ಯುವಕರೆಲ್ಲ ಕಾಯುತ್ತಿದ್ದ ಯುವನಿಧಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್! ಯುವಪೀಳಿಗೆಗೆ ಭರವಸೆ ಕೊಟ್ಟ ಸರ್ಕಾರ

Story Highlights

. ರಾಜ್ಯದ ಯುವ ಪೀಳಿಗೆಯ ಹುಡುಗ ಹುಡುಗಿಯರು ಯುವನಿಧಿ ಯೋಜನೆ ಆರಂಭ ಆಗೋದು ಯಾವಾಗ ಎಂದು ಕಾದು ಕುಳಿತಿದ್ದರು, ಅವರಿಗೆಲ್ಲಾ ಈಗ ಸರ್ಕಾರದ ಕಡೆಯಿಂದ ಒಂದು ಗುಡ್ ಬಿಗ್ ಅಪ್ಡೇಟ್ ಸಿಕ್ಕಿದೆ.

ಕಾಂಗ್ರೆಸ್ ಸರ್ಕಾರ್ ವಿಧಾನಸಭೆ ಎಲೆಕ್ಷನ್ (Vidhanasaha Election) ಗೆ ಕ್ಯಾಂಪೇನ್ ಶುರು ಮಾಡಿದ ಸಮಯದಿಂದಲು 5 ಉಚಿತ ಗ್ಯಾರಂಟಿ ಯೋಜನೆಗಳನ್ನು (5 Guarantee Scheme) ಜಾರಿಗೆ ತಂದು ಜನರಿಗೆ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಜನರು ಕೂಡ ಅದನ್ನೇ ನಂಬಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ ಗೆಲ್ಲಿಸಿದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳು ಕಳೆದಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದ ವಿರೋಧ ಪಕ್ಷದವರು ತಕ್ಷಣವೇ ಎಲ್ಲಾ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಡ ಹೇರಿದ್ದರು. ಇದೆಲ್ಲಾ ಸಾಧ್ಯವಿಲ್ಲ ಎಂದು ಟೀಕೆ ಮಾಡಿದ್ದು ಕೂಡ ಇದೆ. ಆದರೆ ಕಾಂಗ್ರೆಸ್ ಸರ್ಕಾರ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಒಂದೊಂದಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಮೊದಲಿಗೆ ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗೆ ಶಕ್ತಿ ಯೋಜನೆಯನ್ನು (Shakti Yojane) ಜಾರಿಗೆ ತಂದಿತು. ಶಕ್ತಿ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಮಹಿಳೆಯರು ಕೂಡ ರಾಜ್ಯಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ಈ ಯೋಜನೆ ಜಾರಿಗೆ ಬಂದ ನಂತರ ಎಲ್ಲಾ ಮಹಿಳೆಯರು ಫ್ರೀ ಬಸ್ (Free Bus) ಸೇವೆಯನ್ನು ಆನಂದಿಸುತ್ತಾ ಎಲ್ಲಾ ಕಡೆ ಉಚಿತವಾಗಿ ಓಡಾಡುತ್ತಿದ್ದಾರೆ.

ಪುಣ್ಯಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದಾರೆ.. ಇನ್ನು ಎರಡನೇ ಮತ್ತು ಮೂರನೇ ಯೋಜನೆ ಗೃಹಲಕ್ಷ್ಮಿ (Gruhalakshmi Yojane) ಮತ್ತು ಗೃಹಜ್ಯೋತಿ (Gruhajyoti Yojane) ಯೋಜನೆ ಆಗಿದೆ. ಈ ಯೋಜನೆಯ ವಿಚಾರದಲ್ಲಿ ಗೊಂದಲಗಳು, ಪ್ರಶ್ನೆಗಳು ಏರ್ಪಟ್ಟರು ಸಹ ಈಗ ಕೊನೆಗೂ ಎಲ್ಲವನ್ನು ಬಗೆಹರಿಸಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.

ಮಹಿಳೆಯರು ಸಾಲು ಸಾಲಾಗಿ ಹೋಗಿ ಈ ಎರಡು ಯೋಜನೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ನಾಲ್ಕನೇ ಯೋಜನೆ ಅನ್ನಭಾಗ್ಯ ಯೋಜನೆ (Annabhagya Yojane) ಆಗಿದೆ. ಈ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು, ಆದರೆ ಅಕ್ಕಿ ಪೂರೈಕೆ ಸಾಧ್ಯವಿಲ್ಲದ ಕಾರಣ 5ಕೆಜಿ ಅಕ್ಕಿ ಕೊಟ್ಟು, ಇನ್ನು 5 ಕೆಜಿಯ ಅಕ್ಕಿ ಹಣವನ್ನು ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಇದಕ್ಕಾಗಿ ಕೆಲವು ಷರತ್ತುಗಳು ನಿಯಮಗಳನ್ನು ತಂದಿದ್ದು, ಈ ತಿಂಗಳಿನಿಂದಲೇ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಕೆಲಸ ಶುರುವಾಗಿದೆ. ಕಾಂಗ್ರೆಸ್ ಸರ್ಕಾರದ ಐದನೇ ಯೋಜನೆ ಯುವನಿಧಿ ಯೋಜನೆ (Yuvanidhi Yojane) ಆಗಿದೆ. ಈ ಯೋಜನೆಯ ಅಡಿಯಲ್ಲಿ 2022-23 ನೇ ವರ್ಷದಲ್ಲಿ ಪಾಸ್ ಆಗಿದ್ದು ಕೆಲಸ ಸಿಗದ ಡಿಗ್ರಿ ವಿದ್ಯಾರ್ಥಿಗಳಿಗೆ, ಕೆಲಸ ಇಲ್ಲದೆ ಇರುವವರಿಗೆ ತಿಂಗಳಿಗೆ ₹3000 ರೂಪಾಯಿ ಸ್ಟೈಪೆಂಡ್ ಕೊಡಲಾಗುತ್ತದೆ.

Big update from government about yuvanidhi scheme

ಹಾಗೆಯೇ ಇದೇ ಸಾಲಿನಲ್ಲಿ ಪಾಸ್ ಆಗಿ ಕೆಲಸ ಸಿಗದೆ ಇರುವ ಡಿಪ್ಲೊಮಾ ಹೋಲ್ಡರ್ ಗಳಿಗೆ ತಿಂಗಳಿಗೆ ₹1500 ರೂಪಾಯಿ ಸ್ಟೈಪೆಂಡ್ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಎರಡು ವರ್ಷಗಳ ಕಾಲ ಈ ಸ್ಟೈಪೆಂಡ್ ಸಿಗಲಿದ್ದು, ಅಷ್ಟರ ಒಳಗೆ ಕೆಲಸ ಹುಡುಕಿಕೊಳ್ಳಬೇಕು ಎಂದು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು.

ಇದೀಗ ಈ ಯೋಜನೆಯ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ರಾಜ್ಯದ ಯುವ ಪೀಳಿಗೆಯ ಹುಡುಗ ಹುಡುಗಿಯರು ಯುವನಿಧಿ ಯೋಜನೆ ಆರಂಭ ಆಗೋದು ಯಾವಾಗ ಎಂದು ಕಾದು ಕುಳಿತಿದ್ದರು, ಅವರಿಗೆಲ್ಲಾ ಈಗ ಸರ್ಕಾರದ ಕಡೆಯಿಂದ ಒಂದು ಗುಡ್ ಬಿಗ್ ಅಪ್ಡೇಟ್ ಸಿಕ್ಕಿದೆ. ಅದೇನು ಎಂದರೆ, ಈ ವರ್ಷ ಡಿಸೆಂಬರ್ ಇಂದ ಯುವನಿಧಿ ಯೋಜನೆ ಶುರುವಾಗಲಿದೆ.

ಹಾಗೆ ಕೌಶಲ್ಯ ಇಲಾಖೆಯ ವತಿಯಿಂದ ನಿರುದ್ಯೋಗಳಿಗೆ ತರಬೇತಿ ಕೊಡುವ ವ್ಯವಸ್ಥೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramiah) ಅವರೇ ಮಾಹಿತಿ ನೀಡಿದ್ದಾರೆ.

Big update from government about yuvanidhi scheme

Related Stories