ಕಡೆಗೂ ಬಿಡುಗಡೆ ಆಯ್ತು ಹೊಸ ರೇಷನ್ ಕಾರ್ಡ್ ಲಿಸ್ಟ್; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
ಏಪ್ರಿಲ್ ತಿಂಗಳಿನಲ್ಲಿ ಉಚಿತ ರೇಷನ್ ಸಿಕ್ಕಿಲ್ಲ ಎಂದಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ (Ration Card Cancelled) ಎಂದು ಅರ್ಥ.
ರೇಷನ್ ಕಾರ್ಡ್ (ration card) ಗೆ ಸಂಬಂಧಪಟ್ಟಂತೆ ಸರ್ಕಾರ ಮೇಲಿಂದ ಮೇಲೆ ಹೊಸ ಅಪ್ಡೇಟ್ಗಳನ್ನು ನೀಡುತ್ತಿದೆ. ಈಗ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಳ್ಳುವವರಿಗೆ ಕೂಡ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದೆ.
ಫ್ರೀ ಫ್ರೀ ಫ್ರೀ ! ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ; ಕೂಡಲೇ ಅರ್ಜಿ ಸಲ್ಲಿಸಿ
ಏಪ್ರಿಲ್ ತಿಂಗಳ ಪಡಿತರ ಚೀಟಿ ಲಿಸ್ಟ್ ಬಿಡುಗಡೆ! (April month ration card holder list)
ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ಅವರು ತಿಳಿಸಿರುವಂತೆ ಏಪ್ರಿಲ್ ತಿಂಗಳನಿಂದ ಇದುವರೆಗೆ ವಿಲೇವಾರಿ ಆಗದೆ ಇರುವ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ಎಲ್ಲಾ ಜಿಲ್ಲೆಗಳಲ್ಲಿಯೂ ಈಗಲೂ ಸರ್ಕಾರದ ಸರ್ವರ್ ಸಮಸ್ಯೆಯಿಂದ ಅಧಿಕೃತ ವೆಬ್ಸೈಟ್ ತೆರೆದುಕೊಳ್ಳುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಅರ್ಜಿ ಸಲ್ಲಿಸುವುದು ಅಥವಾ ತಿದ್ದುಪಡಿ (Correction) ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಇನ್ನು ಪಡಿತರ ಲಿಸ್ಟ್ ನಲ್ಲಿ ಯಾರ ಹೆಸರು ಇದೆ ಇಲ್ಲ ಎನ್ನುವುದನ್ನು ತಿಳಿದುಕೊಳ್ಳಲು ಏಪ್ರಿಲ್ ತಿಂಗಳಿನ ಹೊಸ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ನಿಮಗೆ ಏಪ್ರಿಲ್ ತಿಂಗಳಿನಲ್ಲಿ ಉಚಿತ ರೇಷನ್ ಸಿಕ್ಕಿಲ್ಲ ಎಂದಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ (Ration Card Cancelled) ಎಂದು ಅರ್ಥ.
ಕೊನೆಗೂ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಪೆಂಡಿಂಗ್ ಹಣ ಜಮಾ! ಖಾತೆ ನೋಡಿಕೊಳ್ಳಿ
ಇದರ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಸಿಗಬೇಕು ಅಂದ್ರೆ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ಮಾಹಿತಿ ಪಡೆಯಬಹುದು. ನಿಮ್ಮ ಹೆಸರಿನಲ್ಲಿ ರೇಷನ್ ಕಾರ್ಡ್ ಇಲ್ಲದೇ ಇದ್ರೆ ಉಚಿತ ರೇಷನ್ ಪಡೆದುಕೊಳ್ಳಲು ಸಾಧ್ಯವಿಲ್ಲ ಅದರ ಜೊತೆಗೆ ಸರ್ಕಾರದ ಇತರ ಯೋಜನೆಗಳ ಪ್ರಯೋಜನವು ಸಿಗುವುದಿಲ್ಲ.
ಸರ್ಕಾರ ಸಾಕಷ್ಟು ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಿದೆ ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಕೂಡ ಅನರ್ಹರು ಪಡೆದುಕೊಂಡಿದ್ದು ಸರ್ಕಾರದ ಗಮನಕ್ಕೆ ಬಂದಿದೆ ಹಾಗಾಗಿ ಅಂತಹ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಈಗ ನಿಮ್ಮ ರೇಷನ್ ಕಾರ್ಡ್ ಬಿಡುಗಡೆ ಆಗಿರುವ ಲಿಸ್ಟ್ ನಲ್ಲಿ ಇದೆಯಾ ಇಲ್ವಾ ಎಂಬುದನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಿ.
ಏಪ್ರಿಲ್ ತಿಂಗಳನ್ನು ಲಿಸ್ಟಿನಲ್ಲಿ ನಿಮ್ಮ ಹೆಸರು ಇದೆಯಾ ನೋಡಿ!
ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ನೀವು ರದ್ದುಪಡಿಸಲಾದ ಮತ್ತು ತಡೆಹಿಡಿಯಲಾದ ರೇಷನ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಬಹುದು. ನೀವು ನಿಮ್ಮ ಜಿಲ್ಲೆ, ಗ್ರಾಮ ಮೊದಲಾದವುಗಳನ್ನು ಆಯ್ಕೆ ಮಾಡಿ ನಂತರ ನಿಮ್ಮ ಹಳ್ಳಿಯಲ್ಲಿ ಇರುವ ಎಲ್ಲ ರೇಷನ್ ಕಾರ್ಡ್ ಹೋಲ್ಡರ್ ಹೆಸರುಗಳನ್ನು ನೋಡಬಹುದು. ರದ್ದುಪಡಿಸಲಾಗಿರುವ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಇನ್ನು ಮುಂದೆ ಉಚಿತವಾಗಿ ರೇಷನ್ ನೀವು ಪಡೆದುಕೊಳ್ಳಲು ಸಾಧ್ಯವಿಲ್ಲ.
ಇದ್ದಕ್ಕಿದ್ದಂತೆ ಇಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಿದ ರಾಜ್ಯ ಸರ್ಕಾರ! ಕಾರಣ ಇಲ್ಲಿದೆ
ಒಟ್ಟಿನಲ್ಲಿ ರಾಜ್ಯದಲ್ಲಿ ರೇಷನ್ ಕಾರ್ಡ್ ಎನ್ನುವುದು ಬಹಳ ದೊಡ್ಡ ಕಗ್ಗಂಟಾಗಿದೆ. ಆ ಕಡೆ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಬೇಕು. ಇನ್ನೊಂದು ಕಡೆಗೆ ಅನರ್ಹರ ರೇಷನ್ ಕಾರ್ಡ್ ರದ್ದುಪಡಿ ಮಾಡಬೇಕು.
ಇವೆಲ್ಲವೂ ಸರ್ಕಾರಕ್ಕೆ ದೊಡ್ಡ ಸವಾಲ್ ಆಗಿದ್ದು ಎಲೆಕ್ಷನ್ ಪೂರ್ವದಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ ಕಾರ್ಯವನ್ನು ಪೂರ್ಣಗೊಳಿಸುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು.
The new ration card list has been released, Check your name