ಈ ಯೋಜನೆ ಅಡಿ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 800 ರೂಪಾಯಿ! ಬಂಪರ್ ಕೊಡುಗೆ
40 ರಿಂದ 64 ವರ್ಷದವರೆಗಿನ ಮಹಿಳೆಯರಿಗೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 800 ರೂಪಾಯಿಗಳ ಮಸಾಶನ (Pension) ನೀಡಲಾಗುವುದು.
ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ಜಾರಿಗೆ ತರುವ ಬಹುತೇಕ ಎಲ್ಲಾ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಜೀವನವನ್ನು ಪ್ರೇರೇಪಿಸುತ್ತಿದೆ ಎಂದು ಹೇಳಬಹುದು. ಹೌದು, ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಪುರುಷರಷ್ಟೇ ಮುಂದುವರೆದಿದ್ದರೂ ಕೂಡ ಸಾಕಷ್ಟು ಜನ ಎಂದಿಗೂ ಆರ್ಥಿಕವಾಗಿ ಹಿಂದುಳಿಯುವ ಪರಿಸ್ಥಿತಿ ಇದೆ ಅಂತಹ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸಿದೆ.
ಈಗ ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯ 2000 ಜೊತೆಗೆ ಮತ್ತೊಂದು ಯೋಜನೆಯ ಮೂಲಕ 800 ಗಳನ್ನು ಮಹಿಳೆಯರು ಪ್ರತಿ ತಿಂಗಳು ಪಡೆಯಬಹುದು.
ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುವವರಿಗಾಗಿ ಸರ್ಕಾರದಿಂದ ಬಿಗ್ ಅಪ್ಡೇಟ್!
ಮನಸ್ವಿನಿ ಯೋಜನೆ!
ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಜೊತೆಗೆ ಮನಸ್ವಿನಿ ಯೋಜನೆಗೂ ಸರ್ಕಾರ ಅನುದಾನ ಘೋಷಣೆ ಮಾಡಿದೆ. ಬಡವರ್ಗದ ಮಹಿಳೆಯರಿಗಾಗಿ ಈ ಯೋಜನೆ ಫಲಪ್ರದವಾಗಿದೆ.
40 ರಿಂದ 64 ವರ್ಷದವರೆಗಿನ ಮಹಿಳೆಯರಿಗೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 800 ರೂಪಾಯಿಗಳ ಮಸಾಶನ (Pension) ನೀಡಲಾಗುವುದು. ಇನ್ನು ಮನಸ್ವಿನಿ ಯೋಜನೆಯ ಅಡಿಯಲ್ಲಿ ಅವಿವಾಹಿತ ಮಹಿಳೆಯರು ಮತ್ತು ವಿಚ್ಛೇದಿತ ಮಹಿಳೆಯರು ಪ್ರಯೋಜನ ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಜೊತೆಗೆ ಪ್ರತಿ ತಿಂಗಳು ಸಿಗಲಿದೆ ಇನ್ನೂ 1200 ರೂಪಾಯಿ ಹೆಚ್ಚಿಗೆ! ಇಲ್ಲಿದೆ ಮಾಹಿತಿ
ಬೇಕಾಗುವ ದಾಖಲೆಗಳು
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ವಿಚೇದಿತರು ಅಥವಾ ಅವಿವಾಹಿತರು ಎನ್ನುವುದಕ್ಕೆ ಸ್ವಯಂ ಘೋಷಣಾ ಪ್ರಮಾಣ ಪತ್ರ
ಬ್ಯಾಂಕ ಖಾತೆಯ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
ಬಡತನ ರೇಖೆಗಿಂತ ಕೆಳಗಿರುವ 40 ವರ್ಷದಿಂದ 64 ವರ್ಷದ ವಿಚ್ಛೇದಿತ ಅಥವಾ ಅವಿವಾಹಿತ ಮಹಿಳೆಯರು ಪ್ರತಿ ತಿಂಗಳು 800 ಪಡೆದುಕೊಳ್ಳಲು ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್; ಇನ್ಮುಂದೆ ಆನ್ಲೈನ್ ನಲ್ಲೆ ಸಿಗುತ್ತೆ ಎಲ್ಲಾ ಮಾಹಿತಿ
Under this scheme, Such women will get 800 rupees every month