ಮೈಸೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಹಾಗೂ 2 ಜಾನುವಾರು ಸಾವು
ಶೇಖರ್ ತಮ್ಮ ಜಮೀನಿನಲ್ಲಿ 4 ರಾಸುಗಳನ್ನು ಮೇಯಿಸುತ್ತಾ ಮನೆಗೆ ಬರುವ ಸಂದರ್ಭದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಆತನು ಹಾಗೂ ಎರಡು ರಾಸುಗಳು ಜೀವಹಾನಿಗೊಳಗಾಗಿದ್ದಾರೆ.
- ವಿದ್ಯುತ್ ತಂತಿ ತುಳಿದು ರೈತ ಶೇಖರ್ ಮತ್ತು ಎರಡು ರಾಸುಗಳು ಸಾವು
- ಹಸುಗಳನ್ನು ಮೇಯಿಸಿಕೋಂಡು ಮನೆಗೆ ಹಿಂತಿರುಗುವ ವೇಳೆ ಘಟನೆ
- ಬೆಸ್ಕಾಂ ನಿರ್ಲಕ್ಷ್ಯಕ್ಕೆ ಅಂತರಸಂತೆ ಪೊಲೀಸ್ ಠಾಣೆಗೆ ದೂರು
ಮೈಸೂರು (Mysuru): ಹೆಚ್.ಡಿ. ಕೋಟೆ ತಾಲೂಕು ಮೊತ್ತ ಗ್ರಾಮದಲ್ಲಿ ನಡೆದ ದಾರುಣ ಅವಘಡದಲ್ಲಿ ಶೇಖರ್ (45) ಎಂಬ ರೈತ ಹಾಗೂ ಎರಡು ರಾಸುಗಳು ಸಾವನ್ನಪ್ಪಿವೆ.
ಗುರುವಾರ ಸಂಜೆ ಶೇಖರ್ ತಮ್ಮ ಜಮೀನಿನಲ್ಲಿ 4 ರಾಸುಗಳನ್ನು ಮೇಯಿಸುತ್ತಾ ಮನೆಗೆ ಬರುವ ಸಂದರ್ಭದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಆತನು ಹಾಗೂ ಎರಡು ರಾಸುಗಳು ಜೀವಹಾನಿಗೊಳಗಾಗಿದ್ದಾರೆ.
ಇವರನ್ನು ಕಂಡು ಶೇಖರ್ ಅವರ ಅಣ್ಣ ಮಹೇಶ್ ಕೂಡಲೇ ಬೆಸ್ಕಾಂ ಮತ್ತು ಪೊಲೀಸರನ್ನು ಸಂಪರ್ಕಿಸಿದರೂ ಮೊದಲಿಗೆ ಬೆಸ್ಕಾಂ ಕರೆ ಸ್ವೀಕರಿಸಲಿಲ್ಲ, ನಂತರ ಪೊಲೀಸ್ ಅಧಿಕಾರಿಗಳು ಘಟನೆ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಬಳಿಕ ಶೇಖರ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದರು.
ಈ ಸಂಬಂಧ ಶೇಖರ್ ಅವರ ಕುಟುಂಬಸ್ಥರು ಬೆಸ್ಕಾಂ ನಿರ್ಲಕ್ಷ್ಯದಿಂದ ಘಟನೆಯಾಗಿದೆ ಎಂದು ಆರೋಪಿಸಿ ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Farmer and Two Cattle Electrocuted by Fallen Power Line in HD Kote