ಈ ಕೆಲಸ ಮಾಡದೆ ಹೋದರೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ!

ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಗೃಹಲಕ್ಷ್ಮಿ, ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯನ್ನು ಶೀಘ್ರದಲ್ಲೇ ಚಾಲನೆ ಮಾಡುವುದಾಗಿ ತಿಳಿಸಿದೆ.

ನೀವು ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕು (Govt Schemes) ಎಂದರೆ ಆಧಾರ್ ಕಾರ್ಡ್ (Aadhaar Card) ಬಹು ಮುಖ್ಯವಾದ ದಾಖಲೆ. ಇನ್ನು ಆಧಾರ್ ಕಾರ್ಡ್ ಭಾರತದ ದೇಶದಲ್ಲಿ ನಿಮ್ಮ ಅಸ್ಥಿತ್ವವನ್ನು ಸೂಚಿಸುತ್ತದೆ ಎಂದರೆ ತಪ್ಪಾಗುವುದಿಲ್ಲ.

ಇನ್ನು ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ (Ration Card) ಸಹ ಬಹಳ ಮುಖ್ಯವಾದ ದಾಖಲೆಗಳು. ಇನ್ನು ಈ ದಾಖಲೆಗಳನ್ನು ಇಲ್ಲದೆ ಯಾವುದೇ ಕಚೇರಿಯಲ್ಲಿ ಅಥವಾ ಯಾವುದೇ ಸರ್ಕಾರಿ ಕೆಲಸಗಳು ನಡೆಯುವುದು ಅಸಾಧ್ಯ.

ಇನ್ನು ಈ ಹಿಂದೆ ಸರ್ಕಾರವೂ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪ್ಯಾನ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೊತೆಗೆ ಲಿಂಕ್ ಮಾಡಿಸುವಂತೆ ಸೂಚನೆ ಹೊರಡಿಸಿತು.

ಈ ಕೆಲಸ ಮಾಡದೆ ಹೋದರೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ! - Kannada News

ಗೃಹಲಕ್ಷ್ಮಿ ಯೋಜನೆಯ ₹2000 ಹಣ ಈ ದಿನದಿಂದ ಗೃಹಿಣಿಯರ ಖಾತೆಗೆ ಬರಲಿದೆ! ಅಧಿಕೃತ ಪ್ರಕಟಣೆ

ಹೌದು, ಆಧಾರ್ ಕಾರ್ಡ್ ಇರುವ ಜೊತೆಗೆ ಆಧಾರ್ ಕಾರ್ಡ್ ಅನ್ನು ನೀವು ನಿಮ್ಮ ಇನ್ನಿತರ ದಾಖಲೆಗಳ ಜೊತೆಗೆ ಲಿಂಕ್ ಮಾಡಿಸುವುದು ಸಹ ಅಷ್ಟೇ ಮುಖ್ಯ. ಇನ್ನು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಇದು ಬಹು ಮುಖ್ಯವಾದ ಅಂಶವಾಗಿದೆ.

ಆಧಾರ್ ಕಾರ್ಡ್ ಅನ್ನು ನಿಮ್ಮ ಇನ್ನಿತರ ದಾಖಲೆಗಳಾದ ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೊತೆಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿತ್ತು. ಇನ್ನು ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಪಾಸ್ ಬುಕ್ ಗೆ ಲಿಂಕ್ ಮಾಡಿಸಿದರೆ ಮಾತ್ರ ನೀವು ಸರ್ಕಾರದ ಕೆಲವು ಲಾಭಗಳನ್ನು ಪಡೆಯಲು ಸಾಧ್ಯ.

Karnataka Annabhagya Yojana New Updatesಕಾಂಗ್ರೆಸ್ ಸರ್ಕಾರ ಚುನಾವಣೆಯ ವೇಳೆ ಹಲವು ಯೋಜನೆಗಳನ್ನು ಜಾರಿಗೆ ತರುವಂತೆ ಜನರಿಗೆ ಭರವಸೆ ನೀಡಿತ್ತು. ಇನ್ನು ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಗೃಹಲಕ್ಷ್ಮಿ (Gruha Lakshmi Scheme), ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯನ್ನು (Annabhagya Scheme) ಶೀಘ್ರದಲ್ಲೇ ಚಾಲನೆ ಮಾಡುವುದಾಗಿ ತಿಳಿಸಿದೆ.

ಇನ್ನು ಈ ಯೋಜನೆಗಳ ಲಾಭವನ್ನು ಪಡೆಯಲು ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರಬೇಕು ಎಂದು ಸರ್ಕಾರ ಸೂಚಿಸಿದೆ. ಇನ್ನು ಆಧಾರ್ ಕಾರ್ಡ್ KYC ಆಗಿದ್ದರೆ ಮಾತ್ರ ನೀವು ನಿಮ್ಮ ಖಾತೆಗೆ ಹಣ ಪಡೆಯಲು ಸಾಧ್ಯ ಎನ್ನಲಾಗುತ್ತಿದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿದ ಸರ್ಕಾರ! ಮುಂದಿನ ಆದೇಶದವರೆಗೆ ಸಿಗೋಲ್ಲ ಕಾರ್ಡ್

ಇನ್ನು ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗುವುದರ ಬಗ್ಗೆ ತಿಳಿಯಲು, ಗೂಗಲ್ ನಲ್ಲಿ ಚೆಕ್ ಆಧಾರ್ ಸ್ಟೇಟಸ್ ಎಂದು ಸರ್ಚ್ ಮಾಡಿ, ಚೆಕ್ ಮೈ ಆಧಾರ್ ಸ್ಟೇಟಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ನಂತರ ಗೋ ಟು ಮೈ ಆಧಾರ್ ಮೇಲೆ ಕ್ಲಿಕ್ ಮಾಡಿ, ಚೆಕ್ ಬ್ಯಾಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ನೋಂದಾಯಿಸುವ ಮೂಲಕ ನೀವು ನಿಮ್ಮ ಬ್ಯಾಂಕ್ ಆಧಾರ್ ಸ್ಟೇಟಸ್ ನ ಮಾಹಿತಿ ಪಡೆಯಬಹುದು.

Do This For Get Gruha Lakshmi Scheme and Annabhagya Scheme Benefits

Follow us On

FaceBook Google News

Do This For Get Gruha Lakshmi Scheme and Annabhagya Scheme Benefits