ಇದ್ದಕ್ಕಿದ್ದಂತೆ ಇಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಿದ ರಾಜ್ಯ ಸರ್ಕಾರ! ಕಾರಣ ಇಲ್ಲಿದೆ
ಈಗಾಗಲೇ ಸಾಕಷ್ಟು ರೇಷನ್ ಕಾರ್ಡ್ ರದ್ದುಪಡಿ (ration card cancellation) ಮಾಡಲಾಗಿದೆ, ಜೊತೆಗೆ ಒಂದಷ್ಟು ರೇಷನ್ ಕಾರ್ಡ್ ಗಳನ್ನು ಅಮಾನತು ಮಾಡಲಾಗಿದೆ.
ರೇಷನ್ ಕಾರ್ಡಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಅಪ್ಡೇಟ್ ನೀಡುತ್ತಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಯಾವುದೇ ಗ್ಯಾರೆಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದಾದರೆ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತೆ.
ಅದರಲ್ಲೂ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿ ಇದ್ದರೆ ಮಾತ್ರ ಗೃಹಲಕ್ಷ್ಮಿ (Gruha lakshmi scheme) ಯೋಜನೆಯ ಹಣ ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಿದೆ. ಹೀಗಾಗಿ ರೇಶನ್ ಕಾರ್ಡ್ ಗೆ ಸಂಬಂಧಪಟ್ಟ ಬದಲಾವಣೆಗಳನ್ನು ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ!
ರಾಜ್ಯದಲ್ಲಿ ರೇಷನ್ ಕಾರ್ಡ್ ಬೇಡಿಕೆ ಹೆಚ್ಚಾಗುತ್ತಿದೆ!
ರಾಜ್ಯದಲ್ಲಿ ಸುಮಾರು 1.27 ಕೋಟಿ ಅಧಿಕ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ಸುಮಾರು 4.37 ಕೋಟಿಗು ಅಧಿಕ ಫಲಾನುಭವಿಗಳಿದ್ದಾರೆ. ಆದರೆ ಸುಮಾರು ಕಳೆದ ಆರು ತಿಂಗಳಿನಿಂದ ಮೂರು ಲಕ್ಷಕ್ಕೂ ಅಧಿಕ ಜನರು ಪಡಿತರ ವಸ್ತುಗಳನ್ನು ಖರೀದಿ ಮಾಡದೆ ಇರುವ ಹಿನ್ನೆಲೆಯಲ್ಲಿ ಅಂತವರ ರೇಷನ್ ಕಾರ್ಡ್ ರದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಸಾಕಷ್ಟು ರೇಷನ್ ಕಾರ್ಡ್ ರದ್ದುಪಡಿ (ration card cancellation) ಮಾಡಲಾಗಿದೆ, ಜೊತೆಗೆ ಒಂದಷ್ಟು ರೇಷನ್ ಕಾರ್ಡ್ ಗಳನ್ನು ಅಮಾನತು ಮಾಡಲಾಗಿದ್ದು ಸರಿಯಾದ ಕಾರಣಗಳನ್ನು ನೀಡಿ ಆ ರೇಶನ್ ಕಾರ್ಡ್ ಹಿಂಪಡೆಯಲು ಸಾಧ್ಯವಿದೆ.
ಗೃಹಜ್ಯೋತಿ ಯೋಜನೆ ಇದ್ರೂ ಕರೆಂಟ್ ಬಿಲ್ ಬರ್ತಾಯಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯೋ ಇಲ್ವೋ ತಿಳಿದುಕೊಳ್ಳಿ!
* ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://ahara.kar.nic.in/Home/EServices ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ಮೇಲ್ಭಾಗದ ಎಡ ಮೂಲೆಯಲ್ಲಿ ಮೂರು ಲೈನ್ಗಳು ಕಾಣುತ್ತವೆ ಅದರ ಮೇಲೆ ಕ್ಲಿಕ್ ಮಾಡಿ.
* ಈಗ ತಡೆ ಹಿಡಿಯಲಾದ ಅಥವಾ ರದ್ದುಪಡಿ ಮಾಡಲಾದ ಪಡಿತರ ಚೀಟಿ ಎನ್ನುವ ಆಯ್ಕೆ ಮಾಡಿ.
* ನಂತರ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಲಿಂಕ್ ಇರುತ್ತದೆ ಯಾವ ಜಿಲ್ಲೆ ಎಂಬುದನ್ನು ಆಯ್ಕೆ ಮಾಡಿ ಅದರ ಮೇಲ್ಭಾಗದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರೇ ಮೊದಲು ಅಕೌಂಟ್ ಚೆಕ್ ಮಾಡಿಕೊಳ್ಳಿ!
* ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ನೀವು ನಿಮ್ಮ ಜಿಲ್ಲೆ, ಗ್ರಾಮ, ಹೋಬಳಿ ಮೊದಲಾದಗಳನ್ನು ಫಿಲ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಅಥವಾ ನಿಮ್ಮ ಸುತ್ತಲಿನ ಪ್ರದೇಶದಲ್ಲಿ ರದ್ದಾಗಿರುವ ಎಲ್ಲಾ ರೇಷನ್ ಕಾರ್ಡ್ ಹೆಸರನ್ನು ತೋರಿಸುತ್ತದೆ ಮತ್ತು ಕಾರಣಗಳನ್ನು ಕೊಡಲಾಗಿರುತ್ತದೆ. ಇಲ್ಲಿ ನಿಮ್ಮ ಹೆಸರು ಇದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದು ಅರ್ಥ
The state government has canceled the BPL Ration card of such people