ಗೃಹಜ್ಯೋತಿ ಯೋಜನೆ ಇದ್ರೂ ಕರೆಂಟ್ ಬಿಲ್ ಬರ್ತಾಯಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ

Story Highlights

ಗೃಹಜ್ಯೋತಿ ಅಡಿಯಲ್ಲಿ ಉಚಿತ ಕರೆಂಟ್ ಪಡೆದುಕೊಳ್ಳುತ್ತಿದ್ದರು ಯೂನಿಟ್ ಜಾಸ್ತಿ ಆಗ್ತಿದ್ಯಾ ಹಾಗಾದ್ರೆ ಈ ಟ್ರಿಕ್ ಫಾಲೋ ಮಾಡಿ ವಿದ್ಯುತ್ ಬಿಲ್ ಬಾರದೆ ಇರುವ ಹಾಗೆ ಮಾಡಿಕೊಳ್ಳಿ!

ಅದೇಷ್ಟೋ ಮಧ್ಯಮ ವರ್ಗದ ಕುಟುಂಬದವರಿಗೆ ಪ್ರತಿ ತಿಂಗಳು ಆರಂಭವಾಗಿ ಮುಗಿಯುವುದರ ಒಳಗೆ ಆ ತಿಂಗಳಿನ ಬಿಲ್ಲು ಪಾವತಿ ಮಾಡುವುದರಲ್ಲಿಯೇ ಜೀವನ ಕಳೆದು ಹೋಗುತ್ತದೆ. ಅದರಲ್ಲೂ ಕರೆಂಟ್ ಬಿಲ್ (Electricity Bill) ಎನ್ನುವುದು ನಮ್ಮ ಜೆಬಿಗೆ ಕತ್ತರಿ ಹಾಕಿದಂತೆ. ಪ್ರತಿ ತಿಂಗಳು 1000, 2000 ಗಳನ್ನು ಪಾವತಿಸಲೇಬೇಕು.

ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸಾಕಷ್ಟು ಕುಟುಂಬಕ್ಕೆ ಇಂದು ಉಚಿತ ಕರೆಂಟ್ (Free Electricity) ಸಿಗುವಂತೆ ಅನುಕೂಲ ಮಾಡಿಕೊಟ್ಟಿದೆ ಆದರೂ ಈ ಬೇಸಿಗೆ ಉರಿ ಹೆಚ್ಚು ಯೂನಿಟ್ ಖರ್ಚು ಮಾಡುವಂತೆ ಮಾಡಿದೆ

ಏಕೆಂದರೆ ನಾವು ಎಸಿ ಕೂಲರ್ ಬಳಕೆಯನ್ನು ಹೆಚ್ಚಿಸಿಕೊಂಡಿದ್ದೇವೆ. 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡಿದರೆ ಸರ್ಕಾರದಿಂದ ಸಿಗುವ ಗೃಹಜ್ಯೋತಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಹಾಗಾಗಿ ನೀವು ನಿಮ್ಮ ಮನೆಯಲ್ಲಿ ವಿದ್ಯುತ್ ಬಳಕೆ ಮೇಲೆ ನಿಯಂತ್ರಣ ಹೇರುವುದು ಬಹಳ ಮುಖ್ಯ.

ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರೇ ಮೊದಲು ಅಕೌಂಟ್ ಚೆಕ್ ಮಾಡಿಕೊಳ್ಳಿ!

ವಿದ್ಯುತ್ ಉಳಿತಾಯಕ್ಕೆ ಹೀಗೆ ಮಾಡಿ – Save Electricity

* ಅನಗತ್ಯ ಸಂದರ್ಭ ದಲ್ಲಿ ಎಲ್ಲಾ ಎಲೆಕ್ಟ್ರಿಕ್ ಡಿವೈಸ್ ಸ್ವೀಟ್ಸ್ ಆಫ್ ಮಾಡಿ

* ಆದಷ್ಟು ಕಿಟಕಿ ಬಾಗಿಲುಗಳನ್ನು ತೆರೆದಿಟ್ಟು ಗಾಳಿ ಬೆಳಕು ರೋಮ್ ಒಳಗೆ ಬರುವಂತೆ ನೋಡಿಕೊಳ್ಳಿ.

* ಮನೆಯಿಂದ ಹೊರಗೆ ಹೋಗುವಾಗ ಟಿವಿ, ಫ್ರಿಡ್ಜ್ ಹಾಗು ಮತ್ತಿತರ ಎಲೆಕ್ಟ್ರಿಕಲ್ ಡಿವೈಸ್ ಸ್ವಿಚ್ ಆಫ್ ಮಾಡೋದನ್ನ ಮರಿಬೇಡಿ

* ನೀವು ಟಿವಿ ನೋಡದೆ ಇರುವಾಗಲೂ ಟಿವಿ ಸ್ವಿಚ್ ಆನ್ ಮಾಡಿ ಇರುವುದು ಅಥವಾ ರೂಮ್ ಒಳಗೆ ಇಲ್ಲದೆ ಇರುವಾಗಲೂ ಫ್ಯಾನ್ ಸ್ವಿಚ್ ಆನ್ ಮಾಡಿ ಇರುವುದು ಜೊತೆಗೆ ಲ್ಯಾಪ್ಟಾಪ್ ಮೊಬೈಲ್ ಚಾರ್ಜರ್ಗಳನ್ನು ಆನ್ ಇಡುವುದು ಈ ರೀತಿ ಮಾಡುವುದರಿಂದ ವಿದ್ಯುತ್ ಪರಿ ಜಾಸ್ತಿ ಆಗುತ್ತೆ ಇದರ ಬಗ್ಗೆ ನಿಜವಹಿಸಿ.

ಬಿಪಿಎಲ್ ಕಾರ್ಡುದಾರರಿಗೆ ಆತಂಕ; ಇಂಥವರಿಗೆ ಇನ್ಮುಂದೆ ಗ್ಯಾರಂಟಿ ಯೋಜನೆಯ ಹಣ ಬರಲ್ಲ!

Electricity bill * ಟ್ರಿಪ್ ಅಥವಾ ಮೊದಲಾದ ಕಾರಣಕ್ಕೆ ಮನೆಯಿಂದ ಹೊರಗೆ ಹೋಗುವಾಗ ಎಲ್ಲಾ ಲೈಟ್ ಗಳನ್ನು ಆಫ್ ಮಾಡಲು ಮರೆಯಬೇಡಿ

* ಓಬಿರಾಯನ ಕಾಲದ ಬಲ್ಬ್ ನೀವಿನ್ನು ಬಳಸುತ್ತಿದ್ದರೆ ಎಲ್ಇಡಿ ಲೈಟ್‌ಗೆ ಬದಲಾಯಿಸಿ ಇದು ಹೆಚ್ಚು ವಿದ್ಯುತ್ ಉಳಿತಾಯ ಮಾಡುತ್ತದೆ.

* ಉತ್ತಮ ಗುಣಮಟ್ಟದ ಏಸಿ ಖರೀದಿಸಿ ಫೈವ್ ಸ್ಟಾರ್ ಮಾಡುತ್ತದೆ

* ಇದು ಕಡು ಬೇಸಿಗೆಕಾಲ ಆಗಿರುವುದರಿಂದ ಗೀಸರ್ ಅನ್ನು ಹೆಚ್ಚಾಗಿ ಬಳಸುವ ಅಗತ್ಯ ಇಲ್ಲ ಸ್ನಾನ ಮಾಡುವ ಮೊದಲು 5 ನಿಮಿಷ ಗೀಸರ್ ಸ್ವಿಚ್ ಹಾಕಿ ಮತ್ತೆ ಆಫ್ ಮಾಡಿರುತ್ತಾರೆ. ಇದರಿಂದ ಅತಿ ಹೆಚ್ಚು ವಿದ್ಯುತ್ ಬಳಕೆ ಆಗುತ್ತದೆ. ಬೇಸಿಗೆಕಾಲ ಆಗಿರುವುದರಿಂದ ಅತಿಯಾಗಿ ಬಿಸಿನೀರು ಸ್ನಾನ ಮಾಡುವುದು ತ್ವಚೆಗೂ ಕೂಡ ಒಳ್ಳೆಯದಲ್ಲ.

ಹಾಗಾಗಿ ಆದಷ್ಟು ನೀರು ಸ್ನಾನ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಇದರಿಂದ ಗೀಸರ್ ಗೆ ಬಳಸುವ ವಿದ್ಯುತ್ ಉಳಿತಾಯವಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! ಕೂಡಲೇ ಬ್ಯಾಂಕ್ ಹೋಗಿ ಅಪ್ಡೇಟ್ ಮಾಡಿಕೊಳ್ಳಿ

ಒಟ್ಟಿನಲ್ಲಿ ಬಹಳ ಮುತುವರ್ಜಿಯಿಂದ ನೀವು ವಿದ್ಯುತ್ ಬಳಕೆ ಮಾಡಿದರೆ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಉಪಯೋಗಿಸಿಕೊಂಡು ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯಬಹುದು.

Follow these tricks if you have a Gruha Jyothi Yojana and Getting Electricity bill

Related Stories