Karnataka NewsBangalore News

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ತಿಂಗಳ ಪೆಂಡಿಂಗ್ ಹಣ ಜಮಾ!

ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಜಾರಿಗೆ ಬಂದು ಒಟ್ಟು 7 ತಿಂಗಳು ಕಳೆದಿವೆ. ಮಹಿಳೆಯರೂ ಕೂಡ ಸುಲಭವಾಗಿ ತಮ್ಮ ಖಾತೆಯಲ್ಲಿ (Bank Account)

ಪ್ರತಿ ತಿಂಗಳೂ ಹಣ ನೋಡುವಂತಾಗಿದೆ. ಇಲ್ಲಿಯವರೆಗೆ 14,000 ರೂ. ಪಡೆದುಕೊಂಡ ಮಹಿಳೆಯರು ಖುಷಿಯಾಗಿದ್ದಾರೆ. ಅಷ್ಟೇ ಅಲ್ಲದೇ 8 ನೇ ಕಂತಿನ ಹಣವನ್ನು ಬಹಳ ಬೇಗ ಸರ್ಕಾರ ರಿಲೀಸ್ ಮಾಡಿದ್ದು, ಈಗಾಗಲೇ 50% ಮಹಿಳೆಯರ ಖಾತೆಗೆ ಹಣ ಬಂದಿದೆ.

Gruha Lakshmi money received only 2,000, Update About Pending Money

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಬಿಟ್ಟುಹೋದ ಹೆಸರುಗಳನ್ನು ಸೇರಿಸಿಕೊಳ್ಳಿ

ನಿಮ್ಮ ಖಾತೆಗೆ ಯಾಕೆ ಹಣ ಬಂದಿಲ್ಲ ತಿಳಿದುಕೊಳ್ಳಿ!

ಹೌದು, ಮೊದಲು ನಾವು ಸಮಸ್ಯೆ ಏನು ಅಂತ ತಿಳಿದುಕೊಂಡ್ರೆ ಪರಿಹಾರವೂ ಸಿಗುತ್ತೆ. ಹಾಗಾಗಿ ನಿಮ್ಮ ಖಾತೆಗೆ 2,000 ರೂ. ಜಮಾ ಆಗಿಲ್ಲ ಎಂದಾದರೆ ಮೊದಲು ಅದಕ್ಕೆ ಕಾರಣ ತಿಳಿದುಕೊಳ್ಳಬೇಕು. ಇಲ್ಲಿಯವರೆಗೆ ಮಹಿಳೆಯರ ಖಾತೆಗೆ ಹಣ ಬಾರದೆ ಇರುವುದಕ್ಕೆ ಪಟ್ಟಿ ಮಾಡಲಾದ ಕಾರಣಗಳು ಇಂತಿವೆ,

1. KYC ಅಪ್ಡೇಟ್ ಆಗದೇ ಇರುವುದು

2. ಮಹಿಳೆಯರ ಹೆಸರು, ವಿಳಾಸ ಮತ್ತಿತರ ದಾಖಲೆಗಳು ಆಧಾರ್, ರೇಷನ್ ಕಾರ್ಡ್ (Ration Card) ಮತ್ತು ಬ್ಯಾಂಕ್ ಖಾತೆಯಲ್ಲಿ (Bank Account) ವಿಭಿನ್ನವಾಗಿರುವುದು. ಒಂದಕ್ಕೊಂದು ಮ್ಯಾಚ್ ಆಗದೇ ಇರುವುದು.

3. ಸರ್ವರ್ ಸಮಸ್ಯೆಯಿಂದ ನಿವು ಸಲ್ಲಿಸಿರುವ ಅರ್ಜಿ ಸರ್ಕಾರಕ್ಕೆ ಸಲ್ಲಿಕೆ ಆಗದೇ ಇರಬಹುದು.

4. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಸರ್ಕಾರದ ಡೇಟಾಬೇಸ್ ನಲ್ಲಿ ಅದರ ಬಗ್ಗೆ ಮಾಹಿತಿ ಇಲ್ಲದೇ ಇರುವುದು

5. ಬ್ಯಾಂಕ್ ಖಾತೆ ಹೊಂದಿದ್ದು, ಕಳೆದ ಎರಡು ವರ್ಷಗಳಿಂದ ಬಳಸದೇ ಇದ್ದಿದ್ದಕ್ಕೆ ನಿಷ್ಕ್ರೀಯಗೊಂಡಿರಬಹುದು.

6. ಸರ್ಕಾರದ ತಾಂತ್ರಿಕ ದೋಷಗಳು

ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಹಣಕ್ಕೆ E-KYC ಕಡ್ಡಾಯ, ಈ ರೀತಿ ಮಾಡಿಕೊಳ್ಳಿ!

ಹೌದು, ಈ ಎಲ್ಲಾ ಕಾರಣಗಳಿಗೆ ಅರ್ಜಿ ಸಲ್ಲಿಸಿದ 1.20 ಕೋಟಿ ಮಹಿಳೆಯರಲ್ಲಿ ಸುಮಾರು 8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ.

Gruha Lakshmi Yojanaಸಮಸ್ಯೆಗೆ ಏನಿದೆ ಪರಿಹಾರ?

ಈಗ ಸಮಸ್ಯೆ ಏನು ಅನ್ನೋದು ಗೊತ್ತಾಯ್ತು, ಹಾಗಾದ್ರೆ ಇದಕ್ಕೆ ಪರಿಹಾರವೇನು?

ಮೊದಲು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ.

ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.

ಬ್ಯಾಂಕ್ ಗೆ ಹೋಗಿ ಎಲ್ಲಾ ಲಿಂಕಿಂಕ್ ಪ್ರಕ್ರಿಯೆ ಮುಗಿಸಿ

ಸಹಾಯಕ್ಕಾಗಿ CDPO ಅಧಿಕಾರಿಗಳು, ಅಂಗನವಾಡಿ ಸಹಾಯಕಿಯರು ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ. ಅಥವಾ ಎಲ್ಲಾ ಸರಿಯಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಿ.

ಈ ಜಿಲ್ಲೆಯ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಸಿಗಲಿದೆ ಸಬ್ಸಿಡಿ! ನಿಮ್ಮ ಜಿಲ್ಲೆ ಇದ್ಯಾ ಚೆಕ್ ಮಾಡಿ

ಖಾತೆಯನ್ನು ಚೆಕ್ ಮಾಡುವುದು ಹೇಗೆ?

ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಾಗ, ಬ್ಯಾಂಕ್ ನಿಂದ ನೋಟಿಫಿಕೇಶನ್ ಬಾರದೇ ಇರಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಲು, DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್ ಫೊನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.

ಅದನ್ನು ಆಧಾರ್ ನಂಬರ್ ಕೊಟ್ಟು ಲಾಗಿನ್ ಮಾಡಿ. ಬಳಿಕ 4 ಅಂಕೆಗಳ mPIN ಹಾಕಿ. ಈಗ ನೀವು ಸ್ಟೇಟಸ್ ವಿಭಾಗದಲ್ಲಿ ಸರ್ಕಾರದಿಂದ ಯಾವೆಲ್ಲಾ ಯೋಜನೆಗಳ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆಯೋ ಆ ಎಲ್ಲಾ ಯೊಜನೆಗಳ ಸ್ಟೇಟಸ್ ತಿಳಿಯಬಹುದು.

8ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಾರದೆ ಇರುವವರು ತಕ್ಷಣ ಈ ಕೆಲಸ ಮಾಡಿ!

ಗೃಹಲಕ್ಷ್ಮಿ ಎಂದು ಸೆಲೆಕ್ಟ್ ಮಾಡಿದರೆ, ಇಲ್ಲಿವರೆಗೆ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ, ಯಾವ ಖಾತೆಗೆ ಹಣ ಬಂದಿದೆ ಎನ್ನುವ ಸಂಪೂರ್ಣ ವಿವರ ತಿಳಿಯಬಹುದು.

All pending Gruha Lakshmi Yojana Money Deposited for this district

Our Whatsapp Channel is Live Now 👇

Whatsapp Channel

Related Stories