ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! ಕೂಡಲೇ ಬ್ಯಾಂಕ್ ಹೋಗಿ ಅಪ್ಡೇಟ್ ಮಾಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಇದುವರೆಗೆ ಸಾಕಷ್ಟು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಇದಕ್ಕೆ ಹಲವು ಕಾರಣಗಳನ್ನು ಕೂಡ ಸರ್ಕಾರ ತಿಳಿಸಿದೆ
“ಪ್ರತಿ ತಿಂಗಳು 2000 ಖಾತೆಗೆ ಜಮಾ ಆಗ್ತಿದೆ. ಇದರಿಂದಾಗಿ ಮನೆಯಲ್ಲಿ ಸಾಕಷ್ಟು ಹಣದ ಸಮಸ್ಯೆ ಪರಿಹಾರ ಆಗಿದೆ. ಮನೆಗೆ ಬೇಕಾಗಿರುವ ಸಣ್ಣಪುಟ್ಟ ವಸ್ತುಗಳನ್ನು ಖರೀದಿ ಮಾಡಲು, ಮಕ್ಕಳ ಶಾಲೆಗೆ ಬೇಕಾಗಿರುವ ವಸ್ತುಗಳನ್ನು ಕೊಡಿಸಲು ಸಾಧ್ಯವಾಗುತ್ತಿದೆ” ಎಂದು ಹೇಳುತ್ತಾ ಕೆಲವು ಮಹಿಳೆಯರು ಹಿಗ್ಗಿದರೆ, ‘ನಮ್ಮ ಖಾತೆಗೆ ಅರ್ಜಿ ಸಲ್ಲಿಸಿದ ನಂತರ ಹಣ ವರ್ಗಾವಣೆ ಆಗಿಲ್ಲ. ಒಂದು ಕಂತಿನ ಹಣವು ಇದುವರೆಗೆ ಬಂದಿಲ್ಲ’ ಅಂತ ಸರ್ಕಾರದ ಬಗ್ಗೆ ದೂರು ನೀಡುತ್ತಿರುವ ಮಹಿಳೆಯರು ಸಾಕಷ್ಟು ಜನ ಇದ್ದಾರೆ.
ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗಿನಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ.
ಹೌದು, ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಇದುವರೆಗೆ ಸಾಕಷ್ಟು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಇದಕ್ಕೆ ಹಲವು ಕಾರಣಗಳನ್ನು ಕೂಡ ಸರ್ಕಾರ ತಿಳಿಸಿದೆ ಅದು ಅಲ್ಲದೆ ಕೆಲವು ತಾಂತ್ರಿಕ ದೋಷಗಳು ಇರುವುದರಿಂದ ನೀವು ಸರ್ಕಾರಕ್ಕೆ ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎನ್ನುವ ಬಗ್ಗೆ ದೂರು ಸಲ್ಲಿಸಿದರೆ ಆ ಸಮಸ್ಯೆಯನ್ನು ಪರಿಹರಿಸಿ ನಿಮ್ಮ ಖಾತೆಗೆ ಹಣ ಬರುವಂತೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇಂಥವರ ರೇಷನ್ ಕಾರ್ಡ್ ರದ್ದು; ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಹಣವೂ ಬರಲ್ಲ!
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊಸ ಅಪ್ಡೇಟ್!
ನಿಮ್ಮ ಖಾತೆಗೆ ಆಧಾರ್ ಸೀಡಿಂಗ್, ಈಕೆ ವೈ ಸಿ ಅಪ್ಡೇಟ್, ಆಧಾರ್ ಕಾರ್ಡ್ ಅಪ್ಡೇಟ್, ಎನ್ ಪಿ ಸಿ ಐ ಮ್ಯಾಪಿಂಗ್ ಮೊದಲಾದ ಡಿಜಿಟಲ್ ಕೆಲಸಗಳು ಆಗದೆ ಇದ್ದರೆ ಖಾತೆಗೆ ಹಣ ಜಮಾ ಆಗಲು ಸಾಧ್ಯವಿಲ್ಲ
ಸರ್ಕಾರದಿಂದ ಹಣ ಜಮಾ ಆಗಿದ್ದರೂ ಕೂಡ ಬ್ಯಾಂಕ್ನಿಂದ ನಿಮ್ಮ ಖಾತೆಗೆ ಬರುವುದಿಲ್ಲ ಹಾಗಾಗಿ ನೀವು ತಕ್ಷಣ ಬ್ಯಾಂಕಿಗೆ ಹೋಗಿ ಬ್ಯಾಂಕಿನ ಸಿಬ್ಬಂದಿಗಳ ಬಳಿ ಮಾತನಾಡಿ ನಿಮ್ಮ ಖಾತೆಗೆ ಎಲ್ಲಾ ರೀತಿಯ ಅಪ್ಡೇಟ್ ಆಗಿವೆಯಾ ಎಂದು ಚೆಕ್ ಮಾಡಿಕೊಳ್ಳಿ.
ಇನ್ನು ಮಹಿಳೆಯರ ರೇಷನ್ ಕಾರ್ಡ್ ಹೆಸರು, ಬ್ಯಾಂಕ್ ಖಾತೆಯಲ್ಲಿ (Bank Account) ಇರುವ ಹೆಸರಿಗೂ ಮ್ಯಾಚ್ ಆಗುತ್ತಿಲ್ಲ. ಈ ರೀತಿ ಆದರೂ ಕೂಡ ಸರ್ಕಾರದ ಡೇಟಾಬೇಸ್‌ನಲ್ಲಿ ನಿಮ್ಮ ಹೆಸರು ರಿಜಿಸ್ಟರ್ ಆಗಿರುವುದಿಲ್ಲ.
ಕರ್ನಾಟಕದ ಯಾವುದೇ ಜಾಗದಲ್ಲಿ ಜಮೀನು ಖರೀದಿ ಮಾಡುವ ಮೊದಲು ಈ ದಾಖಲೆಗಳು ಚೆಕ್ ಮಾಡಿ
ಈ ರೀತಿ ಸಮಸ್ಯೆ ಆಗಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ. ಆದ್ದರಿಂದ ರೇಷನ್ ಕಾರ್ಡ್ ನಲ್ಲಿ (Ration Card) ಹಾಗೂ ಬ್ಯಾಂಕ್ ಖಾತೆಯಲ್ಲಿ ಅಗತ್ಯ ಇದ್ದರೆ ಹೆಸರು ಮತ್ತು ವಿಳಾಸವನ್ನ ತಿದ್ದುಪಡಿ ಮಾಡಿಕೊಳ್ಳಿ.
ಇನ್ನು ಮೂರನೆಯದಾಗಿ ಸಚಿವೆ ತಿಳಿಸಿರುವ ಪ್ರಕಾರ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಮಹಿಳೆಗೂ ಸಿಗುವಂತೆ ಸರ್ಕಾರದ ಜೊತೆಗೆ ಕೈಜೋಡಿಸಿವೆ ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ತಮ್ಮ ಖಾತೆಯಲ್ಲಿ ಯಾವುದೇ ಸಮಸ್ಯೆ ಇದ್ದು ಹಣ ಬಾರದೆ ಇದ್ದರೆ ಇವರುಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಲಾಗಿದೆ.
ನಿಮ್ಮ ಕೃಷಿ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡುತ್ತಿಲ್ವಾ? ಬಂತು ಹೊಸ ರೂಲ್ಸ್
ಸಾಕಷ್ಟು ಮಹಿಳೆಯರಿಗೆ ಮೊದಲ ಒಂದೆರಡು ಕಂತಿನ ಹಣ ಮಾತ್ರ ಬಿಡುಗಡೆ ಆಗಿದೆ ಆದರೆ 6, 7 ಮತ್ತು 8ನೇ ಕಂತಿನ ಹಣ ಇದುವರೆಗೆ ಬಂದಿಲ್ಲ. ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆಯುವುದರಿಂದ ಅಥವಾ ಅಂಚೆ ಕಚೇರಿಯಲ್ಲಿ ಹೊಸ ಖಾತೆ ಆರಂಭಿಸುವುದರಿಂದ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.
ಈ ರೀತಿ ಖಾತೆಗೆ ಸಂಬಂಧಪಟ್ಟಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು (Money Transfer) ಸರ್ಕಾರ ಪ್ರಯತ್ನಿಸುತ್ತಿದೆ.
ಅದು ಅಲ್ಲದೆ ರಾಜ್ಯದ ಈ ವರ್ಷದ ಬಜೆಟ್ ನಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಎಲ್ಲಾ ಮಹಿಳೆಯರ ಖಾತೆಗೂ ಹಣ ಜಮಾ ಆಗೇ ಆಗುತ್ತದೆ. ಎಂದು ಸರ್ಕಾರ ಭರವಸೆ ನೀಡಿದೆ.
ಇಂತಹ ಮಹಿಳೆಯರಿಗೆ ಇನ್ಮುಂದೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆ ಹಣ! ಇಲ್ಲಿದೆ ಕಾರಣ
New Update of Gruha Lakshmi Yojana, Go to the bank immediately and get updated