ಹೊಸ ರೇಷನ್ ಕಾರ್ಡ್ ಫಲಾನುಭವಿಗಳ ಏಪ್ರಿಲ್ ತಿಂಗಳ ಲಿಸ್ಟ್ ಬಿಡುಗಡೆ! ಇಲ್ಲಿದೆ ಪಟ್ಟಿ

ಕೊನೆಗೂ ಇಷ್ಟು ದಿನಗಳವರೆಗೆ ಕಾದು ಕುಳಿತಿದ್ದ ಜನರಿಗೆ ರಾಜ್ಯ ಸರ್ಕಾರದ ಆಹಾರ ಇಲಾಖೆ ಪ್ರಮುಖ ಸುದ್ದಿಯನ್ನು ನೀಡಿದೆ. ಏಪ್ರಿಲ್ ತಿಂಗಳ ಲಿಸ್ಟ್ ಬಿಡುಗಡೆ ಮಾಡುವುದರ ಮೂಲಕ ಯಾರು ಫಲಾನುಭವಿಗಳು ಎಂಬುದನ್ನು ಬಹಿರಂಗಪಡಿಸಿದೆ.

ಏಪ್ರಿಲ್ ತಿಂಗಳ ಪಡಿತರ ಪಟ್ಟಿ ಬಿಡುಗಡೆ!

ಈಗಾಗಲೇ ಅಕ್ರಮವಾಗಿ ಪಡಿತರ ಚೀಟಿ (Ration Card) ಪಡೆದುಕೊಂಡಿರುವವರ ಪಡಿತರ ಕಾರ್ಡ್ ರದ್ದುಪಡಿ ಮಾಡಲಾಗಿದೆ. ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ಸಲ್ಲಿಕೆ ಆಗಿರುವ ರೇಷನ್ ಕಾರ್ಡ್ ಅರ್ಜಿಯನ್ನು ಪರಿಶೀಲಿಸಿ ಫಲಾನುಭವಿಗಳಿಗೆ ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ಕೊಡುವ ಬಗ್ಗೆ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇದರ ಆಧಾರದ ಮೇಲೆ ಈಗ ಹೊಸ ಪಡಿತರ ಚೀಟಿ (New Ration Card) ವಿತರಣೆ ಕಾರ್ಯ ಆರಂಭವಾಗಿದೆ.

ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ಬಿಡುಗಡೆ ಬಗ್ಗೆ ಸರ್ಕಾರದ ಬಿಗ್ ಅಪ್ಡೇಟ್!

ತಿದ್ದುಪಡಿಗೆ ಅವಕಾಶ – Ration Card Correction

ರೇಷನ್ ಕಾರ್ಡ್ ತಿದ್ದುಪಡಿಗೂ ಕೂಡ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ಹೆಸರು, ವಿಳಾಸ, ವಯಸ್ಸು ಮೊದಲಾದ ವಿವರಗಳನ್ನು ಬದಲಾವಣೆ ಮಾಡಿಕೊಳ್ಳುವುದಿದ್ದರೆ ಮಾಡಬಹುದು. ಇದಕ್ಕಾಗಿ ನೀವು ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಆನ್ಲೈನ್ ಮೂಲಕ ತಿದ್ದುಪಡಿ ಮಾಡಬಹುದಾಗಿದೆ.

ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ!

ಇನ್ನು ಕಳೆದ ಎರಡುವರೆ ವರ್ಷಗಳಿಂದ ವಿಲೀವಾರಿ ಆಗದೆ ಹಾಗೆ ಉಳಿದುಕೊಂಡಿದ್ದ 2.95 ಲಕ್ಷ ಪಡಿತರ ಚೀಟಿ ಅರ್ಜಿ ಪರಿಶೀಲನೆ ನಡೆಸಲಾಗಿದ್ದು ಅವುಗಳ ವಿತರಣೆಗೆ ಸರ್ಕಾರ ಮುಂದಾಗಿದೆ. ಆದರೆ ಸದ್ಯಕ್ಕೆ ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಅರ್ಜಿ ಸಲ್ಲಿಸುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಸಾಮಾನ್ಯರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.

15,000 ರೇಷನ್ ಕಾರ್ಡುಗಳು ಕ್ಯಾನ್ಸಲ್, ನಿಮ್ಮ ಕಾರ್ಡ್ ಸ್ಥಿತಿ ಏನಾಗಿದೆ? ಚೆಕ್ ಮಾಡಿ

BPL Ration Cardಸರ್ವರ್ ಸಮಸ್ಯೆ ಶುರುವಾಗಿದೆ!

ಏಪ್ರಿಲ್ ಒಂದರಿಂದಲೇ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಮತ್ತೆ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡುವುದು ಈ ಎರಡು ಕೆಲಸಕ್ಕೂ ಸರ್ಕಾರ ಅವಕಾಶ ಮಾಡಿಕೊಟ್ಟಿದೆ

ಆದರೆ ದಿನದಲ್ಲಿ ಅರ್ಧ ಗಂಟೆಯಿಂದ ಒಂದು ಗಂಟೆ ಮಾತ್ರ ಆನ್ಲೈನ್ ಪೋರ್ಟಲ್ ತೆರೆದುಕೊಳ್ಳುತ್ತಿದ್ದು ಅಷ್ಟರಲ್ಲಿ ಕೇವಲ ಒಂದರಿಂದ ಐದು ಜನರು ಮಾತ್ರ ತಮ್ಮ ಪಡಿತರ ಚೀಟಿ ಕೆಲಸ ಮಾಡಿಕೊಳ್ಳಲು ಸಾಧ್ಯ.

ಗೃಹಜ್ಯೋತಿ ಯೋಜನೆಯ ಮತ್ತೊಂದು ಅಪ್ಡೇಟ್; ವಿದ್ಯುತ್ ದರ ಇನ್ನಷ್ಟು ಇಳಿಕೆ!

ಹೀಗಾಗಿ ಸದ್ಯದಲ್ಲಿಯೇ ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಿ ದಿನವಿಡಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿ ಕೊಟ್ಟರೆ ಮಾತ್ರ ಅಗತ್ಯ ಇರುವವರಿಗೆ ಪಡಿತರ ಚೀಟಿ ದೊರೆಯುತ್ತದೆ ಎನ್ನಬಹುದು.

ಇನ್ನು ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದು ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು, ನಿಮ್ಮ ಹೆಸರು ಫಲಾನುಭವಿಗಳ ಲಿಸ್ಟ್ ನಲ್ಲಿ ಇದೆಯಾ ಎನ್ನುವುದನ್ನು ತಿಳಿದುಕೊಳ್ಳಲು ತಶೀಲ್ದಾರರ ಕಚೇರಿ ಅಥವಾ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ನಿಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದು.

April list of new ration card beneficiaries released

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories