ಬಿಪಿಎಲ್ ಕಾರ್ಡುದಾರರಿಗೆ ಆತಂಕ; ಇಂಥವರಿಗೆ ಇನ್ಮುಂದೆ ಗ್ಯಾರಂಟಿ ಯೋಜನೆಯ ಹಣ ಬರಲ್ಲ!
ರೇಷನ್ ಕಾರ್ಡ್ (ration card) ಮಹತ್ವವನ್ನು ಪಡೆದುಕೊಂಡಿದೆ, ಆಧಾರ್ ಕಾರ್ಡ್ (Aadhaar Card) ನಂತರ ರೇಷನ್ ಕಾರ್ಡ್ ಕೂಡ ಬಹಳ ಮುಖ್ಯವಾಗಿರುವ ದಾಖಲೆ ಎನಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ (ration card) ಮಹತ್ವವನ್ನು ಪಡೆದುಕೊಂಡಿದೆ. ಆಧಾರ್ ಕಾರ್ಡ್ (Aadhaar Card) ನಂತರ ರೇಷನ್ ಕಾರ್ಡ್ ಕೂಡ ಬಹಳ ಮುಖ್ಯವಾಗಿರುವ ದಾಖಲೆ ಎನಿಸಿಕೊಂಡಿದೆ.
ಇಷ್ಟು ದಿನ ಪಡಿತರ ಚೀಟಿ ಎನ್ನುವುದು ಅಡ್ರೆಸ್ ಪ್ರೂಫ್ ಆಗಿ ಮತ್ತು ಪಡಿತರ ವಸ್ತುಗಳನ್ನು ಖರೀದಿ ಮಾಡಲು ಮಾತ್ರ ಉಪಯೋಗಕ್ಕೆ ಬರುತ್ತಿತ್ತು. ಆದರೆ ಈಗ ಸರ್ಕಾರದ ಗ್ಯಾರಂಟಿ ಯೋಜನೆ ಘೋಷಣೆ ಆದ ನಂತರ ಬಡವರಿಗೆ ಸರ್ಕಾರದಿಂದ ಸಿಗುವ ಉಚಿತ ಹಣವನ್ನು ಪಡೆದುಕೊಳ್ಳಲು ಕೂಡ ರೇಷನ್ ಕಾರ್ಡ್ ಬೇಕು
ಹೀಗಾಗಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಿಕೆ ಈಗ ಇರುವ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಹಾಗೂ ಈಗಾಗಲೇ ಸಲ್ಲಿಕೆ ಆಗಿರುವ ರೇಷನ್ ಕಾರ್ಡ್ ಪಡೆದುಕೊಳ್ಳುವುದು ಹೀಗೆ ಎಲ್ಲ ರೀತಿಯ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಪ್ರಕ್ರಿಯೆಗಳು ನಡೆಯುತ್ತಿವೆ.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! ಕೂಡಲೇ ಬ್ಯಾಂಕ್ ಹೋಗಿ ಅಪ್ಡೇಟ್ ಮಾಡಿಕೊಳ್ಳಿ
ಇಂಥವರ ರೇಷನ್ ಕಾರ್ಡ್ ರದ್ದು! (Ration card cancellation)
ಈಗಾಗಲೇ ಕೋಟ್ಯಾಂತರ ಜನ ರೇಷನ್ ಕಾರ್ಡ್ ಹೊಡೆದುಕೊಂಡಿದ್ದಾರೆ ಮತ್ತು ಅದರಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ ಆದರೆ ಸಾಕಷ್ಟು ಉಳ್ಳವರು.. ಅಂದ್ರೆ ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಇದನ್ನು ಆಹಾರ ಇಲಾಖೆ ಬಹಳ ಗಂಭೀರವಾಗಿ ಪರಿಗಣಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಸಾಕಷ್ಟು ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗುತ್ತಿದೆ. ಯಾರೆಲ್ಲಾ ರೇಷನ್ ಕಾರ್ಡ್ ಕಳೆದುಕೊಂಡಿದ್ದಾರೆ ನೋಡೋಣ.
* ಆದಾಯ ತೆರಿಗೆ ಪಾವತಿ ಮಾಡುವವರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅಂಥವರ ರೇಷನ್ ಕಾರ್ಡ್ ರದ್ದು
* ಕಳೆದ ಆರು ತಿಂಗಳ ಹಿಂದೆ ಪಡಿತರ ವಸ್ತು ಪಡೆದುಕೊಳ್ಳುತ್ತಿದ್ದಾರೆ ರೇಷನ್ ಕಾರ್ಡ್ ರದ್ದು
* ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಹೊಂದಿದ್ದರೆ ಅಂತಹ ಕುಟುಂಬಕ್ಕೆ ರೇಷನ್ ಕಾರ್ಡ್ ಸಿಗುವುದಿಲ್ಲ
* ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರ ರೇಷನ್ ಕಾರ್ಡ್ ರದ್ದು.
ಇಂಥವರ ರೇಷನ್ ಕಾರ್ಡ್ ರದ್ದು; ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಹಣವೂ ಬರಲ್ಲ!
ರದ್ದಾಗಿರುವ ರೇಷನ್ ಕಾರ್ಡ್ ಬಗ್ಗೆ ಮಾಹಿತಿ ಪಡೆಯುವುದು ಹೇಗೆ?
ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಗೆ ಭೇಟಿ ನೀಡಿ. ನಂತರ ಪಡಿತರ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಅದರ ಮೇಲ್ಭಾಗದಲ್ಲಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಜಿಲ್ಲೆ ಹೋಬಳಿ ಗ್ರಾಮ ಮೊದಲಾದವುಗಳನ್ನು ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ಒಂದು ಲಿಸ್ಟ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಗ್ರಾಮದಲ್ಲಿ ರದ್ದಾಗಿರುವ ಎಲ್ಲಾ ಪಡಿತರ ಚೀಟಿದಾರರ ಹೆಸರು ರದ್ದಾಗಿರುವ ಬಗ್ಗೆ ಕಾರಣ ತಿಳಿಸಿರುತ್ತಾರೆ.
ನಿಮ್ಮ ಕೃಷಿ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡುತ್ತಿಲ್ವಾ? ಬಂತು ಹೊಸ ರೂಲ್ಸ್
ಒಂದು ವೇಳೆ ನಿಮ್ಮ ಹೆಸರು ಇದ್ದು ನೀವು ಸರ್ಕಾರದ ಮಾನದಂಡದ ಒಳಗೆ ಬರುವವರಾಗಿದ್ದರೆ ತಾಂತ್ರಿಕ ದೋಷದಿಂದ ಹೀಗೆ ಆಗಿರಬಹುದು. ಅಂತಹ ಸಂದರ್ಭದಲ್ಲಿ ನೀವು ಆಹಾರ ಇಲಾಖೆಗೆ ಹೋಗಿ ನಿಮ್ಮ ಹೆಸರನ್ನು ಮತ್ತೆ ಸೇರ್ಪಡೆ ಮಾಡಿಸಿಕೊಳ್ಳಬಹುದು.
ರೇಷನ್ ಕಾರ್ಡ್ ರದ್ದಾದರೆ ಸರಕಾರದಿಂದ ಬಿಡುಗಡೆ ಆಗುತ್ತಿರುವ ಅನ್ನಭಾಗ್ಯ ಯೋಜನೆಯ (Annabhagya Scheme) ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ಸಿಗುವುದಿಲ್ಲ. ಹಾಗೆ ಒಮ್ಮೆ ನಿಮ್ಮ ರೇಷನ್ ಕಾರ್ಡ್ ರದ್ದಾದರೆ ಮತ್ತೆ ಪಡೆದುಕೊಳ್ಳುವುದು ಸಾಧ್ಯವಿಲ್ಲ.
BPL card holders will no longer get guarantee scheme money