ಗೃಹಲಕ್ಷ್ಮಿ ಹಣಕ್ಕೆ ಎಸ್ಎಂಎಸ್ ಬಾರದೆ ಇದ್ರೆ, ಕೂಡಲೇ ಈ ಕೆಲಸ ಮಾಡಿ ಹಣ ಬಂದೇ ಬರುತ್ತೆ!
ಇಲ್ಲಿಯವರೆಗೆ ಸುಮಾರು ಎಂಟು ಕಂತುಗಳ ಹಣವನ್ನು ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗಿದೆ.
ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಘೋಷಿಸಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹೆಚ್ಚು ಫೇಮಸ್ ಆಗಿದೆ
ಇಲ್ಲಿಯವರೆಗೆ ಸುಮಾರು ಎಂಟು ಕಂತುಗಳ ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗಿದೆ. ಇನ್ನು ಮಹಿಳೆಯರು ತಮ್ಮ ದೈನಂದಿನ ಖರ್ಚು ನಿಭಾಯಿಸಿಕೊಳ್ಳುವುದಕ್ಕೆ ಈ ಹಣ ಸಹಕಾರಿಯಾಗಿದೆ ಎನ್ನುವುದು.
ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಸುದ್ದಿ! ಇನ್ಮುಂದೆ ಈ ಎಲ್ಲಾ ವಸ್ತುಗಳು ಫ್ರೀ
ಹೌದು, ಮಹಿಳೆಯರಿಗೆ ಮನೆಯಲ್ಲಿ ಇದ್ದು ಹಣ ಗಳಿಸಿಕೊಳ್ಳುವುದಕ್ಕೆ ಈ ಯೋಜನೆ ಸಹಕಾರಿಯಾಗಿದೆ. ಆದರೆ ಅರ್ಜಿ ಸಲ್ಲಿಸಿದ ಬಳಿಕವೂ ಸುಮಾರು 8 ಲಕ್ಷಕ್ಕೂ ಅಧಿಕ ಮಹಿಳೆಯರು ಇದುವರೆಗೆ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ
ಇದಕ್ಕೆ ಮುಖ್ಯವಾಗಿ ತಾಂತ್ರಿಕ ದೋಷಗಳು ಕಾರಣವಾಗಿರುತ್ತದೆ, ಜೊತೆಗೆ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಕೆಲವು ಅಪ್ಡೇಟ್ಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಈ ಕೆಲಸಗಳನ್ನು ಯಾವ ಮಹಿಳೆಯರು ಮಾಡಿಕೊಂಡಿಲ್ಲವೋ ಅಂತವರಿಗೆ ಹಣ ಜಮಾ ಆಗಿಲ್ಲ.
ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ? ರಾತ್ರೋ-ರಾತ್ರಿ ಬಂತು ಹೊಸ ರೂಲ್ಸ್
ಟೆನ್ಶನ್ ಬೇಡ ಹೀಗೆ ಮಾಡಿ ಹಣ ಬರುತ್ತೆ!
ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವಂತೆ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡುವುದು ಸರ್ಕಾರದ ಉದ್ದೇಶ. ಹೀಗಾಗಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದ್ದು ಅವರಿಂದ ಮಹಿಳೆಯರ ಖಾತೆಯಲ್ಲಿ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಪರಿಹರಿಸಿ ಖಾತೆಗೆ ಹಣ ಬರುವಂತೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಮಹಿಳೆಯರ ಹೆಸರಿಗೆ ಹಣ ಜಮಾ ಆಗದಿದ್ದರೆ ಅದಕ್ಕೆ ಕಾರಣಗಳನ್ನು ತಿಳಿದುಕೊಂಡು ಅದನ್ನು ಸರ್ಕಾರಕ್ಕೆ ವರದಿ ಮಾಡಬೇಕು. ನಂತರ ಸಂಬಂಧ ಪಟ್ಟ ಅಧಿಕಾರಿಗಳು ಮಹಿಳೆಯರ ಖಾತೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಪರಿಹರಿಸಿ ಹಣ ಬರುವಂತೆ ಮಾಡುತ್ತಾರೆ.
ನಿಮ್ಮ ಖಾತೆಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಬಂದಿದ್ಯಾ ಇಲ್ವಾ? ಚೆಕ್ ಮಾಡಿಕೊಳ್ಳಿ!
ಈ ಸಮಸ್ಯೆಗಳು ನಿಮ್ಮ ಖಾತೆಯಲ್ಲಿ ಇರಬಹುದು!
ಮಹಿಳೆಯರು ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಅಥವಾ ಬಹಳ ಹಿಂದಿನ ಖಾತೆಯಾಗಿದ್ದರೆ ಆ ಖಾತೆ ಆಕ್ಟಿವ್ ಆಗಿದ್ಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬೇಕು. ಕನಿಷ್ಠ ಬ್ಯಾಲೆನ್ಸ್ (Bank Balance) ಕಾಯ್ದುಕೊಳ್ಳುವ ಅಗತ್ಯ ಇದ್ದರೆ ಆ ಕೆಲಸವನ್ನು ಮಾಡಿ. ಆಧಾರ್ ಕಾರ್ಡ್ ಅಪ್ಡೇಟ್, E-KYC update ಕೂಡ ಆಗಿರಬೇಕು.
ನಿಮ್ಮ ಖಾತೆಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರು ಕೂಡ ಹಣ ಜಮಾ ಆಗಿಲ್ಲ ಎಂದಾದರೆ ಅಂಚೆ ಕಚೇರಿಯಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೊಸ ಖಾತೆ ತೆರೆಯುವುದು ಉತ್ತಮ.
ಜೊತೆಗೆ ಮಹಿಳೆಯರ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಎಲ್ಲಾ ಕಡೆ ಹೆಸರು ಮತ್ತು ಅಡ್ರೆಸ್ ಮ್ಯಾಚ್ ಆಗಬೇಕು, ಒಂದು ವೇಳೆ ಮ್ಯಾಚ್ ಆಗದೆ ಇದ್ದಲ್ಲಿ ಖಾತೆಗೆ ಹಣ ಬಾರದೆ ಇರಬಹುದು ಅಂತಹ ಸಂದರ್ಭದಲ್ಲಿ ನೀವು ತಕ್ಷಣ ತಿದ್ದುಪಡಿ ಮಾಡಿಕೊಳ್ಳಿ.
ಕಡೆಗೂ ಬಿಡುಗಡೆ ಆಯ್ತು ಹೊಸ ರೇಷನ್ ಕಾರ್ಡ್ ಲಿಸ್ಟ್; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
ಎಂಟನೇ ಕಂತಿನ ಹಣ ಜಮಾ ಆಗಿದೆ! ನಿಮ್ಮ ಖಾತೆ ಚೆಕ್ ಮಾಡಿ
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಯಾವೆಲ್ಲಾ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆ ಎನ್ನುವ ಸ್ಟೇಟಸ್ ಚೆಕ್ ಮಾಡಬಹುದು.
ಒಂದು ವೇಳೆ ನಿಮ್ಮ ಖಾತೆಗೆ ಹಣ ಬಂದಿರುವ ಬಗ್ಗೆ ಬ್ಯಾಂಕಿನಿಂದ ಎಸ್ಎಂಎಸ್ ಬಾರದೆ ಇದ್ದರೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿಸಿಕೊಳ್ಳುವುದರ ಮೂಲಕ ಸ್ಟೇಟಸ್ ಚೆಕ್ ಮಾಡಬಹುದು. ಈ ಬಾರಿ ನಿರೀಕ್ಷೆಗೂ ಮೊದಲೇ ಎಂಟನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
Do This If You Not Received SMS For Gruha Lakshmi Scheme Money