ಆನ್ಲೈನ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಿ ಹೊಸ ರೇಷನ್ ಕಾರ್ಡ್! ಸುಲಭ ವಿಧಾನ
ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಲು ಅಂದರೆ ತಿದ್ದುಪಡಿ (Ration card Correction) ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ
ರೇಷನ್ ಕಾರ್ಡ್ (Ration Card) ಪ್ರಮುಖ ದಾಖಲೆ ಆಗಿರುವ ಹಿನ್ನೆಲೆಯಲ್ಲಿ ಇಂದು ಪ್ರತಿಯೊಬ್ಬರು ಕೂಡ ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಸರ್ಕಾರದ ಯೋಜನೆಗಳಿಗೆ ಈ ರೇಷನ್ ಕಾರ್ಡ್ ಹೆಚ್ಚು ಅನುಕೂಲವಾಗಿದೆ. ಸಾಮಾನ್ಯವಾಗಿ ರೇಷನ್ ಕಾರ್ಡ್ ಪ್ರತಿಯನ್ನು ಇಟ್ಟುಕೊಂಡು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಖರೀದಿ ಮಾಡಬಹುದು.
ಅಷ್ಟೇ ಅಲ್ಲ ಇಂದು ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುವುದಕ್ಕೂ ಕೂಡ ರೇಷನ್ ಕಾರ್ಡ್ ತೋರಿಸಿ ಉಚಿತ ಟಿಕೆಟ್ ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಷ್ಟು ದಿನ ಹಣ ಬಾರದವರಿಗೆ ಹಣ ಜಮಾ
ಹೀಗಿರುವಾಗ ನೀವು ಹೋಗುವ ಎಲ್ಲಾ ಸ್ಥಳದಲ್ಲೂ ರೇಷನ್ ಕಾರ್ಡ್ ಹಾರ್ಡ್ ಕಾಪಿ ತೆಗೆದುಕೊಂಡು ಹೋಗುವುದು ಕಷ್ಟ ಅಥವಾ ಒಮ್ಮೊಮ್ಮೆ ತೆಗೆದುಕೊಂಡು ಹೋಗಲು ಮರೆತು ಹೋಗಬಹುದು.
ಇದಕ್ಕೆ ಸರ್ಕಾರ ಇ – ರೇಷನ್ ಕಾರ್ಡ್ ಬಿಡುಗಡೆ ಮಾಡಿದ್ದು, ನೀವು ಆನ್ಲೈನ್ ಮೂಲಕವೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ (Download Online) ಮಾಡಿ ಇಟ್ಟುಕೊಳ್ಳಬಹುದು. ನೀವು ಯಾವಾಗ ಎಲ್ಲಿ ಬೇಕಾದರೂ ಇ- ರೇಷನ್ ಕಾರ್ಡ್ ಬಳಸಿಕೊಳ್ಳಬಹುದು.
ಇ – ರೇಷನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?
ಇಂದು ಸಾಮಾನ್ಯವಾಗಿ ನಾವು ಡಿಜಿಟಲ್ ಹಣಕಾಸಿನ ವ್ಯವಹಾರವನ್ನೇ ಮಾಡುತ್ತೇವೆ ಅಷ್ಟೇ ಅಲ್ಲದೆ ಯಾವುದೇ ದಾಖಲೆಗಳು ಬೇಕು ಅಂದ್ರು, ಕ್ಷಣಮಾತ್ರದಲ್ಲಿ ಮೊಬೈಲ್ ನಲ್ಲಿ ಸಿಕ್ಕಿಬಿಡುತ್ತೆ. ಹೀಗಿರುವಾಗ ರೇಷನ್ ಕಾರ್ಡ್ ಕೂಡ ನೀವು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಇಟ್ಟುಕೊಂಡರೆ ಯಾವುದೇ ಸಂದರ್ಭದಲ್ಲಿ ಅಗತ್ಯ ಬಿದ್ದಾಗ ಅದನ್ನು ಬಳಸಿಕೊಳ್ಳಬಹುದು.
ಇದೇ ಕಾರಣಕ್ಕೆ ಸರ್ಕಾರ ಇ – ರೇಷನ್ ಕಾರ್ಡ್ ಬಿಡುಗಡೆ ಮಾಡಿದ್ದು, ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಕ್ಷಣಮಾತ್ರದಲ್ಲಿ ರೇಷನ್ ಕಾರ್ಡ್ ಐಡಿ ನಮೂದಿಸುವುದರ ಮೂಲಕ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಇಂತಹವರು ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಮಾಹಿತಿ
* ನಿಮ್ಮ ಮೊಬೈಲ್ ನಲ್ಲಿ ಡಿಜಿಲಾಕರ್ ಅಪ್ಲಿಕೇಶನ್ ಮೊದಲು ಡೌನ್ಲೋಡ್ ಮಾಡಿಕೊಳ್ಳಿ
* ಈಗ ಅಪ್ಲಿಕೇಶನ್ ನಲ್ಲಿ ಸೈನ್ ಇನ್ ಆಗಿ ರೇಷನ್ ಕಾರ್ಡ್ ಎನ್ನುವ ಆಯ್ಕೆ ಮಾಡಿ.
* ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು.
* ನಂತರ ಡೌನ್ಲೋಡ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
* ಈಗ ನಿಮ್ಮ ಮೊಬೈಲ್ ನಲ್ಲಿ ಇ- ರೇಷನ್ ಕಾರ್ಡ್ ಡೌನ್ಲೋಡ್ ಆಗಿರುತ್ತೆ.
ಕೃಷಿ ಭೂಮಿ ಇಲ್ಲದ ರೈತರಿಗೆ ಭರ್ಜರಿ ಸುದ್ದಿ! ಅಕ್ರಮ ಸಕ್ರಮ ಯೋಜನೆ ಅಡಿ ಭೂಮಿ ಹಂಚಿಕೆ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ
ಸರ್ಕಾರ ಈಗಾಗಲೇ ತಿಳಿಸಿರುವಂತೆ ಯಾರಿಗೆ ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಅಗತ್ಯ ಇದೆಯೋ ಅವರು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಕ್ಕಾಗಿ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ದಿನದ ಕೆಲವೇ ಅವಧಿಯಲ್ಲಿ ಮಾತ್ರ ಆನ್ಲೈನ್ ಪೋರ್ಟಲ್ ಓಪನ್ ಆಗುವುದರಿಂದ ಎಲ್ಲರಿಗೂ ಒಂದೇ ದಿನ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಹಾಗಾಗಿ ಏಪ್ರಿಲ್ ತಿಂಗಳ ಕೊನೆಯವರೆಗೂ ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಾಧ್ಯತೆ ಇದೆ.
ಇನ್ನು ವೈದ್ಯಕೀಯ ತುರ್ತು ಪರಿಸ್ಥಿತಿಯ ಸಲುವಾಗಿ ರೇಷನ್ ಕಾರ್ಡ್ ಪಡೆದುಕೊಳ್ಳುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಲು ಅಂದರೆ ತಿದ್ದುಪಡಿ (Ration card Correction) ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ತಪ್ಪದೇ ಈ ಕೆಲಸ ಮಾಡಿ! ಹೊಸ ಅಪ್ಡೇಟ್
ಒಟ್ಟಿನಲ್ಲಿ ಕೇವಲ ನಿಮ್ಮ ದಾಖಲೆಯಾಗಿ ಮಾತ್ರವಲ್ಲದೆ ಸರ್ಕಾರದ ಉಚಿತ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ ಎನ್ನಬಹುದು.
Download New Ration Card Online, Here is the Easy method