ಈ ಜಿಲ್ಲೆಯ ಕರ್ನಾಟಕ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ಖಾತೆ ಚೆಕ್ ಮಾಡಿಕೊಳ್ಳಿ
2024ರ ಮುಂಗಾರು ಹಂಗಾಮಿಗೆ ಸಂಬಂಧಿಸಿದ ಬೆಳೆ ವಿಮೆ ಹಣವನ್ನು ಧಾರವಾಡ ಜಿಲ್ಲೆಯ ಅರ್ಹ ರೈತರಿಗೆ ಬಿಡುಗಡೆ ಮಾಡಲಾಗಿದೆ. ಇನ್ನು ಮುಂಗಾರು 2025ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

- ಧಾರವಾಡದ ರೈತರಿಗೆ ₹30 ಕೋಟಿ ನೇರ ವರ್ಗಾವಣೆ
- “Samrakshane” ವೆಬ್ಸೈಟ್‌ನಲ್ಲಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು
- ಈ ವರ್ಷದ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು Grama One/Karnataka One ಕೇಂದ್ರಕ್ಕೆ ಭೇಟಿ ನೀಡಿ
ಧಾರವಾಡ ಜಿಲ್ಲೆಯ ಕುಂದಗೋಳ ಮತ್ತು ಶಿರಗುಪ್ಪಿ ಹೋಬಳಿಗಳ, ಬೆಳೆಗೆ ವಿಮೆ ಮಾಡಿಕೊಂಡಿದ್ದ ರೈತರ ಖಾತೆಗೆ ₹30 ಕೋಟಿ ಮೊತ್ತದ Crop Insurance Amount ನೇರವಾಗಿ ಜಮೆಯಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ X (Twitter) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೊದಲು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ತಾಂತ್ರಿಕ ಕಾರಣ ನೀಡಿ ಪರಿಹಾರ ತಡವಾಗಿತ್ತು.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಮಹಿಳೆಯರಿಗೆ 35 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ
DLJC (District Level Joint Committee) ಸಭೆಯಲ್ಲಿ ಈ ಸಮಸ್ಯೆ ಎತ್ತಿಕೊಂಡ ಬಳಿಕ, ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚವ್ಹಾಣ್ ಅವರ ನೇತೃತ್ವದಲ್ಲಿ ಮುಂದಿನ ಹಂತದ ಚರ್ಚೆಗಳು ನಡೆದವು. ಬಳಿಕ ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಈಗ ನಗದು ಜಮೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ರೈತರಿಗೆ ಎಚ್ಚರಿಕೆ: ಮಧ್ಯವರ್ತಿಗಳಿಗೆ ಹಣ ನೀಡಬೇಡಿ
ಈ ಸಂದರ್ಭದಲ್ಲಿ ಕೆಲವು ಮಧ್ಯವರ್ತಿಗಳು “ನಾವು ವಿಮೆ ಬಿಡುಗಡೆ ಮಾಡಿಸಿದ್ದೇವೆ” ಎಂದು ಹೇಳಿ ರೈತರಿಂದ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಯಲ್ಲಿ ರೈತರು ಯಾರಿಗೂ ಹಣ ನೀಡುವ ಅವಶ್ಯಕತೆ ಇಲ್ಲ. ಯಾವುದೇ ಸಮಸ್ಯೆ ಇದ್ದರೆ ಜಿಲ್ಲಾಧಿಕಾರಿ ಅಥವಾ ಕೃಷಿ ಅಧಿಕಾರಿಗಳ ಸಂಪರ್ಕ ಮಾಡಬಹುದು.
ಇದನ್ನೂ ಓದಿ: ಕರ್ನಾಟಕ ರೈತರ ಮಕ್ಕಳಿಗೆ ಬಂಪರ್ ಸುದ್ದಿ! ತಿಂಗಳಿಗೆ 1,000 ರೂಪಾಯಿ ಶಿಷ್ಯವೇತನ
ನಿಮ್ಮ ವಿಮೆ ಹಣ ಜಮೆಯಾಗಿದೆಯಾ? ತಪಾಸಣೆ ಹೀಗೆ:
2024ರ ವಿಮೆ ಅಥವಾ ಹಿಂದಿನ ವರ್ಷಗಳ Bele Vime Status ಪರಿಶೀಲಿಸಲು, ರೈತರು ಸಂರಕ್ಷಣೆ ವೆಬ್ಸೈಟ್ (https://www.samrakshane.karnataka.gov.in/) ಬಳಸಿ ತಮಗೆ ಹಣ ಜಮೆಯಾಗಿದೆಯೇ ಎಂಬುದನ್ನು ನೋಡಬಹುದಾಗಿದೆ. ಅದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ:
- ವೆಬ್ಸೈಟ್ ತೆರೆಯಿರಿ ಮತ್ತು ವರ್ಷ ಹಾಗೂ ಋತು ಆಯ್ಕೆ ಮಾಡಿ.
- “Farmers > Check Status” ಆಯ್ಕೆ ಮಾಡಿ.
- ನಿಮ್ಮ ಮೊಬೈಲ್ ನಂಬರ್ ಅಥವಾ ಅರ್ಜಿ ಸಂಖ್ಯೆ ನಮೂದಿಸಿ, ಕ್ಯಾಪ್ಚಾ ಹಾಕಿ “Search” ಒತ್ತಿ.
- “UTR Details” ವಿಭಾಗದಲ್ಲಿ ವಿಮೆ ಹಣದ ವಿವರಗಳು ತೋರಿಸುತ್ತವೆ. ಇಲ್ಲದಿದ್ದರೆ “No Data Found” ಎನ್ನುತ್ತದೆ.
ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆ! ಯೆಲ್ಲೊ ಅಲರ್ಟ್
2025ರ ಬೆಳೆ ವಿಮೆಗೆ ಅರ್ಜಿ ಹೇಗೆ ಸಲ್ಲಿಸಬೇಕು?
ಈ ವರ್ಷದ Kharif Season ಬೆಳೆ ವಿಮೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ರೈತರು ತಮ್ಮ ಹತ್ತಿರದ Grama One ಅಥವಾ Karnataka One ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ (Raitha Samparka Kendra) ಸಂಪರ್ಕಿಸಿ.
Crop Insurance Credited to Dharwad Farmers




