ನವರಾತ್ರಿ ಪೂಜೆಗೆ ಶೃಂಗೇರಿಗೆ ಬಂದಿದ್ದ ಕೋಲಾರ ಮೂಲದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು
ನವರಾತ್ರಿ ಹಬ್ಬದ ಅಂಗವಾಗಿ ಪೋಷಕರೊಂದಿಗೆ ಶೃಂಗೇರಿಗೆ ಪೂಜೆ ಸಲ್ಲಿಸಲು ಬಂದಿದ್ದ ಕೋಲಾರ ಜಿಲ್ಲೆಯ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ರಾಘವೇಂದ್ರ ಪೂಜಾರಿ, ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

- ಶೃಂಗೇರಿಯ ತುಂಗಾ ನದಿಯಲ್ಲಿ ವಿದ್ಯಾರ್ಥಿ ಸಾವು
- ನವರಾತ್ರಿ ಪೂಜೆಗೆ ಬಂದಿದ್ದ ರಾಘವೇಂದ್ರ ಪೂಜಾರಿ
- ಕೋಲಾರ ಮೂಲದ ವಿದ್ಯಾರ್ಥಿ ಮೃತ
ಚಿಕ್ಕಮಗಳೂರು (Chikkamagaluru): ನವರಾತ್ರಿ ಹಬ್ಬದ ಸಂಭ್ರಮದ ನಡುವೆ ಶೃಂಗೇರಿಯಲ್ಲಿ ದುರಂತವೊಂದು ಸಂಭವಿಸಿದೆ. ಪೋಷಕರೊಂದಿಗೆ ದೇವರ ದರ್ಶನ ಹಾಗೂ ಪೂಜೆಗಾಗಿ ಬಂದಿದ್ದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೃತನನ್ನು ಕೋಲಾರ ಜಿಲ್ಲೆಯ (Kolar) ಮಾಲೂರು (Malur) ಮೂಲದ ರಾಘವೇಂದ್ರ ಪೂಜಾರಿ ಎಂದು ಗುರುತಿಸಲಾಗಿದೆ. ಶೃಂಗೇರಿಯ ತುಂಗಾ ನದಿಯ ಪಾರ್ಕಿಂಗ್ ಲಾಟ್ ಸಮೀಪ ಈ ಘಟನೆ ನಡೆದಿದ್ದು, ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬರಿ 600 ರೂಪಾಯಿ ವಿಚಾರಕ್ಕೆ ಬಿತ್ತು ಹೆಣ! ದೊಣ್ಣೆಯಿಂದ ಹೊಡೆದು ಕೊಲೆ
ನದಿಯಲ್ಲಿ ಸ್ನಾನ ಮುಗಿಸಿ ದಡಕ್ಕೆ ಬಂದಿದ್ದ ರಾಘವೇಂದ್ರ, ಮತ್ತೆ ನೀರಿಗಿಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಮುಳುಗಿದ್ದಾರೆ ಎನ್ನಲಾಗಿದೆ. ಈ ವೇಳೆ ನದಿಯಲ್ಲಿದ್ದ ಮಹಿಳೆಯೊಬ್ಬರು ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ಜೋರಾಗಿ ಕೂಗಿ ಸಹಾಯಕ್ಕಾಗಿ ಕರೆದಿದ್ದಾರೆ. ಆದರೆ, ಸ್ಥಳದಲ್ಲಿದ್ದವರು ನೆರವಿಗೆ ಧಾವಿಸುವಷ್ಟರಲ್ಲಿ ದುರಂತ ಸಂಭವಿಸಿದೆ.
ಘಟನೆ ತಿಳಿದ ತಕ್ಷಣ ಶೃಂಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯ ಆಳದಲ್ಲಿ ಮೃತದೇಹ ಪತ್ತೆಹಚ್ಚಲು ಮಲ್ಪೆಯ ಈಶ್ವರ್ ನೇತೃತ್ವದ ನುರಿತ ಈಜುಗಾರರ ತಂಡವೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ರ್ಯಾಕ್ಟರ್ಗೆ ಟ್ರಕ್ ಡಿಕ್ಕಿ, ಮೂವರ ಸಾವು
ಇದೇ ಪ್ರದೇಶದಲ್ಲಿ ಈ ಹಿಂದೆಯೂ ನೀರಿನಲ್ಲಿ ಮುಳುಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಇಂತಹ ದುರಂತಗಳು ಮರುಕಳಿಸದಂತೆ ಅಪಾಯಕಾರಿ ಸ್ಥಳದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜೊತೆಗೆ ಅಗತ್ಯವಿದ್ದಲ್ಲಿ ತಡೆಗೋಡೆ (Fencing) ನಿರ್ಮಿಸಬೇಕು ಎಂದು ಸಾರ್ವಜನಿಕರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.
ನಾಳೆಯ ದಿನ ಭವಿಷ್ಯ; ಈ ರಾಶಿಗಳಿಗೆ ಬ್ರಹ್ಮಾಂಡ ರಾಜಯೋಗ
Read the story
ರಾಜ್ಯದ ಜನತೆಗೆ ಗುಡ್ ನ್ಯೂಸ್; ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ
Read the story
ನವೆಂಬರ್ 2026ರ ಮಾಸಿಕ ಭವಿಷ್ಯ; ನಿಮ್ಮ ರಾಶಿ ಫಲ ಹೇಗಿದೆ?
Read the story
ಹಾಲಿನ ಬೆನ್ನಲ್ಲೇ ಮೊಸರು ದರ ಏರಿಕೆ; ಲೀಟರ್ಗೆ ಬರೋಬ್ಬರಿ ₹14 ರೂಪಾಯಿ ಹೆಚ್ಚಳ
Read the story
ಮೂರು ದಿನ ಭಾರೀ ಮಳೆ ಮುನ್ಸೂಚನೆ! ಗುಡುಗು, ಮಿಂಚು ಸಾಧ್ಯತೆ
Read the story



