ರಾಜ್ಯದ 28 ಲಕ್ಷ ಜನರಿಗೆ ಸಿಗೋದಿಲ್ಲ ಅನ್ನಭಾಗ್ಯ ಯೋಜನೆಯ 2ನೇ ಕಂತಿನ ಹಣ! ನಿಯಮ ಬದಲಾವಣೆ
5ಕೆಜಿ ಅಕ್ಕಿ ನೀಡಿ ಇನ್ನು 5ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ 170 ರೂಪಾಯಿಯನ್ನು ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಮುಖ್ಯ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದಾಗಿ ಸರ್ಕಾರ ಸೂಚನೆ ನೀಡಿತ್ತು.
Annabhagya Yojane : ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದ ಜನರಿಗೆ 5ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಯ ಹಣವನ್ನು ಕೊಡುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿತ್ತು. ಆದರೆ ಕೆಲವು ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಅದಕ್ಕೆ ಕಾರಣ ಜನರ ರೇಷನ್ ಕಾರ್ಡ್ ನಲ್ಲಿ ಆಗಿರುವ ಕೆಲವು ಸಮಸ್ಯೆಗಳು. ಅಂತ್ಯೋದಯ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಗೆ (BPL Card) ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೆ ಇದ್ದರೆ, ಬ್ಯಾಂಕ್ ಅಕೌಂಟ್ (Bank Account) ಅನ್ನು ಈ ಎರಡು ಖಾತೆಗೆ ಲಿಂಕ್ ಮಾಡದೆ ಇದ್ದರೆ ಅಥವಾ ಬ್ಯಾಂಕ್ ಅಕೌಂಟ್ ಇಲ್ಲದೆ ಇದ್ದರು ಅಂಥ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕ ಆಗಿರುವ ಮೊಹಮ್ಮದ್ ಖೈಜರ್ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಇನ್ನು ಕೂಡ ರೇಷನ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಕೊಡುವುದಕ್ಕೆ ಸಾಧ್ಯವಾಗಿಲ್ಲ.
ಸ್ವಂತ ಕಾರ್ ಇದ್ರೆ ರೇಷನ್ ಕಾರ್ಡ್ ಕ್ಯಾನ್ಸಲ್, ಸರ್ಕಾರದಿಂದ ಸ್ಪಷ್ಟನೆ! ಬೆಳ್ಳಂಬೆಳಿಗ್ಗೆ ಪ್ರಮುಖ ನಿರ್ಧಾರ
ಅಕ್ಕಿ ಪೂರೈಕೆ ಕಡಿಮೆ ಇರುವ ಕಾರಣ, 5ಕೆಜಿ ಅಕ್ಕಿ ನೀಡಿ ಇನ್ನು 5ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ 170 ರೂಪಾಯಿಯನ್ನು ರೇಷನ್ ಕಾರ್ಡ್ ನಲ್ಲಿ (Ration Card) ಹೆಸರು ಇರುವ ಮುಖ್ಯ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದಾಗಿ ಸರ್ಕಾರ ಸೂಚನೆ ನೀಡಿತ್ತು.
ಆದರೆ ಎಲ್ಲರಿಗೂ ಕೂಡ ಈ ಹಣ ವರ್ಗಾವಣೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಹಣ ಪಡೆಯಲು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಅನ್ನು ಅಂತ್ಯೋದಯ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಆಗಿದ್ದು, ಈ ಕೆಲಸ ಮಾಡದೆ ಇದ್ದರೆ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಅಂಥ ಜನರಿಗೆ ಸಿಗುವುದಿಲ್ಲ.
ಮತ್ತು ಇನ್ನಿತರ ತೊಂದರೆಗಳು ಅಂದರೆ ರೇಷನ್ ಕಾರ್ಡ್ ನಲ್ಲಿ ಒಬ್ಬರಿಗಿಂತ ಹೆಚ್ಚು ಮುಖ್ಯಸ್ಥರು ಇರುವುದು, ಅಥವಾ ಮನೆಗೆ ಯಜಮಾನಿ ಅಥವಾ ಯಜಮಾನರು ಇಲ್ಲದೆಯೇ ಇರುವುದು.. ಆಧಾರ್ ಕಾರ್ಡ್ ನಂಬರ್ ತಪ್ಪಾಗಿ ಹಾಕಿರುವುದು, ಬ್ಯಾಂಕ್ ನಲ್ಲಿ ಕೆವೈಸಿ (Bank ekyc) ನಡೆಸದೆ ಇರುವುದು..
ಫ್ರೀ ಕರೆಂಟ್ ಸ್ಕೀಮ್! ಗೃಹಜ್ಯೋತಿ ಯೋಜನೆಯಲ್ಲಿ ಧಿಡೀರ್ ಹೊಸ ಬದಲಾವಣೆ ತಂದ ರಾಜ್ಯ ಸರ್ಕಾರ
ನಿಮ್ಮ ಪಡಿತರ ಚೀಟಿಯಲ್ಲಿ ನೀಡಿರುವ ಎಲ್ಲಾ ಮಾಹಿತಿ ಸರಿ ಇದೆಯೇ ಮತ್ತು ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ನೀವು ಅಧಿಕೃತ ವೆಬ್ಸೈಟ್ ನಲ್ಲಿ ಚೆಕ್ ಮಾಡಬಹುದು.
ಮತ್ತೊಂದು ಗ್ಯಾರಂಟಿ ಯೋಜನೆ ಘೋಷಿಸಿದ ಕಾಂಗ್ರೆಸ್ ಸರ್ಕಾರ! ರಾಜ್ಯದ ಎಲ್ಲಾ ಜನತೆಗೆ ಸಿಗಲಿದೆ ಇನ್ನೊಂದು ಭಾಗ್ಯ
ಒಂದು ವೇಳೆ ನಿಮ್ಮ ಮಾಹಿತಿ ಎಲ್ಲವೂ ಸರಿ ಇದ್ದರೆ ಕರ್ನಾಟಕ ರಾಜ್ಯದ ಡಿಬಿಟಿ ಕರ್ನಾಟಕ ಆಪ್ ಡೌನ್ಲೋಡ್ ಮಾಡುವ ಮೂಲಕ, ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಡಿಬಿಟಿ ಮೂಲಕ ನುಮ್ಮ ಅಕೌಂಟ್ ಗೆ ಹಣ ಬಂದಿದ್ಯಾ ಎಂದು ಚೆಕ್ ಮಾಡಿಕೊಳ್ಳಬಹುದು.
ಒಂದು ವೇಳೆ ನಿಮ್ಮ ಹತ್ತಿರ ಬ್ಯಾಂಕ್ ಅಕೌಂಟ್ (Bank Account) ಇಲ್ಲದೆ ಹೋದರೆ, ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಿ ಅದನ್ನು ಶಿರಸ್ತೇದಾರರು ಮತ್ತು ನ್ಯಾಯಬೆಲೆ ಅಂಗಡಿಯ ಆಹಾರ ನಿರೀಕ್ಷಕರ ಸಹಾಯ ಪಡೆದು ಅಕೌಂಟ್ ಓಪನ್ ಮಾಡಿ ಲಿಂಕ್ ಮಾಡಬಹುದು..
ಮೊಹಮ್ಮದ್ ಖೈಜರ್ ಅವರು ಈ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದು, ಈ ಸೌಲಭ್ಯ ಸಿಗಬೇಕು ಎಂದರೆ ನೀವು ನೀಡಿರುವ ಎಲ್ಲಾ ಮಾಹಿತಿಗಳು ಸರಿ ಇದೆಯೇ ಎಂದು ಚೆಕ್ ಮಾಡಿಕೊಳ್ಳಿ, ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಿ.
28 lakh people of the state have not receive second installment of Annabhagya Yojana
Follow us On
Google News |