ಬಿಪಿಎಲ್ ಕಾರ್ಡ್ ರದ್ದು, ಬಡವರಿಗೆ ಅನ್ಯಾಯವಾಗಲು ಬಿಡಲ್ಲ; ಸಿದ್ದರಾಮಯ್ಯ
ತೆರಿಗೆದಾರರನ್ನು ಹೊರತುಪಡಿಸಿ ಯಾರನ್ನೂ ಬಿಪಿಎಲ್ ಕಾರ್ಡ್‌ನಿಂದ ತೆಗೆಯದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
- ಬಡವರ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ
- ಬಡವರ ಬಗ್ಗೆ ಬಿಜೆಪಿ ಕಾಳಜಿ ಇಲ್ಲ ಎಂದು ಸಿದ್ದರಾಮಯ್ಯ ಟೀಕೆ
- 7 ಕೆಜಿ ಅಕ್ಕಿ ಉಚಿತ ಕೊಟ್ಟಿದ್ದು ನಮ್ಮ ಸರ್ಕಾರ, 5 ಕೆಜಿಗೆ ಇಳಿಸಿದ್ದ ಯಡಿಯೂರಪ್ಪ
ಮೈಸೂರು (Mysuru): ಸರ್ಕಾರಿ ನೌಕರರು ಮತ್ತು ತೆರಿಗೆದಾರರನ್ನು ಹೊರತುಪಡಿಸಿ ಯಾರನ್ನೂ ಬಿಪಿಎಲ್ ಕಾರ್ಡ್‌ನಿಂದ (BPL Ration Card) ತೆಗೆಯದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜಕೀಯ ಲಾಭಕ್ಕಾಗಿ ಬಿಜೆಪಿ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಹೇಳುತ್ತಿದೆ ಎಂದರು.
ಬಡವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿದ್ದು ನಮ್ಮ ಸರಕಾರ ಎಂದರು. 7 ಕೆಜಿ ಇದ್ದ 5 ಕೆಜಿಗೆ ಇಳಿಸಿದ್ದು ಯಡಿಯೂರಪ್ಪ ಸರಕಾರ ಎಂದು ನೆನಪಿಸಿದರು.
CM Siddaramaiah Criticizes BJP Over BPL Card