Karnataka NewsBangalore News

ಗೃಹಲಕ್ಷ್ಮಿ ಯೋಜನೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಹೊಸ ಅಪ್ಡೇಟ್; ಎಲ್ಲಾ ಪೆಂಡಿಂಗ್ ಹಣ ಜಮಾ

ಎಂಟನೇ ಕಂತಿನ ಗೃಹಲಕ್ಷ್ಮಿ (Gruha lakshmi scheme) ಯೋಜನೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಅಪ್ ಡೇಟ್ ನೀಡಿದ್ದಾರೆ. ಇನ್ನು ಮುಂದೆ ಪ್ರತಿಯೊಬ್ಬರಿಗೂ ಕೂಡ ಹಣ ಜಮಾ ಆಗುವಂತೆ ಮಾಡಲಾಗುವುದು ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಯಾರನ್ನ ಸಂಪರ್ಕಿಸಬೇಕು ಎನ್ನುವುದರ ಬಗ್ಗೆ ಕೂಡ ಮಾಹಿತಿಯನ್ನು ಒದಗಿಸಿದ್ದಾರೆ.

ಏಪ್ರಿಲ್ ತಿಂಗಳ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Gruha Lakshmi Yojana funds have been released, Check the women of this district

ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣದ ಬಗ್ಗೆ ಹೊಸ ಅಪ್ಡೇಟ್!

ಎಲ್ಲರಿಗೂ ತಿಳಿದಿರುವಂತೆ ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು, ಅದು ಅಲ್ಲದೆ ಗೃಹಲಕ್ಷ್ಮಿ ಯೋಜನೆಗೆ ಹೆಚ್ಚಿನ ಅನುದಾನವನ್ನು ಕೂಡ ಸರ್ಕಾರ ನೀಡಿದ್ದು ಪ್ರತಿ ತಿಂಗಳು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಎರಡು ಸಾವಿರ ರೂಪಾಯಿಗಳನ್ನು ಕಳೆದ ಎಂಟು ತಿಂಗಳಿನಿಂದ ಜಮಾ ಮಾಡಿಕೊಂಡು ಬಂದಿದೆ. ಹೀಗಾಗಿ ಹದಿನಾಲ್ಕರಿಂದ 16 ಸಾವಿರ ರೂಪಾಯಿಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ.

ಇನ್ನು ಸಾಕಷ್ಟು ಜನರ ಖಾತೆಗೆ ಹಣ ಬಂದಿಲ್ಲ, ಅರ್ಜಿ ಸಲ್ಲಿಕೆ ಆಗಿದೆ ಆದರೂ ನಮ್ಮ ಖಾತೆಗೆ ಮಾತ್ರ ಇದುವರೆಗೆ ಹಣ ಬಿಡುಗಡೆ ಆಗಿಲ್ಲ ಎನ್ನುವ ಬೇಸರ ಇದೆ, ಇದಕ್ಕೆ ಮಾನ್ಯ ಸಚಿವೆ ಸ್ಪಷ್ಟನೆಯನ್ನ ನೀಡಿದ್ದು ಯಾವುದೇ ಬ್ಯಾಂಕ್ ಖಾತೆಯಿಂದ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬಾರದೆ ಇದ್ದರೆ ತಕ್ಷಣ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿ. ಇದರಿಂದ ಹಣ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್

Gruha Lakshmi Yojanaನಿಮ್ಮ ಖಾತೆಗೆ ಯಾಕೆ ಹಣ ಬರುತ್ತಿಲ್ಲ?

ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ಆಧಾರ್ ಸೀಡಿಂಗ್ ಎನ್ನುವುದು ಬಹಳ ಮುಖ್ಯ. ಇದರ ಜೊತೆಗೆ ಈಕೆ ವೈ ಸಿ ಅಪ್ಡೇಟ್ ಕೂಡ ಆಗಬೇಕು. ಇದಕ್ಕಾಗಿ ನೀವು ಬ್ಯಾಂಕ್ ಶಾಖೆಗೆ ಹೋಗಿ ಸಿಬ್ಬಂದಿಗಳನ್ನ ಭೇಟಿ ಮಾಡಿ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಆಧಾರ್ ಕಾರ್ಡ್ ಅಪ್ಡೇಟ್ ಇಂದ ಹಿಡಿದು ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ (Active Bank Account) ಆಗಿರುವವರಿಗೆ ಡಿಜಿಟಲ್ ಆಗಿ ಹಣ ವರ್ಗಾವಣೆಗೆ ಯಾವೆಲ್ಲ ದಾಖಲೆಗಳನ್ನು ನೀಡಬೇಕು ಅವುಗಳನ್ನು ನೀವು ನೀಡಿ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಂಡರೆ ಮಿಸ್ ಆಗದೆ ನಿಮ್ಮ ಖಾತೆಗೆ ಹಣ ಬಿಡುಗಡೆ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂಥವರ ಖಾತೆಗೆ ಹಣ ಮಿಸ್ ಆಗೋದಿಲ್ಲ!

ಇನ್ನು ಈಗಾಗಲೇ ಸರ್ಕಾರ ಪೆಂಡಿಂಗ್ ಇರುವ ಹಣವನ್ನು ಕೂಡ ಬಿಡುಗಡೆ ಮಾಡುತ್ತಿದ್ದು ಅಂಚೆ ಕಚೇರಿಯಲ್ಲಿ (Post Office) ಹೊಸದಾಗಿ ಖಾತೆ ತೆರೆದವರಿಗೆ ಪೆಂಡಿಂಗ್ ಹಣ ಕೂಡ ಬಿಡುಗಡೆ ಆಗಿದೆ.

ಇನ್ನು ಮಹಿಳೆಯರಿಗೆ ವಿಶೇಷ ಸೂಚನೆಯನ್ನು ನೀಡಲಾಗಿದ್ದು ಆರು ಮತ್ತು ಏಳನೇ ಕಂತಿನ ಹಣ ಬಾರದೆ ಇರುವವರಿಗೆ 8ನೇ ಕಂತಿನ ಹಣದ ಜೊತೆಗೆ ಪೆಂಡಿಂಗ್ ಇರುವ ಹಣವನ್ನು ಬಿಡುಗಡೆ ಮಾಡಲಾಗುವುದು

ಅಂದರೆ ಒಟ್ಟಿಗೆ ಆರು ಸಾವಿರ ರೂಪಾಯಿಗಳನ್ನು ಎಂಟನೇ ಕಂತಿನ ಬಿಡುಗಡೆ ಸಮಯದಲ್ಲಿ ಪಡೆದುಕೊಳ್ಳಬಹುದು ಎಂದು ಸರ್ಕಾರ ಈ ಹಿಂದೆಯೇ ತಿಳಿಸಿತ್ತು. ಏಪ್ರಿಲ್ 20ನೇ ತಾರೀಖಿನ ಒಳಗೆ ಯಾವೆಲ್ಲ ಮಹಿಳೆಯರು ತಮ್ಮ ಖಾತೆಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಪಡಿಸಿಕೊಳ್ಳುತ್ತಾರೋ ಅಂತವರಿಗೆ ಎಂಟನೇ ಕಂತಿನ ಹಣ ಜಮಾ ಆಗುತ್ತದೆ.

ಇನ್ನು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರನ್ನು ಸಂಪರ್ಕಿಸಿ ಹಣಬಾರದೆ ಇರುವವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ತಿಳಿಸಿದೆ.

ಅನ್ನಭಾಗ್ಯ ಯೋಜನೆ ಹಣದ ಸ್ಟೇಟಸ್ ಚೆಕ್ ಮಾಡಲು ಹೊಸ ಡೈರೆಕ್ಟ್ ಲಿಂಕ್ ಇಲ್ಲಿದೆ

Gruha Lakshmi Yojana New Update, Deposit of all pending Money

Our Whatsapp Channel is Live Now 👇

Whatsapp Channel

Related Stories