಇಳಿಕೆ! - Kannada News

8ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ಕಾರಣಕ್ಕೆ ನಿಮ್ಮ ಖಾತೆಗೆ ಬರದೇ ಇರಬಹುದು

ವಿದ್ಯುತ್ ಶಕ್ತಿ ನಿಯಂತ್ರಣ ಮಂಡಳಿಯಿಂದ ಗುಡ್ ನ್ಯೂಸ್!

ಇತ್ತೀಚಿನ ದಿನಗಳಲ್ಲಿ ಕರೆಂಟ್ ಅಥವಾ ವಿದ್ಯುತ್ ಯೂನಿಟ್ ಬೆಲೆ (Electricity Bill) ಎಷ್ಟು ಜಾಸ್ತಿಯಾಗಿದೆ ಎಂಬುದು ನಿಮಗೆಲ್ಲ ಗೊತ್ತಿದೆ. ಅದರಲ್ಲೂ ಬೇಸಿಗೆ ಆಗಿರುವ ಕಾರಣ ವಿದ್ಯುತ್ ಬಳಕೆ ಮಾಡುವವರ ಸಂಖ್ಯೆಯು ಜಾಸ್ತಿ. ವಿದ್ಯುತ್ ಬೇಡಿಕೆಗಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಆದರೆ ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಏರಿಕೆ ಆಗುತ್ತದೆ.

ಇದರ ನಡುವೆಯೂ ವಿದ್ಯುತ್ ಸರಬರಾಜು ಕಂಪನಿಗಳು ನಿರ್ಧರಿಸಿರುವ ಹಾಗೆ ಯೂನಿಟ್ ದರವನ್ನು ಇಳಿಕೆ ಮಾಡಲಾಗಿದೆ. ಈ ಹೊಸ ದರ ಪರಿಷ್ಕರಣೆ ಗೊಂಡಿದ್ದು ಏಪ್ರಿಲ್ ಒಂದು 2024 ರಿಂದಲೇ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

ಇಂಥವರು ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದು; ಮಹತ್ವದ ಸೂಚನೆ!

Electricity billಪ್ರತಿ ಯೂನಿಟ್ ಗೆ 7 ರೂಪಾಯಿ ಪಾವತಿಸಬೇಕಿತ್ತು!

ಹೌದು, ನೂರು ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯೂನಿಟ್ ದರ 4.75 ಮಾತ್ರ. ಅದೇ ನೂರು ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡುವವರಿಗೆ ಹೇಳು ರೂಪಾಯಿ ಪ್ರತಿ ಯೂನಿಟ್ ದರ ಇತ್ತು. ಆದರೆ ನೂರು ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸುವವರ ಸಂಖ್ಯೆಯೇ ಜಾಸ್ತಿ ಇದೆ.

ಇದೀಗ ವಿದ್ಯುತ್ ಶಕ್ತಿ ನಿಯಂತ್ರಣ ಮಂಡಳಿ ಪ್ರತಿ ಯೂನಿಟ್ ಬೆಲೆಯನ್ನು 1.10 ರೂಪಾಯಿಗಳಷ್ಟು ಇಳಿಕೆ ಮಾಡಿದೆ. 100 ಯೂನಿಟ್ ಗಿಂತ ಅಧಿಕ ವಿದ್ಯುತ್ ಬಳಕೆ ಮಾಡುವವರು ಪ್ರತಿ ಯೂನಿಟ್ ಗೆ 5.90ಗಳನ್ನು ಪಾವತಿಸಬೇಕು. ಹಾಗೂ 100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯೂನಿಟ್ ದರ 4.75 ಗಳಷ್ಟು ಇರುತ್ತದೆ.

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ! ಖಾತೆ ಚೆಕ್ ಮಾಡಿ

ರಾಜ್ಯ ವಿದ್ಯುತ್ ಶಕ್ತಿ ಮಂಡಳಿ ಈ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು ಏಪ್ರಿಲ್ 1, 2024 ರಿಂದಲೇ ಇದು ಅನ್ವಯವಾಗುತ್ತದೆ. ಅಂದರೆ ಏಪ್ರಿಲ್ ತಿಂಗಳ ಬಿಲ್ ನಿಮ್ಮ ಕೈಗೆ ಸಿಗುವಾಗ ಯೂನಿಟ್ ದರ ಇಳಿಕೆ ಆಗಿರುವುದನ್ನು ಗಮನಿಸಬಹುದು.

ಇನ್ನು ವಿದ್ಯುತ್ ಶಕ್ತಿ ನಿಯಂತ್ರಣ ಮಂಡಳಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೂ ಕೂಡ ಒಂದೇ ರೀತಿಯ ವಿದ್ಯುತ್ ಯೂನಿಟ್ ದರವನ್ನ ಉಳಿಸಿಕೊಳ್ಳಲು ತಿಳಿಸಿದೆ. ಸರ್ಕಾರದ ಈ ಹೊಸ ವಿದ್ಯುತ್ ದರ ಇಳಿಕೆಯ ನಿರ್ಧಾರ ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಹೊರತುಪಡಿಸಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುತ್ತಿರುವವರಿಗೆ ಹೆಚ್ಚು ಅನುಕೂಲವಾಗಲಿದೆ.

Another update on Gruha jyothi Yojana, The price of electricity will decrease

Follow us On

FaceBook Google News

Another update on Gruha jyothi Yojana, The price of electricity will decrease