ಇಂಥವರ ಬಿಪಿಎಲ್ ಕಾರ್ಡ್ ರದ್ದು; ಏಪ್ರಿಲ್ ತಿಂಗಳ ರದ್ದುಪಡಿ ಲಿಸ್ಟ್ ಚೆಕ್ ಮಾಡಿ!
ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹೊಸ ಅಪ್ಡೇಟ್ ನೀಡಿದೆ ಸರ್ಕಾರ. ಕೇವಲ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ರೇಷನ್ ಕಾರ್ಡ್ ಬಳಕೆ ಮಾಡುತ್ತಿರುವವರಿಗೆ ಶಾಕಿಂಗ್ ಸುದ್ದಿಯನ್ನು ಸರ್ಕಾರ ನೀಡಿದೆ.
ಯಾವುದೇ ಹಿಂಟ್ ಕೂಡ ನೀಡದೆ ಸಾಕಷ್ಟು ಜನರ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ರದ್ದಾಗಿದೆ. ಯಾರ ರೇಷನ್ ಕಾರ್ಡ್ ರದ್ದಾಗಿದೆ ಹಾಗೂ ಇದಕ್ಕೆ ಕಾರಣ ಏನು ಎಂಬುದನ್ನು ನೋಡೋಣ.
ರೇಷನ್ ಕಾರ್ಡ್ ಬಹಳ ಪ್ರಮುಖವಾಗಿರುವ ದಾಖಲೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಅಗತ್ಯ ಇದೆ.
ಅನ್ನಭಾಗ್ಯ ಹಣ ಜಮಾ ಆಗಿದ್ಯಾ ಎಂದು ಚೆಕ್ ಮಾಡುವುದಕ್ಕೆ ಇಲ್ಲಿದೆ ಡೈರೆಕ್ಟ್ ಲಿಂಕ್!
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವುದಕ್ಕಾಗಿ ಮಹಿಳೆಯರು ತಮ್ಮ ಹೆಸರಿನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡಿದ್ದಾರೆ. ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಸಾಕಷ್ಟು ಬದಲಾವಣೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.
ಇದರ ಜೊತೆಗೆ ದಿನದಿಂದ ದಿನಕ್ಕೆ ರೇಷನ್ ಕಾರ್ಡ್ ಬೇಡಿಕೆ ಕೂಡ ಹೆಚ್ಚಾಗಿದೆ ಒಂದು ಲೆಕ್ಕಾಚಾರದ ಪ್ರಕಾರ 1.27 ಕೋಟಿ ಅಧಿಕ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ವಿತರಣೆ ಮಾಡಲಾಗಿದೆ ಅವುಗಳಲ್ಲಿ 4. 37 ಕೋಟಿ ಅಧಿಕ ಫಲಾನುಭವಿಗಳು ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ.
ಒಂದು ಕಡೆ ರೇಷನ್ ಕಾರ್ಡ್ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ರೇಷನ್ ಕಾರ್ಡ್ ರದ್ದುಪಡಿ ಕೆಲಸ ಕೂಡ ನಡೆಯುತ್ತಿದೆ ಇದಕ್ಕೆ ಮುಖ್ಯವಾದ ಕಾರಣ ಕೇವಲ ಸರ್ಕಾರದ ಗ್ಯಾರಂಟಿ ಯೋಜನೆಯ ಹಣ ಪಡೆದುಕೊಳ್ಳುವುದಕ್ಕಾಗಿ ಬಿಪಿಎಲ್ ಕಾರ್ಡ್ ಬಳಕೆ ಮಾಡಲಾಗುತ್ತಿದೆ ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಸರ್ಕಾರದ ಮಾನದಂಡಗಳ ಒಳಗೆ ಬಾರದೆ ಇರುವವರು ಹಾಗೂ ಕಳೆದ ಆರು ತಿಂಗಳಿನಿಂದ ರೇಷನ್ ಪಡೆದುಕೊಳ್ಳದೆ ಇರುವವರನ್ನು ಗುರುತಿಸಿ ಅಂತವರ ರೇಷನ್ ಕಾರ್ಡ್ ರದ್ದು ಪಡಿ ಮಾಡಲಾಗಿದೆ.
ಗೃಹಲಕ್ಷ್ಮಿ ಹಣಕ್ಕೆ ಎಸ್ಎಂಎಸ್ ಬಾರದೆ ಇದ್ರೆ, ಕೂಡಲೇ ಈ ಕೆಲಸ ಮಾಡಿ ಹಣ ಬಂದೇ ಬರುತ್ತೆ!
ನಿಮ್ಮ ಕಾರ್ಡ್ ಚಾಲ್ತಿಯಲ್ಲಿ ಇದಿಯೋ ಇಲ್ವೋ ತಿಳಿದುಕೊಳ್ಳುವುದು ಹೇಗೆ?
* ಮೊದಲಿಗೆ ಆಹಾರ ಇಲಾಖೆಯ https://ahara.kar.nic.in/Home/EServices ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
* ಎಡಭಾಗದಲ್ಲಿ 3 ಲೈನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
* ಬಳಿಕ ತಡೆಹಿಡಿಯಲಾದ ಅಥವಾ ರದ್ದುಪಡಿ ಮಾಡಲಾದ ಪಡಿತರ ಚೀಟಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಸುದ್ದಿ! ಇನ್ಮುಂದೆ ಈ ಎಲ್ಲಾ ವಸ್ತುಗಳು ಫ್ರೀ
* ಈಗ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಮೂರು ಲಿಂಕ್ಗಳು ಇವೆ. ಅದರಲ್ಲಿ ನಿಮ್ಮ ಜಿಲ್ಲೆ ಯಾವುದು ಎನ್ನುವುದನ್ನು ಆಯ್ಕೆ ಮಾಡಿ ಅದರ ಮೇಲ್ಭಾಗದಲ್ಲಿ ಕಾಣಿಸುವ ಲಿಂಕ್ ಏನಿರುತ್ತದೆ ಅದನ್ನು ಕ್ಲಿಕ್ ಮಾಡಬೇಕು.
* ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ನೀವು ನಿಮ್ಮ ಜಿಲ್ಲೆ ಗ್ರಾಮ ಹೋಬಳಿ ಮೊದಲಾದ ಮಾಹಿತಿಯನ್ನು ಭರ್ತಿ ಮಾಡಿ. ಈಗ ನಿಮ್ಮ ಊರಿನಲ್ಲಿ ರದ್ದಾಗಿರುವ ಪಡಿತರ ಚೀಟಿ ಲಿಸ್ಟ್ ಕಾಣಿಸುತ್ತದೆ, ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಸರ್ಚ್ ಮಾಡಿ.
ನಿಮ್ಮ ಹೆಸರು ಕಾಣಿಸಿದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿರುತ್ತದೆ ಹಾಗೂ ಅದಕ್ಕೆ ಕಾರಣವನ್ನು ಕೂಡ ತಿಳಿಸಿರಲಾಗುತ್ತದೆ. ಚೆಕ್ ಮಾಡಿಕೊಳ್ಳಿ.
Cancellation of BPL card of such People, Check the cancellation list