ಇಂತಹ ಮಹಿಳೆಯರಿಗೆ ಇನ್ಮುಂದೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆ ಹಣ! ಇಲ್ಲಿದೆ ಕಾರಣ
ಕೆಲವು ಮಹಿಳೆಯರು ತಾವು ಅರ್ಜಿ ಸಲ್ಲಿಸಿದರು ನಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ತುಂಬಾನೇ ಸುದ್ದಿ ಆಗುತ್ತಿದೆ ಸಾಕಷ್ಟು ಮಹಿಳೆಯರು ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್ ಮೊದಲಾದ ಮನೆಗೆ ಅಗತ್ಯ ಇರುವ ಉಪಕರಣಗಳನ್ನು ಖರೀದಿ ಮಾಡಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ.
ಆದರೆ ಇದರ ಜೊತೆಗೆ ಇನ್ನೊಂದಿಷ್ಟು ಮಹಿಳೆಯರು ತಾವು ಅರ್ಜಿ ಸಲ್ಲಿಸಿದರು ನಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರಾತ್ರೋ-ರಾತ್ರಿ ಕ್ಯಾನ್ಸಲ್! ಸರ್ಕಾರ ಖಡಕ್ ನಿರ್ಧಾರ
ಎಂಟನೇ ಕಂತಿನ ಹಣ ಜಮಾ ಆಗಿದೆ ನಿಮ್ಮ ಖಾತೆಗೆ ಬಂದಿಲ್ವಾ?
ಹೌದು, ಗೃಹಲಕ್ಷ್ಮೀ ಯೋಜನೆಯ 8ನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ ಅಂದ್ರೆ ಮಹಿಳೆಯರು ಇಲ್ಲಿಯವರೆಗೆ 16,000ಗಳನ್ನ ಉಚಿತವಾಗಿ ತಮ್ಮ ಖಾತೆಯಲ್ಲಿ ಹೊಂದಲು ಸಾಧ್ಯವಾಗಿದೆ.
ಆದ್ರೂ ಸಾಕಷ್ಟು ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇರುವ ಕಾರಣದಿಂದ ಅಂಥವರ ಖಾತೆಗೆ ಹಣ ಜಮಾ ಆಗಿಲ್ಲ ಆದರೆ ಚಿಂತೆ ಬೇಡ ನೀವು ಈ ಚಿಕ್ಕ ಕೆಲಸ ಮಾಡಿಕೊಂಡರೆ ನಿಮ್ಮ ಖಾತೆಗೆ ಮುಂದಿನ ತಿಂಗಳಿನಿಂದ ತಪ್ಪದೆ ಹಣ ಜಮಾ ಆಗುತ್ತದೆ.
ಈ ಯೋಜನೆ ಅಡಿ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 800 ರೂಪಾಯಿ! ಬಂಪರ್ ಕೊಡುಗೆ
ಬ್ಯಾಂಕ್ ಖಾತೆ ಪರಿಶೀಲಿಸಿ! (Check your bank account)
ನೀವು ಯಾವುದಾದರೂ ಬ್ಯಾಂಕ್ ನಲ್ಲಿ ನಿಮ್ಮ ಉಳಿತಾಯ ಖಾತೆ ಹೊಂದಿದ್ದರೆ ಸಾಲುವುದಿಲ್ಲ ಮೊದಲನೆಯದಾಗಿ ಅದು ಆಕ್ಟಿವ್ ಆಗಿರಬೇಕು. ಅದರ ಜೊತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿರಬೇಕು. ಈಕೆವೈ ಸಿ ಮಾಡಿಸಿಕೊಳ್ಳದೆ ಇದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.
ಇನ್ನು ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಕೊಳ್ಳುವುದನ್ನು ಮರೆಯಬೇಡಿ. ಜೂನ್ 14ರ ವರೆಗೆ ಮಾತ್ರ ಅವಕಾಶ ಇದ್ದು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಿ. ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಹಳೆಯ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಅದರಿಂದ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗಲು ಸಾಧ್ಯವಿಲ್ಲ.
ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುವವರಿಗಾಗಿ ಸರ್ಕಾರದಿಂದ ಬಿಗ್ ಅಪ್ಡೇಟ್!
ಎನ್ ಪಿ ಸಿ ಐ ಮ್ಯಾಪಿಂಗ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ!
ಯು ಐ ಡಿ ಎ ಐ ನ ಅಧಿಕೃತ ವೆಬ್ಸೈಟ್ https://resident.uidai.gov.in/bank-mapper ಗೆ ಭೇಟಿ ನೀಡಿ ನೀವು ನಿಮ್ಮ ಆಧಾರ್ ಸೀಡಿಂಗ್ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆಯಬಹುದು. ನೀವು ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಆಗ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ (OTP) ನಮೂದಿಸಿದ ನಂತರ ನಿಮ್ಮ ಆಧಾರ್ – ಬ್ಯಾಂಕ್ ಮ್ಯಾಪಿಂಗ್ (Aadhar – Bank mapping) ಆಗಿದ್ಯೋ ಇಲ್ಲವೋ ಎನ್ನುವ ಮಾಹಿತಿಯನ್ನು ಪಡೆಯಬಹುದು.
ಗೃಹಲಕ್ಷ್ಮಿ ಜೊತೆಗೆ ಪ್ರತಿ ತಿಂಗಳು ಸಿಗಲಿದೆ ಇನ್ನೂ 1200 ರೂಪಾಯಿ ಹೆಚ್ಚಿಗೆ! ಇಲ್ಲಿದೆ ಮಾಹಿತಿ
Such women will no longer get Gruha Lakshmi Yojana money