ಫ್ರೀ ಫ್ರೀ ಫ್ರೀ ! ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ; ಕೂಡಲೇ ಅರ್ಜಿ ಸಲ್ಲಿಸಿ
ಮನೆಯಲ್ಲಿಯೇ ಇರುವ ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಒಂದು ಕಡೆ ಅಡಿಗೆ ಕೆಲಸವನ್ನು ಮಾಡಿಕೊಳ್ಳುತ್ತಾ, ನಿಮ್ಮದೇ ಸ್ವಂತ ದುಡಿಮೆ ಆರಂಭಿಸಬಹುದು ಹೇಗೆ ಅಂತೀರಾ?
ನೀವು ಕೇವಲ ಹೊಲಿಗೆ ತರಬೇತಿ ಪಡೆದುಕೊಂಡಿರುವವರಾಗಿದ್ದರೆ, ನಿಮ್ಮದೇ ಆಗಿರುವ ಸ್ವಂತ ಹೊಲಿಗೆ ಮಷೀನ್ (sewing machine) ಇಟ್ಟುಕೊಂಡು ಹೊಲಿಗೆ ಕೆಲಸ ಆರಂಭಿಸಬಹುದು. ಇದರಿಂದ ಕೈ ತುಂಬಾ ಹಣ ಸಂಪಾದನೆ ಮಾಡಬಹುದು.
ಹೌದು, ಮಹಿಳೆಯರು ಸಾಮಾನ್ಯವಾಗಿ ಉಚಿತವಾಗಿ ಸರ್ಕಾರದಿಂದ ಸಿಗುವ ಹೊಲಿಗೆ ತರಬೇತಿ ಪಡೆದುಕೊಂಡಿರುತ್ತಾರೆ ಹಾಗೂ ಸಣ್ಣಪುಟ್ಟ ಹೊಲಿಗೆ ಅಂಗಡಿಗಳಲ್ಲಿ ಹೊಲಿಗೆ ಕೆಲಸ ಮಾಡುತ್ತಾರೆ. ಆದರೆ ಹೀಗೆ ನೀವು ಹೊಲಿಗೆ ಕಲಿತು ನಿಮ್ಮ ಟ್ಯಾಲೆಂಟ್ ವೇಸ್ಟ್ ಮಾಡಿಕೊಳ್ಳಬೇಡಿ. ಅದರ ಬದಲು ನೀವೇ ಸ್ವಂತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಿ.
ಕೊನೆಗೂ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಪೆಂಡಿಂಗ್ ಹಣ ಜಮಾ! ಖಾತೆ ನೋಡಿಕೊಳ್ಳಿ
ಉಚಿತವಾಗಿ ಸಿಗುತ್ತೆ ಹೊಲಿಗೆ ಯಂತ್ರ!
ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರು ಸ್ವಾವಲಂಬನೆ (independent life) ಜೀವನಕ್ಕಾಗಿ ಜಿಲ್ಲಾ ಪಂಚಾಯತಿ ವತಿಯಿಂದ ನೀಡಲಾಗುವ ಉಚಿತ ಹೋಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು. ಹೊಲಿಗೆ ಯಂತ್ರ ಮಾತ್ರವಲ್ಲದೆ ಇತರ ಉದ್ಯಮಕ್ಕೆ ಬೇಕಾಗಿರುವ ಯಂತ್ರಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಇಂತಿವೆ
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಹೊಲಿಗೆ ತರಬೇತಿ ಪಡೆದಿರುವುದಕ್ಕೆ ಅರಳೀಕರಣ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ವಿಳಾಸದ ಪುರಾವೆ
ಪಾಸ್ಪೋರ್ಟ್ ಅಳತೆಯ ಫೋಟೋ.
ಬ್ಯಾಂಕ್ ಖಾತೆಯ ವಿವರ (Bank Account Details)
ಇದ್ದಕ್ಕಿದ್ದಂತೆ ಇಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಿದ ರಾಜ್ಯ ಸರ್ಕಾರ! ಕಾರಣ ಇಲ್ಲಿದೆ
ಯಾರು ಅರ್ಜಿ ಸಲ್ಲಿಸಬಹುದು?
ಗಾರೆ ಕೆಲಸ ಮಾಡುವ ಮಹಿಳೆಯರು, ದೋಬಿ ಕೆಲಸದಲ್ಲಿ ನಿರತರಾಗಿರುವವರು ಹೀಗೆ ಸಣ್ಣಪುಟ್ಟ ಉದ್ಯಮ ಮಾಡುವ ಬಡತನ ರೇಖೆಗಿಂತ ಕೆಳಗಿರುವವರು ಹೊಲಿಗೆ ಯಂತ್ರ ಮತ್ತು ಮತ್ತಿತರ ಉಚಿತ ಯಂತ್ರಗಳನ್ನ ಪಡೆಯಲು ಅರ್ಹರಾಗಿರುತ್ತಾರೆ.
ಇದಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿಯಲ್ಲಿ ಇರಬಾರದು. ಈ ಯೋಜನೆಯಡಿಯಲ್ಲಿ 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ!
ಎಲ್ಲಿ ಸಿಗಲಿದೆ ಹೊಲಿಗೆ ಯಂತ್ರ?
ಕೋಲಾರ, ವಿಜಯಪುರ ಜಿಲ್ಲಾ ಪಂಚಾಯತ್ ವತಿಯಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯದಿಂದ, ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುತ್ತಿದೆ. ಇದಕ್ಕೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು.
https://vijayapura.nic.in/ ಈ ಅಧಿಕೃತ ವೆಬ್ಸೈಟ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಿ ಅಥವಾ ವಿಜಯಪುರ ಹಾಗೂ ಕೋಲಾರ ಜಿಲ್ಲೆಯ, ಜಿಲ್ಲಾ ಪಂಚಾಯತ್ ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಗೃಹಜ್ಯೋತಿ ಯೋಜನೆ ಇದ್ರೂ ಕರೆಂಟ್ ಬಿಲ್ ಬರ್ತಾಯಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
ಸದ್ಯ ಇವೆರಡು ಜಿಲ್ಲೆಗಳಲ್ಲಿ ಇರುವ ಹೊಲಿಗೆ ಯಂತ್ರ ಮತ್ತು ಮತ್ತಿತರ ಉಪಕರಣಗಳನ್ನು ಉಚಿತವಾಗಿ ನೀಡುವ ಯೋಜನೆ, ಸದ್ಯದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಕೂಡ ಆರಂಭವಾಗಲಿದೆ. ಇದರಿಂದ ಸಾಕಷ್ಟು ಜನ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ.
Application Invitation for Free Sewing Machine, Apply immediately