ಇಂಥವರ ರೇಷನ್ ಕಾರ್ಡ್ ರದ್ದು; ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಹಣವೂ ಬರಲ್ಲ!
ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಮತ್ತು ಕಡು ಬಡವರಿಗೆ ಅಂತ್ಯೋದಯ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದರಿಂದಾಗಿ ಉಚಿತವಾಗಿ ಪಡಿತರ ವಸ್ತುಗಳನ್ನು ಸರ್ಕಾರದ ಕಡೆಯಿಂದ ಪಡೆದುಕೊಂಡು ಜೀವನ ನಡೆಸಲು ಸಾಕಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ ಎನ್ನಬಹುದು.
ಆದರೆ ನಿಜವಾಗಿ ಯಾರು ಅರ್ಹರು ಅವರಿಗಿಂತ ಅರ್ಹತೆ ಇಲ್ಲದೆ ಇರುವವರು ಅಂದರೆ ಉಳ್ಳವರು ಕೂಡ ಬಿಪಿಎಲ್ ಕಾರ್ಡ್ (BPL Card) ಪಡೆದುಕೊಂಡಿರುವುದು ಸರಕಾರದ ಗಮನಕ್ಕೆ ಬಂದಿದೆ.
ಕರ್ನಾಟಕದ ಯಾವುದೇ ಜಾಗದಲ್ಲಿ ಜಮೀನು ಖರೀದಿ ಮಾಡುವ ಮೊದಲು ಈ ದಾಖಲೆಗಳು ಚೆಕ್ ಮಾಡಿ
ಹೌದು, ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡು ಇಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಇದನ್ನು ಗುರುತಿಸಿರುವ ಆಹಾರ ಇಲಾಖೆ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದ್ದು ಯಾರು ಸರ್ಕಾರದ ಮಾನದಂಡದೊಳಗೆ ಬರುವುದಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದು ಪಡಿ ಮಾಡುತ್ತಿದೆ.
ಯಾರ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ?
* ಸರ್ಕಾರದ ಮಾನದಂಡದ ಹೇಳಿಕೆಗಿಂತ ಹೆಚ್ಚಿನ ಜಮೀನು ಹೊಂದಿರುವವರ ಬಿಪಿಎಲ್ ಕಾರ್ಡ್ (BPL Ration card) ರದ್ದಾಗುತ್ತದೆ.
* ಸರ್ಕಾರಿ ನೌಕರಿಯಲ್ಲಿದ್ದು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತಹ ಕಾರ್ಡ್ ರದ್ದಾಗುತ್ತದೆ.
* ಒಂದು ಕುಟುಂಬಕ್ಕೆ ಒಂದು ರೇಷನ್ ಕಾರ್ಡ್ ಮಾತ್ರ ವಿತರಣೆ ಮಾಡಲಾಗುತ್ತಿದೆ ಆದರೆ ಕೆಲವರು ಅಕ್ರಮವಾಗಿ ಒಂದೇ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಬಳಸಲು ಆರಂಭಿಸಿದ್ದಾರೆ. ಈ ರೀತಿ ಮಾಡಿದರು ಅವರ ರೇಷನ್ ಕಾರ್ಡ್ ರದ್ದಾಗುತ್ತದೆ.
* ಕಳೆದ ಆರು ತಿಂಗಳಿಂದ ಪಡಿತರ ಪಡೆದುಕೊಳ್ಳದೆ ಇರುವವರ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ.
* ಸರ್ಕಾರ ತಿಳಿಸಿದ ಮಿತಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುತ್ತದೆ.
ನಿಮ್ಮ ಕೃಷಿ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡುತ್ತಿಲ್ವಾ? ಬಂತು ಹೊಸ ರೂಲ್ಸ್
ಈ ರೀತಿ ಮೇಲಿನ ಎಲ್ಲಾ ವಿಷಯಗಳು ಅನ್ವಯವಾಗುವ ಕುಟುಂಬಗಳು ಇನ್ನು ಮುಂದೆ ರೇಷನ್ ಕಾರ್ಡ್ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲಾ. ಹಿಂದಿನ ತಿಂಗಳಿನಿಂದ ಅನ್ನಭಾಗ್ಯ ಅಥವಾ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬರುತ್ತಿಲ್ಲವೇ? ಹಾಗಾದ್ರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿರಬಹುದು ಇದನ್ನ ಚೆಕ್ ಮಾಡಿಕೊಳ್ಳುವುದು ಹೇಗೆ ನೋಡಿ?
ಇಂತಹ ಮಹಿಳೆಯರಿಗೆ ಇನ್ಮುಂದೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆ ಹಣ! ಇಲ್ಲಿದೆ ಕಾರಣ
ರೇಷನ್ ಕಾರ್ಡ್ ರದ್ದು ಬಗ್ಗೆ ಮಾಹಿತಿ ಪಡೆಯುವುದು ಹೇಗೆ?
https://ahara.kar.nic.in/ ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಪಡಿತರ ಚೀಟಿ ಸ್ಥಿತಿ ಎನ್ನುವ ಮಾಹಿತಿಯ ಮೇಲೆ ಕ್ಲಿಕ್ ಮಾಡಿ ನಂತರ ಮೂರು ಲಿಂಕ್ ಕಾಣಿಸುತ್ತದೆ.
ಅದರಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಅದರ ಮೇಲ್ಭಾಗದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ ರೀತಿ ಮಾಡೋದ್ರಿಂದ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಜಿಲ್ಲೆ ಗ್ರಾಮ ಹೋಬಳಿ ಮೊದಲಾದ ಮಾಹಿತಿಯನ್ನು ನೀಡಿದರು ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಕಾಣಿಸುತ್ತದೆ.
3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರಾತ್ರೋ-ರಾತ್ರಿ ಕ್ಯಾನ್ಸಲ್! ಸರ್ಕಾರ ಖಡಕ್ ನಿರ್ಧಾರ
ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ರದ್ದುಪಡಿ ಆಗಿದ್ದರೆ ಅದಕ್ಕೆ ಕಾರಣವನ್ನು ಕೂಡ ತಿಳಿಸಿರುತ್ತಾರೆ. ಅದು ಸರಿಯಾದ ಕಾರಣ ಎಂದು ನಿಮಗೆ ಅನಿಸದೆ ಇದ್ದಲ್ಲಿ ಮತ್ತೆ ನಿಮ್ಮ ರೇಷನ್ ಕಾರ್ಡ್ ಪಡೆದುಕೊಳ್ಳಲು ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಬಹುದು.
Cancellation of ration cards of such people, No more Annabhagya Yojana money