ಮೊಬೈಲ್ ಗೆ ಈ ಗೃಹಲಕ್ಷ್ಮಿ ಮೆಸೇಜ್ ಬಂತಾ? ಬಂದಿದ್ರೆ ಮಾತ್ರ ಹಣ ಜಮೆ ಆದಂತೆ ಲೆಕ್ಕ, ಈಗಲೇ ಚೆಕ್ ಮಾಡಿ

ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಕಾಯುತ್ತಿದ್ದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಮೊನ್ನೆ ಅಧಿಕೃತವಾಗಿ ಮೈಸೂರಿನಲ್ಲಿ ಚಾಲನೆಯಾಗಿದೆ. ರಾಹುಲ್ ಗಾಂಧಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರು, ಸಿಎಂ ಸಿದ್ದರಾಮಯ್ಯ ಅವರು ಹಾಗೂ ಇನ್ನಿತರ ಮುಖಂಡರ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದೆ.
ಎರಡು ಮೂರು ಸಾರಿ ಈ ಯೋಜನೆ ಜಾರಿಗೆ ಬರುವ ದಿನಾಂಕ ಮುಂದಕ್ಕೆ ಹೋಗಿ ಕೊನೆಗೂ ಈಗ ಜಾರಿಯಾಗಿದೆ. ಎಲ್ಲಾ ಗೃಹಲಕ್ಷ್ಮಿಯರು ಕೂಡ ತಮ್ಮ ಬ್ಯಾಂಕ್ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ಅವರಿಗೆಲ್ಲಾ ಈಗ ಒಂದು ಹೊಸ ಅಪ್ಡೇಟ್ (Gruha Lakshmi Yojana Update) ಸಿಕ್ಕಿದೆ.
ಗೃಹಲಕ್ಷ್ಮಿ ಯೋಜನೆಗೆ ದೊಡ್ಡ ಮಟ್ಟದಲ್ಲಿ ಚಾಲನೆ ಸಿಕ್ಕಿದ್ದಾಗಿದೆ. ಈ ಯೋಜೆನಯು ಮನೆಯನ್ನು ನಡೆಸುವ ಎಲ್ಲಾ ಯಜಮಾನಿಯರು ಆರ್ಥಿಕವಾಗಿ ಸದೃಢರಾಗಿ ಇರಬೇಕು ಎಂದು ಶುರುವಾದ ಯೋಜನೆ ಆಗಿದ್ದು, ಸುಮಾರು 1.10 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ದರು.
ಹೊಸ ಸ್ಕೀಮ್! ಫ್ರೀ ಬಸ್ ಜೊತೆಗೆ ಬೆಂಗಳೂರಿನ ಜನರಿಗೆ ಮತ್ತೊಂದು ಉಚಿತ ಯೋಜನೆ ತಂದಿದೆ ಸರ್ಕಾರ
ಅವರಿಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ ₹2000 ರೂಪಾಯಿ ಬ್ಯಾಂಕ್ ಗೆ ಜಮೆ (Bank Transfer) ಆಗಲಿದೆ. ಇನ್ನು ಎಲ್ಲಾ ಮಹಿಳೆಯರು ಕೂಡ ತಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ಮೊನ್ನೆ ಯೋಜನೆಗೆ ಚಾಲನೆ ಸಿಕ್ಕ ದಿನವೇ ಗೃಹಲಕ್ಷ್ಮಿ ಯೋಜನೆಯ ಹಣ ಹೆಣ್ಣುಮಕ್ಕಳ ಬ್ಯಾಂಕ್ ಖಾತೆಗೆ ಕ್ರೆಡಿಟ್ (Bank Account Credit) ಆಗಿದೆ ಎಂದು ಮಾಹಿತಿ ಸಿಕ್ಕಿದೆ.
ಆದರೂ ಇನ್ನೂ ಕೆಲವು ಮಹಿಳೆಯರಿಗೆ ಇನ್ನೂ ಈ ಹಣ ತಲುಪಿಲ್ಲ, ಕಾರಣ ಬ್ಯಾಂಕ್ ನಿಂದ ಇಂತಿಷ್ಟು ಜನರಿಗೆ ಎಂದು ಪ್ರತಿ ದಿನ ಡೆಪಾಸಿಟ್ (Money Deposit) ಮಾಡಲಾಗುತ್ತಿದೆ. ಆದ್ದರಿಂದ ನಿಮಗಿನ್ನೂ ಯೋಜನೆಯ ಹಣ ಬಂದಿಲ್ಲವಾದರೆ ಗೊಂದಲಗೊಳ್ಳದೆ ಎರಡು ಮೂರೂ ದಿನ ಕಾಯಿರಿ.
ಇಲ್ಲಿ ಒಂದು ಮುಖ್ಯವಾದ ವಿಚಾರ ಇದ್ದು, ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಹಣ ಜಮೆ ಆಗಿಲ್ಲ. ಆಗಸ್ಟ್ 15ರ ಒಳಗೆ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿರುವವರಿಗೆ ಮಾತ್ರ ಅವರ ಬ್ಯಾಂಕ್ ಅಕೌಂಟ್ ಗೆ ಹಣ ಜಮೆ ಆಗಿದೆ.
ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಿರುವ 25 ಲಕ್ಷ ಜನರಿಗೆ ಮಾತ್ರ ಸಿಗಲಿದೆ ಈ ಯೋಜನೆಯ ಫಲ

ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ನಿಮ್ಮ ಮೊಬೈಲ್ ಗೆ ಈ ರೀತಿಯ ಒಂರು ಮೆಸೇಜ್ (Mobile Message) ಬಂದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಅಕೌಂಟ್ ಗೆ ಬಂದಿದೆ ಎಂದು ಅರ್ಥ ಎಂದು ಹೇಳಲಾಗುತ್ತಿದೆ.
ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಮೂಲಕ ಹಣ ಪಡೆಯುತ್ತಿರುವ ಫಲಾನುಭವಿಗಳ ಮೊಬೈಲ್ ನಂಬರ್ ಗೆ ಒಂದು ಮೆಸೇಜ್ ಕಳಿಸುತ್ತಿದೆ, “ಅಭಿನಂದನೆಗಳು. ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ GL -XXXX ಅನ್ನು ಅನುಮೋದಿಸಲಾಗಿದೆ. ಆಗಸ್ಟ್ 2023 ರಿಂದ ರೂ. 2000 ಮೊತ್ತವನ್ನು ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಧನ್ಯವಾದಗಳು – ನಿಮ್ಮ ಕರ್ನಾಟಕ ಸರ್ಕಾರ” ಎಂದು ಮೆಸೇಜ್ ಕಳಿಸಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆ ಚಾಲನೆಗೂ ಮೊದಲೇ ರೇಷನ್ ಕಾರ್ಡ್ ಇಲ್ಲದವರಿಗೆ, ಇನ್ನೂ ಅರ್ಜಿ ಸಲ್ಲಿಸದವರಿಗೆ ಸಿಹಿ ಸುದ್ದಿ
ಈ ಒಂದು ಮೆಸೇಜ್ (Mobile Message) ಬಂದಿದ್ದರೆ ಮಾತ್ರ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಜಮೆ ಆಗಿದೆ ಎಂದು ಆರ್ಥ.
ನಿಮ್ಮ ಅಕೌಂಟ್ ಗೆ ಹಣ ಬಂದಿದೆಯಾ ಇಲ್ಲವಾ ಎನ್ನುವುದನ್ನು ಚೆಕ್ ಮಾಡುವುದಕ್ಕೆ ಮತ್ತೊಂದು ವಿಧಾನ ಕೂಡ ಇದೆ. ನಿಮ್ಮ ಮೊಬೈಲ್ ಮೂಲಕವೇ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ಯಾ ಇಲ್ಲವ ಎನ್ನುವುದನ್ನು ಚೆಕ್ ಮಾಡಬಹುದು.
DBT ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ (Download App) ಮಾಡಬಹುದು. ಈ ಅಪ್ಲಿಕೇಶನ್ ಮೂಲಕ ಕೂಡ ಚೆಕ್ ಮಾಡಬಹುದು. ಒಂದು ವೇಳೆ ನೀವು ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ, ಇಂದೇ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಕೊನೆಯ ದಿನಾಂಕ ನಿಗದಿ ಮಾಡಿಲ್ಲ.
Check Gruha Lakshmi Scheme Money Credited Message in Your Mobile
ನಾಳೆಯ ದಿನ ಭವಿಷ್ಯ: 11-11-2026, ಬುಧವಾರ
Read the story
ಹಾಸನಾಂಬೆ ದರ್ಶನದ ಅವಧಿ ವಿಸ್ತರಣೆ; ಬಿಗ್ ಅಪ್ಡೇಟ್
Read the story
ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮುಕ್ತಾಯ; ಲಕ್ಷಾಂತರ ಕಾರ್ಡುಗಳು ರದ್ದು
Read the story
ಕರ್ನಾಟಕ ಬರ ಪರಿಹಾರ ಹಣದಲ್ಲೂ ಕತ್ತರಿ
Read the story
KSRTC ಲಗೇಜ್ ಶುಲ್ಕ ಹೆಚ್ಚಳ; ಇಂದಿನಿಂದಲೇ ಹೊಸ ದರ ಜಾರಿ
Read the story
ಪಿಎಂ ಕಿಸಾನ್ ಹಣ ಇನ್ನೂ ಬಂದಿಲ್ವ? ತಕ್ಷಣ ಈ ಕೆಲಸ ಮಾಡಿ
Read the story



