ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ಬಿಡುಗಡೆ ಬಗ್ಗೆ ಸರ್ಕಾರದ ಬಿಗ್ ಅಪ್ಡೇಟ್!

ಗೃಹಲಕ್ಷ್ಮಿ (Gruha lakshmi scheme) ಹಣ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುವ ಪ್ರಕ್ರಿಯೆ ಇನ್ನಷ್ಟು ಚುರುಕುಗೊಂಡಿದೆ ಎನ್ನಬಹುದು. ಮೊದಲು ಹಣ ಫಲಾನುಭವಿಗಳ ಖಾತೆಗೆ ಹಾಕಲು ಆಗುತ್ತಿದ್ದ ವಿಳಂಬ ಈಗ ಇಲ್ಲ ಅದರಲ್ಲೂ ಏಪ್ರಿಲ್ ತಿಂಗಳಿನಲ್ಲಿ ಎರಡು ಕಂತುಗಳ ಹಣ ಬಿಡುಗಡೆ ಆಗಿದೆ. ಅಂದರೆ 7ನೇ ಮತ್ತು ಎಂಟನೇ ಕಂತಿನ ಹಣವನ್ನು ಒಂದೇ ತಿಂಗಳಿನಲ್ಲಿ ಕೆಲವು ಮಹಿಳೆಯರು ಪಡೆದುಕೊಳ್ಳಲು ಸಾಧ್ಯವಾಗಿದೆ.

ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಿ! (Check your bank account)

ಕೆಲವು ಮಹಿಳೆಯರಿಗೆ ತಿಂಗಳಿನ ಹಣ ಅಂದರೆ ಫೆಬ್ರುವರಿ ತಿಂಗಳ ಹಣ ಮಾರ್ಚ್ ನಲ್ಲಿ ಖಾತೆಗೆ ಜಮಾ ಆಗಿದೆ. ಅದೇ ರೀತಿ ಮಾರ್ಚ್ ತಿಂಗಳ ಹಣ ಮಾರ್ಚ್ ತಿಂಗಳಲ್ಲಿಯೇ ಬಿಡುಗಡೆ ಆಗಿದೆ. ಅಲ್ಲಿಗೆ ಒಟ್ಟಿಗೆ ಎಂಟು ಕಂತಿನ ಹಣ ಅಂದರೆ ಹದಿನಾರು ಸಾವಿರ ರೂಪಾಯಿಗಳು ಮಹಿಳೆಯರ ಖಾತೆಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಜಮಾ ಆಗಿದೆ ಎನ್ನಬಹುದು.

15,000 ರೇಷನ್ ಕಾರ್ಡುಗಳು ಕ್ಯಾನ್ಸಲ್, ನಿಮ್ಮ ಕಾರ್ಡ್ ಸ್ಥಿತಿ ಏನಾಗಿದೆ? ಚೆಕ್ ಮಾಡಿ

ನಿಮಗೆ ಹಣ ಜಮಾ ಆಗಿರುವ ಬಗ್ಗೆ ಯಾವುದೇ ಬ್ಯಾಂಕ್ ನೋಟಿಫಿಕೇಷನ್ ಬಾರದೇ ಇದ್ದರೆ, ತಕ್ಷಣ ಬ್ಯಾಂಕಿಗೆ ಹೋಗಿ ನಿಮ್ಮ ಪಾಸ್ ಬುಕ್ ಅಪ್ಡೇಟ್ (bank passbook update) ಮಾಡಿಸಿ.

ಮೆಸೇಜ್ ಬಾರದೆ ಇದ್ದರೂ ಆತೆಗೆ ಹಣ ಜಮಾ ಆಗಿರುತ್ತದೆ ಎಂದು ಸರ್ಕಾರ ತಿಳಿಸಿತ್ತು. ಅದರಂತೆ ಸಾಕಷ್ಟು ಮಹಿಳೆಯರು ಪಾಸ್ ಬುಕ್ ಅಪ್ಡೇಟ್ ಮಾಡಿಕೊಂಡ ನಂತರ ಅವರ ಖಾತೆಗೆ ಹಣ ಜಮಾ ಆಗಿರುವುದು ತಿಳಿದುಬಂದಿದೆ.

ಗೃಹಜ್ಯೋತಿ ಯೋಜನೆಯ ಮತ್ತೊಂದು ಅಪ್ಡೇಟ್; ವಿದ್ಯುತ್ ದರ ಇನ್ನಷ್ಟು ಇಳಿಕೆ!

Gruha Lakshmi Yojanaನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್, E-KYC, ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆಯೋ ಇಲ್ಲವೋ ಅಂತ ಚೆಕ್ ಮಾಡಿ. ಒಂದು ವೇಳೆ ದಾಖಲೆಗಳು ಸರಿಯಾಗಿ ಇಲ್ಲದೆ ಇದ್ದಾಗ ಖಾತೆಗೆ ಹಣ ಬರಲು ಸಾಧ್ಯವಿಲ್ಲ.

ಯಾಕಂದ್ರೆ ಡಿ ಬಿ ಟಿ ಮಾಡುವ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಹಾಗೂ ಆಟೋಮ್ಯಾಟಿಕ್ ಆಗಿದ್ದು, ಒಮ್ಮೆ ನಿಮ್ಮ ದಾಖಲೆಗಳು ಸರಿಯಾಗಿದ್ದು ಸರ್ಕಾರದ ಡೇಟಾಬೇಸ್ ನಲ್ಲಿ ನಿಮ್ಮ ಹೆಸರು ರಿಜಿಸ್ಟರ್ ಆದರೆ ಪ್ರತಿ ತಿಂಗಳ ಹಣ ಮಿಸ್ಸಾಗದೆ ನಿಮ್ಮ ಖಾತೆಯನ್ನು ತಲುಪುತ್ತದೆ.

8ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ಕಾರಣಕ್ಕೆ ನಿಮ್ಮ ಖಾತೆಗೆ ಬರದೇ ಇರಬಹುದು

ಹಾಗಾಗಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಿ. ಜೊತೆಗೆ ಹೊಸ ಅರ್ಜಿ ಸಲ್ಲಿಸಲು ಕೂಡ ಅವಕಾಶವಿದೆ. ಒಂದು ವೇಳೆ ನಿಮ್ಮ ದಾಖಲೆಗಳು ಸರಿಯಾಗಿ ಇಲ್ಲದೆ ಇದ್ದು, ಈ ಹಿಂದೆ ನೀವ್ ಸಲ್ಲಿಸಿದ ಅರ್ಜಿ ಮಾನ್ಯ ಆಗದೆ ಇದ್ದಲ್ಲಿ ನೀವು ಮತ್ತೆ ಹೊಸದಾಗಿ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು. ಇದರಿಂದ ಮುಂದಿನ ಕಂತಿನ ಹಣ ನಿಮ್ಮ ಖಾತೆಯನ್ನು ತಲುಪುತ್ತದೆ.

Big update on 8th installment of Gruha lakshmi Yojana

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories