ಗೃಹಲಕ್ಷ್ಮಿ ಜೊತೆಗೆ ಪ್ರತಿ ತಿಂಗಳು ಸಿಗಲಿದೆ ಇನ್ನೂ 1200 ರೂಪಾಯಿ ಹೆಚ್ಚಿಗೆ! ಇಲ್ಲಿದೆ ಮಾಹಿತಿ
ಈಗಾಗಲೇ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಹಿಳೆಯರು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಉಚಿತವಾಗಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಪ್ರತಿ ತಿಂಗಳು ಮಹಿಳೆಯರ ಖಾತೆಗೆ (Bank Account) ಜಮಾ ಆಗುತ್ತದೆ. ಇದರ ಜೊತೆಗೆ 1,200ಗಳನ್ನು ಪ್ರತಿ ತಿಂಗಳು ಮಾಸಾಶನವಾಗಿ ಪಡೆದುಕೊಳ್ಳಲು ಸಾಧ್ಯವಿದೆ.
ಸಂಧ್ಯಾ ಸುರಕ್ಷಾ ಯೋಜನೆ!
ಹಿರಿಯ ನಾಗರಿಕರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಬಜೆಟ್ ನಲ್ಲಿ ಕೋಟಿಗಟ್ಟಲೆ ರುಪಾಯಿಗಳನ್ನು ಈ ಯೋಜನೆಗಾಗಿ ಮೀಸಲಿಡಲಾಗುತ್ತೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಾವಿರದ ಎರಡು ನೂರು ರೂಪಾಯಿಗಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್; ಇನ್ಮುಂದೆ ಆನ್ಲೈನ್ ನಲ್ಲೆ ಸಿಗುತ್ತೆ ಎಲ್ಲಾ ಮಾಹಿತಿ
ಯಾರು ಅರ್ಜಿ ಸಲ್ಲಿಸಬಹುದು?
* ಸಂಧ್ಯಾ ಸುರಕ್ಷಾ ಯೋಜನೆಯ ಅಡಿಯಲ್ಲಿ ಸಣ್ಣ ರೈತರು, ಅತಿ ಸಣ್ಣ ರೈತರು, ಮೀನುಗಾರರು, ಕೃಷಿಕರು, ಅಸಂಘಟಿತ ವಲಯದ ಕಾರ್ಮಿಕರು ಮೊದಲದ 65 ವರ್ಷ ಮೇಲ್ಪಟ್ಟ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
* ಕುಟುಂಬದ ವಾರ್ಷಿಕ ವರಮಾನ 32 ಸಾವಿರದ ಒಳಗಿರಬೇಕು.
* ಗಂಡ ಹೆಂಡತಿ ಜಂಟಿ ಖಾತೆಯಲ್ಲಿ 10,000ಗಳಿಗಿಂತ ಹೆಚ್ಚಿನ ಎಫ್ ಡಿ ಇದ್ದವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
* ಈಗಾಗಲೇ ಪಿಂಚಣಿ (Pension) ಬರುತ್ತಿದ್ದರೆ ಅಂತವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
* ಗಂಡು ಮಕ್ಕಳು ಇದ್ದರೂ ಕೂಡ ತಂದೆ ತಾಯಿ ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್ ಬಗ್ಗೆ ಹೊರ ಬಿತ್ತು ಬಿಗ್ ಅಪ್ಡೇಟ್; ಇಂತಹವರಿಗೆ ಮಾತ್ರ ಸಿಗಲಿದೆ ಕಾರ್ಡ್
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್ ವಿವರ
ಮೊಬೈಲ್ ಸಂಖ್ಯೆ
ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸನ್ಸ್
ಗೃಹಲಕ್ಷ್ಮಿ ಯೋಜನೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಹೊಸ ಅಪ್ಡೇಟ್; ಎಲ್ಲಾ ಪೆಂಡಿಂಗ್ ಹಣ ಜಮಾ
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಯಾವುದೇ ಹತ್ತಿರದ ಬಾಪೂಜಿ ಕೇಂದ್ರ, ಗ್ರಾಮ ಒನ್, ಮೊದಲಾದ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅಥವಾ ತಹಶೀಲ್ದಾರರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿ ಸಲ್ಲಿಕೆ ಆಗಿ ಮುಂದಿನ ತಿಂಗಳಿನಿಂದ 1200 ಖಾತೆಗೆ ನೇರವಾಗಿ ಜಮಾ ಆಗುತ್ತದೆ.
In this scheme you will get 1200 more rupees every month
Our Whatsapp Channel is Live Now 👇