ಇಂತಹ ಮಹಿಳೆಯರಿಗೆ ಸಿಗುತ್ತೆ 1,50,000 ರೂಪಾಯಿ! ಮಹತ್ವದ ಯೋಜನೆ ಘೋಷಿಸಿದ ಸರ್ಕಾರ

ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Loan) ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದ್ದಾರೆ.

Bengaluru, Karnataka, India
Edited By: Satish Raj Goravigere

ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮಹಿಳೆಯರ ತೊಡಗಿಕೊಳ್ಳುವಿಕೆ ಇದ್ದೇ ಇರುತ್ತೆ. ಐಟಿ ಕ್ಷೇತ್ರ ಆಗಿರಬಹುದು. ವ್ಯಾಪಾರ, ವ್ಯವಹಾರ, ಬ್ಯಾಂಕಿಂಗ್ ಹೀಗೆ ಹೆಣ್ಣು ಮಕ್ಕಳು ಯಾವ ಕ್ಷೇತ್ರದಲ್ಲೂ ಇಲ್ಲ ಎನ್ನುವ ಹಾಗಿಲ್ಲ.

ಇನ್ನು ವ್ಯಾಪಾರ ಸ್ವಂತ ಉದ್ಯೋಗ (own business) ಎನ್ನುವ ವಿಷಯಕ್ಕೆ ಬಂದರೆ ಮಹಿಳೆಯರು ಇಂದು ಸ್ವಾವಲಂಬಿಯಾಗಿ ಜೀವನ (independence life of women) ನಡೆಸುತ್ತಿರುವುದು ಮಾತ್ರವಲ್ಲದೆ ಆರ್ಥಿಕವಾಗಿಯು ಪುರುಷರ ಸರಿ ಸಮಾನ ದುಡಿಯುತ್ತಿದ್ದಾರೆ. ಇದಕ್ಕೆ ಸರ್ಕಾರದ ಹಾಲು ಯೋಜನೆಗಳು ಪೂರಕವಾಗಿವೆ ಎಂದರೆ ಅತಿಶಯೋಕ್ತಿಯಲ್ಲ.

Under this new scheme of the government, women will get 800 Pension every month

ಗೃಹಲಕ್ಷ್ಮಿ ಯೋಜನೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಹೊಸ ಅಪ್ಡೇಟ್; ಎಲ್ಲಾ ಪೆಂಡಿಂಗ್ ಹಣ ಜಮಾ

ಮಹಿಳೆಯರಿಗಾಗಿಯೇ ಆರಂಭವಾಗಿರುವ ಉದ್ಯೋಗಿನಿ ಯೋಜನೆ! (Udyogini scheme)

ರಾಜ್ಯದಲ್ಲಿ ವಾಸಿಸುವ ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುವ ಸಲುವಾಗಿ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ (Central government) ಮತ್ತು ರಾಜ್ಯ ಸರ್ಕಾರ ಎರಡು ಸರ್ಕಾರಗಳು ಸೇರಿ ಸಬ್ಸಿಡಿಯನ್ನು ನೀಡುತ್ತವೆ. 3 ಲಕ್ಷ ರೂಪಾಯಿಗಳವರೆಗೆ ಯಾವುದೇ ಅಡಮಾನವಿಲ್ಲದೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಹಾಗೂ ಇದಕ್ಕೆ 50% ನಷ್ಟು ಸರ್ಕಾರ ಸಬ್ಸಿಡಿ ನೀಡುತ್ತದೆ.

ಉದ್ಯೋಗಿನಿ ಯೋಜನೆಯ ಬೆನಿಫಿಟ್ಸ್! (Benefits)

ಮಹಿಳೆಯರು ಸ್ವಂತ ಉದ್ಯಮ ಮಾಡುವುದರ ಮೂಲಕ ಕೈತುಂಬ ಹಣ ಸಂಪಾದನೆ ಮಾಡಬೇಕು ಎನ್ನುವ ಉದ್ದೇಶದಿಂದ ಉದ್ಯೋಗಿನಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಎಂದು ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Loan) ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದ್ದಾರೆ.

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳೆ ಸ್ವಂತ ಉದ್ಯಮ ಮಾಡುವುದಿದ್ದರೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಮೂರು ಲಕ್ಷ ರೂಪಾಯಿಗಳವರೆಗೆ ಅಡಮಾನ ರಹಿತ ಸಾಲ (Loan) ನೀಡಲಾಗುವುದು ಹಾಗೂ ಇದಕ್ಕೆ 50% ಸಬ್ಸಿಡಿ (subsidy) ಇರುವುದರಿಂದ ಮಹಿಳೆಯರು 3, ಸಾಲಕ್ಕೆ ಕೇವಲ 1,50,000ಗಳನ್ನು ಮಾತ್ರ ಪಾವತಿ ಮಾಡಿದರೆ ಸಾಕು.

ಏಪ್ರಿಲ್ ತಿಂಗಳ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Udyogini schemeಉದ್ಯೋಗಿನಿ ಸಾಲ ಪಡೆಯಲು ಬೇಕಾಗಿರುವ ಅರ್ಹತೆಗಳು! (Eligibility)

* ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
* ಒಂಟಿ ಮಹಿಳೆಯಾಗಿದ್ದರೆ ಅಥವಾ ಅಂಗವಿಕಲ ಮಹಿಳೆ ಆಗಿದ್ದರೆ ಅಂಥವರಿಗೆ ಆದಾಯದ ಮಿತಿ ಇಲ್ಲ.
* ಉದ್ಯೋಗಿನಿ ಸಾಲ ಪಡೆದುಕೊಳ್ಳಲು 18ರಿಂದ 55 ವರ್ಷ ಒಳಗಿನವರಾಗಿರಬೇಕು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಮೊದಲ ಆದ್ಯತೆ.
* ಈಗಾಗಲೇ ಸ್ವಂತ ಉದ್ಯಮ ಮಾಡುತ್ತಿರುವ ಮಹಿಳೆಯರು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳಬಹುದು ಅಥವಾ ಹೊಸದಾಗಿ ವ್ಯಾಪಾರ ಮಾಡುವವರು ಸಾಲ ಪಡೆದುಕೊಳ್ಳಬಹುದು ಆದರೆ ಈಗಾಗಲೇ ಸರ್ಕಾರದಿಂದ ಯಾವುದೇ ಯೋಜನೆಯ ಅಡಿಯಲ್ಲಿ ಸಾಲ ಪಡೆದು ಅದನ್ನ ಹಿಂತಿರುಗಿಸದೆ ಇದ್ದರೆ ಅಂತಹ ಮಹಿಳೆಯರಿಗೆ ಸಾಲ ಸಿಗುವುದಿಲ್ಲ.

ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂಥವರ ಖಾತೆಗೆ ಹಣ ಮಿಸ್ ಆಗೋದಿಲ್ಲ!

ಅರ್ಜಿ ಸಲ್ಲಿಸಲು ಇಷ್ಟು ದಾಖಲೆಗಳು ಸಾಕು! (Documents)

* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಪ್ಯಾನ್ ಕಾರ್ಡ್
* ಬ್ಯಾಂಕ್ ಖಾತೆ ವಿವರ
* ಪಾಸ್ಪೋರ್ಟ್ ಅಳತೆಯ ಫೋಟೋ
* ಉದ್ಯೋಗದ ಬಗ್ಗೆ ಮಾಹಿತಿ
* ಸ್ವಯಂ ಘೋಷಣಾ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
ಈ ಎಲ್ಲಾ ದಾಖಲೆಗಳು 2024ನೇ ಇಸ್ವಿಗೆ ಅನ್ವಯವಾಗುವಂತೆ ಇರಬೇಕು.

ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್

ಎಲ್ಲಿ ಅರ್ಜಿ ಸಲ್ಲಿಸಬೇಕು? (Where to apply)

ಹತ್ತಿರದ ಜಿಲ್ಲಾ ಅಥವಾ ತಾಲೂಕು ಮಹಿಳಾ ಅಭಿವೃದ್ಧಿ ಇಲಾಖೆಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿಯೂ ಕೂಡ ಸರ್ಕಾರದ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಸಿಬ್ಬಂದಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ.

Such women will get 1,50,000 rupees, government announced new Scheme