ಸಿ.ಟಿ.ರವಿ ಬಂಧನದ ವೇಳೆ ನಿರ್ಲಕ್ಷ್ಯ ತೋರಿದ ಖಾನಾಪುರ ಠಾಣೆ ಸಿಐ ಅಮಾನತು
ಸಿ.ಟಿ.ರವಿ ಬಂಧನದ ವೇಳೆ ನಿರ್ಲಕ್ಷ್ಯ ತೋರಿದ ಬೆಳಗಾವಿಯ ಖಾನಾಪುರ ಠಾಣೆ ಸಿಐ ಮಂಜುನಾಥ್ ನಾಯ್ಕ ಅವರನ್ನು ಅಮಾನತು ಮಾಡಲಾಗಿದೆ.
ಬಿಜೆಪಿ ಎಂಎಲ್ಸಿ ಸಿ.ಟಿ.ರವಿ (CT Ravi) ಬಂಧನದ ವೇಳೆ ನಿರ್ಲಕ್ಷ್ಯ ತೋರಿದ ಬೆಳಗಾವಿಯ ಖಾನಾಪುರ ಠಾಣೆ ಸಿಐ ಮಂಜುನಾಥ್ ನಾಯ್ಕ (Khanapur CI) ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದೇ ತಿಂಗಳ 19ರಂದು ಸಿ.ಟಿ.ರವಿ ಅವರನ್ನು ಹಿರೇಬಾಗವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಬಿಜೆಪಿಯ ಕೆಲ ಮುಖಂಡರು ಸಿಐ ಕಚೇರಿಗೆ ತೆರಳಿ ಚರ್ಚಿಸಿದ್ದರು. ಅಲ್ಲದೆ ಕೆಲ ಮುಖಂಡರು ಧಾವಿಸಿ ಗೊಂದಲ ಉಂಟಾಯಿತು. ಇದು ಸಿಐನ ಬೇಜವಾಬ್ದಾರಿತನ ಎಂಬುದು ದೃಢಪಟ್ಟಿದೆ.
ಕರ್ನಾಟಕದ ಈ ಜಿಲ್ಲೆಯ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ
ಮತ್ತೊಂದೆಡೆ, ಅಮಾನತು ವಿರೋಧಿಸಿ ಕೆಲವರು ಶನಿವಾರ ಖಾನ್‌ಪುರ ಬಂದ್‌ಗೆ ಕರೆ ನೀಡಿವೆ. ಇದೇ ವೇಳೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರವಿ ಅವರ ಮಾನಹಾನಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
Belagavi Khanapur Police Inspector Suspended Over Negligence During BJP MLC C.T. Ravi Case