ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಾರದು ಅಂದ್ರೆ ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ! ದಿನಕ್ಕೊಂದು ಹೊಸ ರೂಲ್ಸ್

ನಿಮ್ಮ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದನ್ನು ಕೂಡ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನೀವು ಸೆಪ್ಟೆಂಬರ್ 30ರ ಒಳಗೆ ಆಧಾರ್ ಸೀಡಿಂಗ್ ಮಾಡಿಸಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ.

ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ (Annabhagya Scheme) ಕೂಡ ಒಂದು, ಈ ಯೋಜನೆಯಲ್ಲಿ 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿ ಅಕ್ಕಿಯ ಹಣ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

ಹಾಗಾಗಿ ರೇಷನ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದ ಹಾಗೆ ಸರ್ಕಾರ ಈಗ ಕೆಲವು ಹೊಸ ನಿಯಮಗಳನ್ನು ತಂದಿದ್ದು, ಸೆಪ್ಟೆಂಬರ್ 30ರ ಒಳಗೆ ನೀವು ಈ ಒಂದು ಕೆಲಸವನ್ನು ಮಾಡಲೇಬೇಕಾಗುತ್ತದೆ.

ರಾಜ್ಯ ಸರ್ಕಾರವು ಎಲ್ಲಾ ಜನರಿಗಾಗಿ ರೇಷನ್ ಕೊಡುತ್ತದೆ, ಈ ರೇಷನ್ ಕಾರ್ಡ್ ಪಡೆಯುವುದಕ್ಕೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (Pan Card), ಮತ್ತು ವೋಟರ್ ಐಡಿ (Voter ID) ಹೊಂದಿರುವುದು ಮುಖ್ಯ, ಅದೇ ರೀತಿ ಉಚಿತವಾಗಿ ರೇಷನ್ ಪಡೆಯಲು ರೇಷನ್ ಕಾರ್ಡ್ ಹೊಂದಿರುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಾರದು ಅಂದ್ರೆ ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ! ದಿನಕ್ಕೊಂದು ಹೊಸ ರೂಲ್ಸ್ - Kannada News

ಅಪ್ಲೈ ಮಾಡಿದ ಎಲ್ಲರಿಗೂ ಸಿಗುತ್ತಾ ಗೃಹ ಲಕ್ಷ್ಮಿ ಯೋಜನೆ ಹಣ? ಸ್ವತಃ ಸಿದ್ದರಾಮಯ್ಯನವರೇ ಕೊಟ್ರು ಅಪ್ಡೇಟ್

ರೇಷನ್ ಕಾರ್ಡ್ ಇದ್ದರೆ ಮಾತ್ರ ರಾಜ್ಯ ಸರ್ಕಾರದಿಂದ ಉಚಿತವಾಗಿ ರೇಷನ್ ಪಡೆಯಲು ಸಾಧ್ಯವಾಗುತ್ತದೆ. ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಒದಗಿಸುತ್ತಿದೆ.

ನಿಮಗೆ ಸರ್ಕಾರದಿಂದ ರೇಷನ್ ಕಾರ್ಡ್ ಸಿಕ್ಕ ಬಳಿಕ, ನಿಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದ ಸಿಗುವ ಉಚಿತ ಪಡಿತರ ಪ್ರಯೋಜನವನ್ನು ಪಡೆಯಬಹುದು. ನಿಮ್ಮ ರೇಷನ್ ಕಾರ್ಡ್ ನಲ್ಲಿ ನಾಲ್ಕು ಜನರ ಹೆಸರು ಇದ್ದರೆ, ಒಬ್ಬರಿಗೆ 10 ಕೆಜಿ ಅಕ್ಕಿಯ ಹಾಗೆ ವಿತರಣೆ ಮಾಡಲಾಗುತ್ತದೆ. ಈ ಪ್ರಯೋಜನ ಪಡೆಯಲು ಮುಖ್ಯವಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ರೇಶನ್ ಕಾರ್ಡ್ ಲಿಂಕ್ (Aadhaar Link) ಮಾಡಬೇಕಾಗುತ್ತದೆ. ರೇಷನ್ ಕಾರ್ಡ್ ಇರುವವರ ಹತ್ತಿರ ಆಧಾರ್ ಕಾರ್ಡ್ ಸಹ ಇರಲೇಬೇಕು.

ಈ ನಿಯಮಗಳು ಇರುವಾಗ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಆಗದೆ ಇದ್ದರೆ ಅಂಥ ಜನರ ರೇಷನ್ ಕಾರ್ಡ್ ಅನ್ನು ಫೇಕ್ ಎಂದು ಪರಿಗಣಿಸಿ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ, ಉಚಿತ ಬೋರ್ ವೆಲ್ ಗಾಗಿ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್

BPL Ration Cardಒಂದು ರೇಷನ್ ಕಾರ್ಡ್ ನ ದತ್ತಾಂಶ ಲಭ್ಯವಾಗದೆ ಇದ್ದರೆ, ಸರ್ಕಾರದಿಂದ ಸಿಗುವ ಧಾನ್ಯಗಳು ಸಹ ಸಿಗುವುದಿಲ್ಲ. ಈ ಬಗ್ಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪೂರೈಕೆ ಮಾಡುವ ಆಫೀಸ್ ಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ರೇಷನ್ ಕಾರ್ಡ್ ಹೊಂದಿರುವ ಎಲ್ಲರೂ ಆಧಾರ್ ಸೀಡಿಂಗ್ ಮಾಡಿಸಬೇಕು ಎಂದು ಪ್ರಚಾರ ಮಾಡಲಾಗುತ್ತಿದೆ.

ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿರುವವರಿಗೆ, ನಿಮ್ಮ ಅಪ್ಲಿಕೇಶನ್ ಮತ್ತು ಅದರಲ್ಲಿರುವ ಪೂರ್ತಿ ಮಾಹಿತಿಯನ್ನು ಕ್ಷೇತ್ರಾಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಎಲ್ಲವೂ ಸರಿ ಇದ್ದರೆ ಒಂದು ತಿಂಗಳ ಒಳಗೆ ರೇಷನ್ ಕಾರ್ಡ್ ವಿತರಿಸಲಾಗುತ್ತದೆ.

ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಆಹಾರ ಇಲಾಖೆಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸುವ ಆಯ್ಕೆ ಸಿಗುತ್ತದೆ, ಅಲ್ಲಿ ನೀವು ಆ ಆಯ್ಕೆ ಸೆಲೆಕ್ಟ್ ಮಾಡಿ, ಅರ್ಜಿ ಸಲ್ಲಿಸಬಹುದು..

ಈ ತಿಂಗಳ 30ಕ್ಕೆ ಇಂತಹ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2,000 ಜಮೆ, ಪ್ರಮುಖ ಮಾಹಿತಿ ಹಂಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಹಾಗೆಯೇ ಈ ಮಾಹಿತಿಯ ಅಡಿಯಲ್ಲಿ ಸೆಪ್ಟೆಂಬರ್ 30ರ ಒಳಗೆ ನಿಮ್ಮ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದನ್ನು ಕೂಡ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನೀವು ಸೆಪ್ಟೆಂಬರ್ 30ರ ಒಳಗೆ ಆಧಾರ್ ಸೀಡಿಂಗ್ ಮಾಡಿಸಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ.

ಒಟ್ಟು 1.7ಕೋಟಿ ರೇಷನ್ ಕಾರ್ಡ್ ಬಳಕೆದಾರರು ಇದ್ದಾರೆ, ಅವರುಗಳ ಪೈಕಿ ಜಿಲ್ಲೆಯಲ್ಲಿ 25,18,770 ಗ್ರಾಹಕರಲ್ಲಿ 20,97,825 ಗ್ರಾಹಕರು ಆಧಾರ್ ಸೀಡಿಂಗ್ ಮಾಡಿಸಿದ್ದು, ಇನ್ನುಳಿದವರು ಸೆಪ್ಟೆಂಬರ್ 30ರ ಒಳಗೆ ಮಾಡಿಸಬೇಕಿದೆ.

Do this before September 30 to avoid cancellation of ration card

Follow us On

FaceBook Google News

Do this before September 30 to avoid cancellation of ration card