ಏಪ್ರಿಲ್ ತಿಂಗಳ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಪಡೆದುಕೊಂಡರೆ ಸಾಕಷ್ಟು ಬೆನಿಫಿಟ್ ಗಳು ಇವೆ.
ಬಡತನ ರೇಖೆಗಿಂತ ಕೆಳಗಿರುವವರು ರೇಷನ್ ಕಾರ್ಡ್ (Ration Card) ಹೊಂದಿದ್ದರೆ ಅಂತವರಿಗೆ ಉಚಿತವಾಗಿ ಪಡಿತರ ವಸ್ತುಗಳನ್ನ ನೀಡಲಾಗುತ್ತದೆ. ಪ್ರತಿಯೊಬ್ಬ ನಾಗರಿಕರ ಹಸಿವು ನಿವಾರಿಸುವ ಸಲುವಾಗಿ ಬಿಪಿಎಲ್ ರೇಷನ್ ಕಾರ್ಡ್ ಜಾರಿಗೆ ಬಂದಿದ್ದು ಬಡವರು ಮತ್ತು ಬಡತನ ರೇಖೆಗಿಂತ ಕೆಳಗಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಆಹಾರ ಭದ್ರತಾ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ, ಫಲಾನುಭವಿಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡುವ ಮೂಲಕ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ ಅನ್ನಬಹುದು.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂಥವರ ಖಾತೆಗೆ ಹಣ ಮಿಸ್ ಆಗೋದಿಲ್ಲ!
ರೇಷನ್ ಕಾರ್ಡ್ ಇದ್ರೆ ಸಿಗುತ್ತೆ ಇದೆಲ್ಲಾ ಬೆನಿಫಿಟ್!
ನಗರ ಭಾಗದಲ್ಲಿ 2 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನ ಹಾಗೂ ಗ್ರಾಮೀಣ ಭಾಗದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನ ಹೊಂದಿದ್ದರೆ ಪಡೆದುಕೊಳ್ಳಬಹುದು. ಈ ರೀತಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಪಡೆದುಕೊಂಡರೆ ಸಾಕಷ್ಟು ಬೆನಿಫಿಟ್ ಗಳು ಇವೆ.
ಉದಾಹರಣೆಯಲ್ಲಿ ಉಚಿತವಾಗಿ ಪಡಿತರ ವಸ್ತುವನ್ನು ನ್ಯಾಯಬೆಲೆ ಅಂಗಡಿಯಲ್ಲಿ ಪಡೆದುಕೊಳ್ಳಬಹುದು. ಇನ್ನು ಎರಡನೆಯದಾಗಿ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನ ಸಿಗುತ್ತದೆ. ಉದಾಹರಣೆಗೆ ಅನ್ನಭಾಗ್ಯ ಯೋಜನೆ (Annabhagya Yojana) ಹಾಗೂ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಅಡಿಯಲ್ಲಿ ಸರ್ಕಾರ ನೀಡುತ್ತಿರುವ ಹಣ ನೇರವಾಗಿ ಬಿಪಿಎಲ್ ಕುಟುಂಬದಾರರ ಬ್ಯಾಂಕ್ ಖಾತೆಗೆ (Bank Account) ಜಮಾ ಆಗುತ್ತದೆ. ಉಚಿತವಾಗಿ ವೈದ್ಯಕೀಯ ಸೇವೆ ಪಡೆದುಕೊಳ್ಳಲು ಕೂಡ ಬಿಪಿಎಲ್ ಕಾರ್ಡ್ ಬಹಳ ಮುಖ್ಯ ಎನ್ನಬಹುದು.
ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್
ಹೊಸ ಪಡಿತರ ಚೀಟಿ ಲಿಸ್ಟ್ ಬಿಡುಗಡೆ!
ಸರ್ಕಾರ ಈಗಾಗಲೇ ಸಾಕಷ್ಟು ಅನರ್ಹ ಪಡಿತರ ಚೀಟಿ ರದ್ದುಪಡಿ ಕೆಲಸ ನಡೆಸುತ್ತಿದೆ ಎನ್ನಬಹುದು. ಅನಗತ್ಯವಾಗಿ ಹಾಗೂ ಅಕ್ರಮವಾಗಿ ಯಾರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದಿಯೋ ಅಂಥವರ ಕಾರ್ಡ್ ಅನ್ನು ರದ್ದು ಪಡಿಸಲಾಗುತ್ತಿದೆ. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀವು ರದ್ದುಪಡಿಯಾಗಿರುವ ರೇಷನ್ ಕಾರ್ಡ್ ಲಿಸ್ಟ್ ನೋಡಬಹುದು.
ಸರ್ಕಾರ ಈಗಾಗಲೇ ತಿಳಿಸಿರುವಂತೆ 2024 ಏಪ್ರಿಲ್ ತಿಂಗಳಿನಲ್ಲಿ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭವಾಗಿದೆ, ನೀವು ಕೂಡ ಅರ್ಜಿ ಸಲ್ಲಿಸಿದ್ದು ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಎನ್ನುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು.
ಅನ್ನಭಾಗ್ಯ ಯೋಜನೆ ಹಣದ ಸ್ಟೇಟಸ್ ಚೆಕ್ ಮಾಡಲು ಹೊಸ ಡೈರೆಕ್ಟ್ ಲಿಂಕ್ ಇಲ್ಲಿದೆ
* ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
* ಮೇಲ್ಭಾಗದಲ್ಲಿ ಕಾಣುವ ಈ ಸರ್ವಿಸ್ ವಿಭಾಗಕ್ಕೆ ಹೋಗಿ.
* ಇದನ್ನು ಕ್ಲಿಕ್ ಮಾಡಿದರೆ ಎಡಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
* ಈಗ ಪಡಿತರ ಚೀಟಿ ಸ್ಥಿತಿ ಎನ್ನುವ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
* ಬಳಿಕ ಬೇರೆ ಬೇರೆ ಜಿಲ್ಲೆಗಳನ್ನು ಹೊಂದಿರುವ ಮೂರು ಲಿಂಕಗಳು ಕಾಣಿಸುತ್ತವೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಅದರ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ಈಗ ನೀವು ನಿಮ್ಮ ಜಿಲ್ಲೆ, ಗ್ರಾಮ ಹೋಬಳಿ ಮೊದಲಾದ ವಿವರಗಳನ್ನು ನೀಡಬೇಕು.
* ಹೊಸ ಲಿಸ್ಟ್ ತೆಗೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಹೆಸರು ಇದ್ದರೆ ನೀವು ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಹರಾಗಿದ್ದೀರಿ ಎಂದು ಅರ್ಥ.
ಹೊಸ ಪಡಿತರ ಚೀಟಿಯನ್ನು ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಸೇವಾ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು.
April Ration Card New List Released, Here is the information to check