ಕೃಷಿಭಾಗ್ಯ ಯೋಜನೆ ಅಡಿ ಕೃಷಿ ಹೊಂಡ, ಪಂಪ್ ಸೆಟ್ ಸೇರಿದಂತೆ ಸಿಗಲಿದೆ ರೈತರಿಗೆ ಸಬ್ಸಿಡಿ; ಅರ್ಜಿ ಸಲ್ಲಿಸಿ

Story Highlights

ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ ಸಬ್ಸಿಡಿ ನೀಡಲಿದೆ ಸರ್ಕಾರ; ಇಂದೇ ಅರ್ಜಿ ಸಲ್ಲಿಸಿ!

ಅನ್ನದಾತ ರೈತ (farmer) ತನ್ನ ಕೃಷಿ ಬೆಳೆಯನ್ನ ಸರಿಯಾದ ರೀತಿಯಲ್ಲಿ ಬೆಳೆಯಲು ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರ (State government) ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.

ಈ ಬಾರಿ ವಿಪರೀತ ಮಳೆಯ ಅಭಾವ ಕೃಷಿ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ ಎನ್ನಬಹುದು. ಈಗಾಗಲೇ ಆಯ್ದ ಪ್ರದೇಶದ ರೈತರಿಗೆ ಬರ ಪರಿಹಾರ ನಿಧಿ ಹಣವನ್ನು ವರ್ಗಾವಣೆ ಮಾಡಲಾಗಿದೆ.

ಇದರ ಜೊತೆಗೆ ಕೆಲವು ಪ್ರಮುಖ ಯೋಜನೆಗಳು ಜಾರಿಗೆ ತಂದಿರುವ ಸರ್ಕಾರ ಸಬ್ಸಿಡಿ (Subsidy Loan) ನೀಡುವುದರ ಮೂಲಕ ರೈತರ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡುತ್ತದೆ ಎನ್ನಬಹುದು.

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ತಿಂಗಳ ಪೆಂಡಿಂಗ್ ಹಣ ಜಮಾ!

ಕೃಷಿಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ!

ವಿಶೇಷವಾಗಿ ರೈತರಿಗಾಗಿಯೇ ಸಬ್ಸಿಡಿ (subsidy) ನೀಡುವ ಯೋಜನೆ ಇದಾಗಿದ್ದು, 2023 24ನೇ ಸಾಲಿನಲ್ಲಿ 24 ಜಿಲ್ಲೆಗಳ 106 ಪ್ರದೇಶಗಳನ್ನು ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೂಡ ಕೃಷಿಭಾಗ್ಯ ಯೋಜನೆಯ ಇಂಪ್ಲಿಮೆಂಟ್ ಮಾಡಲು ಸರ್ಕಾರ ನಿರ್ಧರಿಸಿದೆ.

ಕೃಷಿ ಭಾಗ್ಯ ಯೋಜನೆಯ ಪ್ರಯೋಜನಗಳು (benefits of krishi Bhagya scheme)

* ಕೃಷಿ ಹೊಂಡ ನಿರ್ಮಾಣ
* ಕ್ಷೇತ್ರ ಬದು ನಿರ್ಮಾಣ
* ಕೃಷಿಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ
* ಪಂಪ್ಸೆಟ್ ವಿತರಣೆ
* ನೀರಾವರಿಗೆ ಅನುಕೂಲ

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಬಿಟ್ಟುಹೋದ ಹೆಸರುಗಳನ್ನು ಸೇರಿಸಿಕೊಳ್ಳಿ

Krishi Bhagya Yojanaಯಾರಿಗೆ ಸಿಗಲಿದೆ ಕೃಷಿ ಭಾಗ್ಯ?

ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಬಯಸುವ ರೈತರಿಗೆ ಸ್ವಂತ ಕೃಷಿ ಭೂಮಿ (agriculture land) ಹೊಂದಿರಬೇಕು. ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು. ಕೃಷಿಭಾಗ್ಯ ಯೋಜನೆ ಕರ್ನಾಟಕದ ಜನತೆಗೆ ಮಾತ್ರ ಮೀಸಲಿಡಲಾಗಿದೆ.

ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಹಣಕ್ಕೆ E-KYC ಕಡ್ಡಾಯ, ಈ ರೀತಿ ಮಾಡಿಕೊಳ್ಳಿ!

ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

* ಅರ್ಜಿ ಸಲ್ಲಿಸುವ ರೈತರ ಆಧಾರ್ ಕಾರ್ಡ್
* ಪಹಣಿ ಅಥವಾ ಆರ್ ಟಿ ಸಿ
* ರೈತರು ಫ್ರೂಟ್ಸ್ ಐಡಿ ಹೊಂದಿರಬೇಕು
ರೈತರು ಒಂದು ವೇಳೆ ಫ್ರೂಟ್ಸ್ ಐಡಿ (FRUITS ID) ಒಂದಿಲ್ಲದೆ ಇದ್ದರೆ ಹತ್ತಿರದ ಹೋಗಿ FID ಪಡೆದುಕೊಳ್ಳಬಹುದು.

ಅಂತರ್ಜಲ ಮಟ್ಟ ಅಭಿವೃದ್ಧಿ ಮತ್ತು ಮಳೆಯಾಶ್ರಿತ ಕೃಷಿ ಭೂಮಿಯಲ್ಲಿಯೂ ಕೂಡ ಮಳೆ ಇಲ್ಲದೆ ಇರುವ ಸಮಯದಲ್ಲಿ ಕೃಷಿ ಮಾಡಲು ಅನುಕೂಲ ಮಾಡಿ ಕೊಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಹಣವನ್ನು ಪಡೆದುಕೊಳ್ಳಲು ಹತ್ತಿರದ ರೈತ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.

ಈ ಜಿಲ್ಲೆಯ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಸಿಗಲಿದೆ ಸಬ್ಸಿಡಿ! ನಿಮ್ಮ ಜಿಲ್ಲೆ ಇದ್ಯಾ ಚೆಕ್ ಮಾಡಿ

Under Krishibhagya Yojana, farmers will get subsidy including pump set

Related Stories