ರಾಜ್ಯ ಸರ್ಕಾರದಿಂದ ಶುರುವಾಗಿರುವ ಹೊಸ ಯೋಜನೆಯ ಹೆಸರು ಕರ್ನಾಟಕ ಗಂಗಾ ಕಲ್ಯಾಣ ಸ್ಕೀಮ್ 2022. ನಿಮ್ಮ ನೆಲದಲ್ಲಿ ಬೋರ್ ವೆಲ್ (Borewell) ಕೊರಸಬೇಕು ಎಂದರೆ, ಪಂಪ್ ಮೋಟರ್ ಗಳನ್ನು ವಿದ್ಯುಧಿಕರಣ ಮಾಡಲು ಸರ್ಕಾರದ ಆರ್ಥಿಕ ಸಹಾಯ ಪಡೆಯಬೇಕು ಎಂದರೆ ರಾಜ್ಯ ಸರ್ಕಾರದ ಈ ಯೋಜನೆಗೆ ತಪ್ಪದೇ ಅರ್ಜಿ ಸಲ್ಲಿಸಿ.
ಈ ಯೋಜನೆಯು ಹಳ್ಳಿಗಳಲ್ಲಿ ವಾಸಿಸುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ (Farmer Scheme) ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಆರ್ಥಿಕವಾಗಿ ಕಷ್ಟದಲ್ಲಿರುವ ರೈತರು, ಅಲ್ಪಸಂಖ್ಯಾತ ರೈತರಿಗೆ ತಮ್ಮ ಜಮೀನಿನಲ್ಲಿ ಕೊಳವೆಬಾವಿ (Borewell) ಕೊರೆಸುವುದಕ್ಕೆ, ಮೋಟರ್ ಪಂಪ್ ವಿದ್ಯುಧಿಕರಣ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಸಹಾಯ ಸಿಗುತ್ತದೆ.
ಈ ಯೋಜನೆಯ ಹೆಸರು ಗಂಗಾ ಕಲ್ಯಾಣ ಯೋಜನೆ (Ganga Kalyana Yojana), ಈ ಯೋಜನೆಗೆ ಸರ್ಕಾರದಿಂದ 3 ರಿಂದ 4 ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ. ಇನ್ನು ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು. ಈ ಯೋಜನೆಯ ಸೌಲಭ್ಯ ಸಿಗುವುದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ..
ಈ ಯೋಜನೆಯ ಮೂಲಕ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ತುಮಕೂರು ಈ ಜಿಲ್ಲೆಗಳಿಗೆ 4 ಲಕ್ಷ ರೂಪಾಯಿಯವರೆಗು ಸಹಾಯಧನ ನೀಡುತ್ತದೆ.
ಬೇರೆ ಜಿಲ್ಲೆಗಳಿಗೆ 3 ಲಕ್ಷ ರೂಪಾಯಿ ಸಹಾಯಧನ ಕೊಡುವುದಕ್ಕೆ ರಾಜ್ಯಸರ್ಕಾರದಿಂದ ನಿರ್ಧಾರ ಮಾಡಲಾಗಿದೆ. ಕರ್ನಾಟಕ ಗಂಗಾ ಕಲ್ಯಾಣ ಸ್ಕೀಮ್ ಗೆ ಬೇಕಿರುವ ಅಗತ್ಯಗಳು ಹೀಗಿದೆ..
ರಾಜ್ಯದ 28 ಲಕ್ಷ ಜನರಿಗೆ ಸಿಗೋದಿಲ್ಲ ಅನ್ನಭಾಗ್ಯ ಯೋಜನೆಯ 2ನೇ ಕಂತಿನ ಹಣ! ನಿಯಮ ಬದಲಾವಣೆ
*ಈ ಯೋಜನೆಗೆ ಅರ್ಜಿ ಹಾಕುವವರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ ಆಗಿರಬೇಕು.
*ಈ ಯೋಜನೆಯ ಫಲಾನುಭವಿಗಳಿಗೆ 1 ಎಕರೆ 20 ಗುಂಟೆ ಇಂದ 5 ಎಕರೆವರೆಗೂ ಜಮೀನು ಇರಬೇಕು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಈ ಜಿಲ್ಲೆಗಳಲ್ಲಿ ಇರುವ ಜಮೀನುಗಳ ವಿಸ್ತೀರ್ಣ ಕಡಿಮೆ ಇರುವುದರಿಂದ, ಈ ಜಿಲ್ಲೆಯವರು 1 ಎಕರೆ ಜಮೀನು ಹೊಂದಿರಬೇಕು.
*ಅರ್ಜಿ ಹಾಕುವ ರೈತರು ಕಡ್ಡಾಯವಾಗಿ ಕರ್ನಾಟಕದವರೇ ಆಗಿರಬೇಕು.
*ರೈತರು ಸಣ್ಣ ಅಥವಾ ಅತಿ ಸಣ್ಣ ರೈತರೇ ಆಗಿರಬೇಕು.
*ಹಳ್ಳಿಯಲ್ಲಿ ವಾಸ ಮಾಡುವ ಈ ರೈತನ ಕುಟುಂಬದ ವಾರ್ಷಿಕ ಆದಾಯ ₹96,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
*ಅರ್ಜಿ ಹಾಕುವವರ ವಯಸ್ಸು 18 ವರ್ಷದಿಂದ 55 ವರ್ಷಗಳ ಒಳಗೆ ಇರಬೇಕು.
ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು
*ರೈತರ ಕ್ಯಾಸ್ಟ್ ಸರ್ಟಿಫಿಕೇಟ್ (Caste Certificate)
*ಇನ್ಕನ್ ಸರ್ಟಿಫಿಕೇಟ್ (Income Certificate)
*ಆಧಾರ್ ಕಾರ್ಡ್ ಕಾಪಿ (Aadhaar Card)
*RTC ಕಾಪಿ
*ಸಣ್ಣ ಅಥವಾ ಅತಿಸಣ್ಣ ರೈತರ ಪ್ರಮಾಣಪತ್ರ
*ಬ್ಯಾಂಕ್ ಪಾಸ್ ಬುಕ್ ಕಾಪಿ (Bank Passbook)
*ಭೂಮಿಯ ಕಂದಾಯ ಪಾವತಿ ಮಾಡಿರುವ ರಶೀದಿ
*ಸ್ವಯಂ ಘೋಷಣೆಯ ಪತ್ರ
*ಖಾತರಿ ಕೊಡುತ್ತಿರುವವರ ಸ್ವಯಂ ಘೋಷಣೆ ಪತ್ರ.
ಅಗತ್ಯವಿರುವ ಮಾಹಿತಿಗಳು ಮತ್ತು ದಾಖಲೆಗಳ ಜೊತೆಗೆ ರೈತರು
https://kmdconline.karnataka.gov.in/Portal/login ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಗಂಗಾ ಕಲ್ಯಾಣ ಯೋಜನೆಗೆ (Ganga Kalyana Yojana) ಅರ್ಜಿ ಸಲ್ಲಿಸಬಹುದು.
Karnataka Ganga Kalyana Yojana Benefits Details and Direct link to Apply
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.