ಗೃಹಲಕ್ಷ್ಮಿ ಯೋಜನೆ (Gruha lakshmi scheme) ಬಿಡುಗಡೆ ಆದಾಗಿನಿಂದ ಪ್ರತಿ ತಿಂಗಳು ಕೂಡ ಮಹಿಳೆಯರಿಗೆ ಹಣ ವರ್ಗಾವಣೆ ಆಗುತ್ತಿದೆ. ಪ್ರತಿ ತಿಂಗಳು 2000ಗಳಂತೆ ಇಲ್ಲಿಯವರೆಗೆ ಸುಮಾರು 14 ಸಾವಿರ ರೂಪಾಯಿಗಳು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ನೇರವಾಗಿ ಡಿ ಬಿ ಟಿ ಆಗಿದೆ.

ಇಷ್ಟೆಲ್ಲಾ ಆಗಿದ್ರು ಸಾಕಷ್ಟು ಮಹಿಳೆಯರು ತಮ್ಮ ಖಾತೆಗೆ ಹಣ ಬಂದಿಲ್ಲ ಅಂತ ದೂರುತ್ತಲೆ ಇದ್ದಾರೆ. ಯಾಕೆಂದರೆ ಅವರ ಖಾತೆಗೆ ಸಂಬಂಧಪಟ್ಟ ಸಾಕಷ್ಟು ವಿಷಯಗಳು ಅಪ್ಡೇಟ್ ಆಗಿಲ್ಲ ಅನ್ನೋದು ಸರ್ಕಾರದಿಂದ ಸಿಕ್ಕ ಮಾಹಿತಿ.

Gruha Lakshmi Yojana

ಹಾಗಾದ್ರೆ ನಿಜಕ್ಕೂ ಅಂತಹ ಮಹಿಳೆಯರ ಖಾತೆಗೆ ಸಂಬಂಧಪಟ್ಟಂತೆ ಯಾವ ಕೆಲಸಗಳು ಆಗಬೇಕು? ಏನು ಮಾಡಿದ್ರೆ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೂ ಹಣ ಬರುತ್ತೆ ಅನ್ನೋದನ್ನ ನೋಡೋಣ.

ಹೊಸ ರೇಷನ್ ಕಾರ್ಡ್ ಬಗ್ಗೆ ಹೊರ ಬಿತ್ತು ಬಿಗ್ ಅಪ್ಡೇಟ್; ಇಂತಹವರಿಗೆ ಮಾತ್ರ ಸಿಗಲಿದೆ ಕಾರ್ಡ್

* ಈಕೆ ವೈಸಿ ಕಡ್ಡಾಯ!

ಸರ್ಕಾರ ಇದನ್ನ ಮೊದಲೇ ತಿಳಿಸಿದೆ ನಿಮ್ಮಲ್ಲಿ ಬ್ಯಾಂಕ ಖಾತೆಯನ್ನು ಹೊಂದಿರುವ ಮಹಿಳೆಯರು ಈಕೆ ವೈ ಸಿ ಅಪ್ಡೇಟ್ (E-KYC update) ಮಾಡಿಸಿಕೊಳ್ಳಬೇಕು. ಅಂದ್ರೆ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಸಂಖ್ಯೆ ಎಲ್ಲವೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.

* ಆಧಾರ್ ಕಾರ್ಡ್ ಅಪ್ಡೇಟ್ ಆಗಬೇಕು!

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು 10 ವರ್ಷದ ಹಳೆಯ ಆಧಾರ್ ಕಾರ್ಡ್ ಹೊಂದಿದ್ದರೆ ತಕ್ಷಣ ಅಪ್ಡೇಟ್ ಮಾಡಿಕೊಳ್ಳಬೇಕು. ಇಲ್ಲವಾದರೆ ಇದು ಸರ್ಕಾರದ ಡೇಟಾಬೇಸ್ನಲ್ಲಿ ಅಪ್ಡೇಟ್ ಆಗಿರುವುದಿಲ್ಲ ಹಾಗೂ ಅಂತಹ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ.

* ದಾಖಲೆಗಳು ಮ್ಯಾಚ್ ಆಗುತ್ತಾ ಚೆಕ್ ಮಾಡಿ!

ಹೌದು, ಇದು ಕೂಡ ಬಹಳ ಮುಖ್ಯ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲೇ ಇರಬೇಕು. ಜೊತೆಗೆ ಆಕೆಯ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ಇರುವ ಸಂಖ್ಯೆ ಹೊಂದಾಣಿಕೆ ಆಗಬೇಕು ಒಂದು ವೇಳೆ ಒಂದಕ್ಕೊಂದು ಮ್ಯಾಚ್ ಆಗದೆ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಸಾಧ್ಯವೇ ಇಲ್ಲ.

ಇಂತಹ ಮಹಿಳೆಯರಿಗೆ ಸಿಗುತ್ತೆ 1,50,000 ರೂಪಾಯಿ! ಮಹತ್ವದ ಯೋಜನೆ ಘೋಷಿಸಿದ ಸರ್ಕಾರ

Gruha Lakshmi Yojanaಇನ್ನು ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದ್ರೆ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರದೆ ಇರಬಹುದು. ಅಂತಹ ಸಂದರ್ಭದಲ್ಲಿ ನೀವು ಬ್ಯಾಂಕ್ ಆಫ್ ಬರೋಡಾದಂತಹ ನ್ಯಾಷನಲ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆದರೆ ತಪ್ಪದೇ ನಿಮ್ಮ ಖಾತೆಗೂ ಇಲ್ಲಿಯವರೆಗೆ ಗೃಹಲಕ್ಷ್ಮಿ ಹಣ ಜಮಾ ಆಗದೇ ಇದ್ದರೂ ಮುಂದಿನ ತಿಂಗಳಿನಿಂದ ಹಣ ಬರುತ್ತದೆ.

ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವಂತೆ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು ಮಹಿಳೆಯರ ಖಾತೆಗೆ ಹಣ ಬಾರದೆ ಇದ್ರೆ ಮುತುವರ್ಜಿಯಿಂದ ಅವರ ಖಾತೆಗೆ ಹಣ ಬರುವಂತೆ ಪರಿಹಾರ ಸೂಚಿಸುತ್ತಾರೆ ಹಾಗಾಗಿ ಅವರ ಸಹಾಯ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಹೊಸ ಅಪ್ಡೇಟ್; ಎಲ್ಲಾ ಪೆಂಡಿಂಗ್ ಹಣ ಜಮಾ

ನಿಮ್ಮ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಿ!

* ಸೇವಾ ಸಿಂಧು ವೆಬ್ಸೈಟ್ನಲ್ಲಿ ಗೃಹಲಕ್ಷ್ಮಿ ಸ್ಥಿತಿ ತಿಳಿದುಕೊಳ್ಳಬಹುದು.

* ಮಾಹಿತಿ ಕಣಜ ವೆಬ್ಸೈಟ್ ಮೂಲಕ ರೇಷನ್ ಕಾರ್ಡ್ ಆಕ್ಟಿವ್ ಆಗಿದ್ಯೋ ಇಲ್ವೋ ಎನ್ನುವುದನ್ನು ತಿಳಿಯಬಹುದು.

* ಡಿ ಬಿ ಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ಗೃಹಲಕ್ಷ್ಮಿ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂಬುದನ್ನ ತಿಳಿಯಬಹುದು.

ಈ ರೀತಿ ಇದುವರೆಗೆ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಮೇಲೆ ತಿಳಿಸಲಾಗಿರುವ ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳಿ ಹಾಗೂ ಮುಂದಿನ ತಿಂಗಳಿನಿಂದ ತಪ್ಪದೆ ನಿಮ್ಮ ಖಾತೆಗೂ ಕೂಡ ಸರ್ಕಾರದಿಂದ 2000 ಜಮಾ ಆಗುತ್ತೆ ನೋಡಿ.

ಏಪ್ರಿಲ್ ತಿಂಗಳ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Big update about Gruha Lakshmi Yojana, all the information available in online