ಸ್ವಂತ ಕಾರ್ ಇದ್ರೆ ರೇಷನ್ ಕಾರ್ಡ್ ಕ್ಯಾನ್ಸಲ್, ಸರ್ಕಾರದಿಂದ ಸ್ಪಷ್ಟನೆ! ಬೆಳ್ಳಂಬೆಳಿಗ್ಗೆ ಪ್ರಮುಖ ನಿರ್ಧಾರ

Ration Card Update : ಸುಳ್ಳು ದಾಖಲೆ ನೀಡಿ ರೇಷನ್ ಕಾರ್ಡ್ ಪಡೆದಿರುವವರ, ಸ್ವಂತಕ್ಕಾಗಿ ವೈಟ್ ಬೋರ್ಡ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡುವ ಮೂಲಕ ಅಕ್ರಮಗಳನ್ನು ನಿಲ್ಲಿಸಬೇಕು ಎನ್ನುವ ಕ್ರಮವನ್ನು ತೆಗೆದುಕೊಂಡಿತ್ತು.

Ration Card Update : ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಸರ್ಕಾರವು ದೊಡ್ಡ ಸುದ್ದಿಯನ್ನು ನೀಡಿತ್ತು. ಸುಳ್ಳು ದಾಖಲೆ ನೀಡಿ ರೇಷನ್ ಕಾರ್ಡ್ ಪಡೆದಿರುವವರ, ಸ್ವಂತಕ್ಕಾಗಿ ವೈಟ್ ಬೋರ್ಡ್ ಕಾರ್ (Own Car) ಹೊಂದಿರುವವರ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡುವ ಮೂಲಕ ಅಕ್ರಮಗಳನ್ನು ನಿಲ್ಲಿಸಬೇಕು ಎನ್ನುವ ಕ್ರಮವನ್ನು ತೆಗೆದುಕೊಂಡಿತ್ತು.

ಸರ್ಕಾರದ ಈ ನಿರ್ಧಾರದಿಂದ ಹಲವರಿಗೆ ತೊಂದರೆ ಆಗಿರುವುದಂತೂ ನಿಜ.. ಸಾಕಷ್ಟು ಜನರು ಸೆಕೆಂಡ್ ಹ್ಯಾಂಡ್ ಕಾರ್ (Second Hand Car) ಕೊಂಡುಕೊಂಡಿರುವವರಿಗೂ ಇದರಿಂದ ತೊಂದರೆ ಆಗಿದ್ದು, ಇದೀಗ ಈ ವಿಚಾರದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ..

ಮತ್ತೊಂದು ಗ್ಯಾರಂಟಿ ಯೋಜನೆ ಘೋಷಿಸಿದ ಕಾಂಗ್ರೆಸ್ ಸರ್ಕಾರ! ರಾಜ್ಯದ ಎಲ್ಲಾ ಜನತೆಗೆ ಸಿಗಲಿದೆ ಇನ್ನೊಂದು ಭಾಗ್ಯ

ಸ್ವಂತ ಕಾರ್ ಇದ್ರೆ ರೇಷನ್ ಕಾರ್ಡ್ ಕ್ಯಾನ್ಸಲ್, ಸರ್ಕಾರದಿಂದ ಸ್ಪಷ್ಟನೆ! ಬೆಳ್ಳಂಬೆಳಿಗ್ಗೆ ಪ್ರಮುಖ ನಿರ್ಧಾರ - Kannada News

ಟ್ಯಾಕ್ಸಿ ಹಾಗೂ ಕ್ಯಾಬ್ ಗಳನ್ನು (Taxi and Cab) ಬಳಸುವ ಜನರನ್ನು ಹೊರತುಪಡಿಸಿ ಸ್ವಂತ ವಾಹನಗಳನ್ನು ಹೊಂದಿರುವ ಜನರ ರೇಷನ್ ಕಾರ್ಡ್ ಬ್ಯಾನ್ ಮಾಡಲು ಸರ್ಕಾರ ತೀರ್ಮಾನ ಮಾಡಿದ ನಂತರ ಸೋಷಿಯಲ್ ಮೀಡಿಯಾದಲ್ಲಿ (Social Media) ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.

ಬೇರೆ ಎಲ್ಲರ ಹಾಗೆ ಬಡವರಿಗು ತಾವು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು, ಉತ್ತಮವಾದ ಜೀವನ ಸಾಗಿಸಬೇಕು ಎಂದು ಆಸೆ ಇರುತ್ತದೆ. ಅದಕ್ಕಾಗಿ ಸಾಲ ಮಾಡಿ ಆದರೂ ಕಾರ್ (Car Loan) ತೆಗೆದುಕೊಂಡಿರುತ್ತಾರೆ.

ಅಭಿವೃದ್ಧಿಯ ಸಂಕೇತ ಆಗಿರುವ ಕಾರ್ ಗು ರೇಷನ್ ಕಾರ್ಡ್ ಗು ಯಾವುದೇ ಸಂಬಂಧ ಇಲ್ಲ, ಸರ್ಕಾರದ ಈ ನಿರ್ಧಾರ ಸರಿಯಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವೈಟ್ ಬೋರ್ಡ್ ಇರುವ ಕಾರ್ ಹೊಂದಿರುವ ಜನರ ರೇಷನ್ ಕಾರ್ಡ್ ಬ್ಯಾನ್ (Ration Card Cancel) ಮಾಡುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಇದರ ಬಗ್ಗೆ ಮಾತನಾಡಿದ್ದು, ಈ ನಿರ್ಧಾರ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರ, ನಮ್ಮ ಸರ್ಕಾರ ಇನ್ನು ಈ ವಿಚಾರದ ಬಗ್ಗೆ ನಿರ್ಧಾರ ಮಾಡಿಲ್ಲ.

ಫ್ರೀ ಕರೆಂಟ್ ಸ್ಕೀಮ್! ಗೃಹಜ್ಯೋತಿ ಯೋಜನೆಯಲ್ಲಿ ಧಿಡೀರ್ ಹೊಸ ಬದಲಾವಣೆ ತಂದ ರಾಜ್ಯ ಸರ್ಕಾರ

BPL Ration Cardವೈಟ್ ಬೋರ್ಡ್ ಕಾರ್ ಎಂದರೆ ಜನರು ಕಷ್ಟಪಟ್ಟು ಸಣ್ಣ ಕಾರ್ ಗಳನ್ನು ಖರೀದಿ ಮಾಡಿರಬಹುದು. ಲೋನ್ ಇಂದಲೂ ಕಾರ್ ಖರೀದಿ (Car Loan) ಮಾಡಿರಬಹುದು. ಈ ವಿಷಯದ ಬಗ್ಗೆ ಸರ್ಕಾರ ಕೂಡ ತಕ್ಷಣವೇ ನಿರ್ಧಾರ ಮಾಡಲು ಆಗೋದಿಲ್ಲ, ಜನರ ಆರ್ಥಿಕ ಪರಿಸ್ಥಿತಿ ಹಾಗೂ ಇನ್ನಿತರ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಇನ್ನು ಅನ್ನಭಾಗ್ಯ ವಿಚಾರದ ಬಗ್ಗೆ ಕೂಡ ಮುನಿಯಪ್ಪ ಅವರು ಮಾತನಾಡಿ ಹೊಸ ಅಪ್ಡೇಟ್ ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಕೊಡಬೇಕಿದ್ದ ಸರ್ಕಾರ, ನಂತರ 5 ಕೆಜಿ ಅಕ್ಕಿ ನೀಡಿ, ಇನ್ನು 5 ಕೆಜಿ ಅಕ್ಕಿಯ ಹಣವನ್ನು ಜನರ ಬ್ಯಾಂಕ್ ಖಾತೆಗೆ (Bank Account) ವರ್ಗಾಯಿಸುವುದಾಗಿ ಸೂಚನೆ ನೀಡಿತ್ತು.

ಹೊಸ ಬಿಪಿಎಲ್ ಕಾರ್ಡ್ ಅಪ್ಲೈ ಮಾಡಿರುವವರಿಗೆ ಸಿಹಿ ಸುದ್ದಿ! ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್

ಆದರೆ ಈಗ ಅಕ್ಕಿ ಅರೇಂಜ್ ಮಾಡಲು ಆಂಧ್ರಪ್ರದೇಶ ಮತ್ತು ಇನ್ನಿತರ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಎಲ್ಲವು ಅಂದುಕೊಂಡ ಹಾಗೆ ಆದರೆ, ಇನ್ನು ಕೆಲ ಸಮಯದ ನಂತರ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ 10 ಕೆಜಿ ಅಕ್ಕಿಯನ್ನು ಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಸಮಯದಲ್ಲೇ ಸುಮಾರು 3 ಲಕ್ಷ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಪಡೆದಿತ್ತು. ಹಾಗೆಯೇ ಸಾಕಷ್ಟು ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅರ್ಜಿ ಸಲ್ಲಿಸಿದ್ದಾರೆ. ಅಂಥ ಜನರು ಹೊಸ ರೇಶನ್ ಕಾರ್ಡ್ ಪಡೆಯಲು ಕಾದಿದ್ದು, ಸರ್ಕಾರ ಶೀಘ್ರದಲ್ಲೇ ಅವರಿಗೆಲ್ಲಾ ರೇಷನ್ ಕಾರ್ಡ್ ವಿತರಣೆ ಮಾಡುತ್ತದೆ, ಈ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮುನಿಯಪ್ಪ ಅವರು ಸೂಚನೆ ನೀಡಿದ್ದಾರೆ.

Ration card cancellation if Having own car, clarification from Govt

Follow us On

FaceBook Google News

Ration card cancellation if Having own car, clarification from Govt