Karnataka NewsCrime News

ಲವ್ ಮಾಡಿದ ಮಗಳು, ದೊಣ್ಣೆಯಿಂದ ಹೊಡೆದು ಕೊಂದ ತಂದೆ!

ಪ್ರೀತಿ ಮಾಡದಂತೆ ಎಚ್ಚರಿಸಿದರೂ ಕೇಳದ ಮಗಳನ್ನು ತಂದೆಯೇ ಕೊಂದು ಪರಾರಿಯಾದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲ್ಲೂಕಿನ ಬರಗೇನ್ ತಾಂಡಾದಲ್ಲಿ ನಡೆದಿದೆ.

  • ಮಗಳ ಪ್ರೀತಿಗೆ ವಿರೋಧಿಸಿದ್ದ ತಂದೆ ಕೋಪದಲ್ಲಿ ಮಗಳ ಹತ್ಯೆ
  • ದೊಣ್ಣೆಯಿಂದ (wooden stick) ಹಲ್ಲೆ ಮಾಡಿ ಭೀಕರ ಹತ್ಯೆ
  • ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬರಗೇನ್ ತಾಂಡಾದಲ್ಲಿ ಮಗಳ ಪ್ರೀತಿಯನ್ನು ವಿರೋಧಿಸಿದ ತಂದೆ, ಆಕೆಯನ್ನೇ ಭೀಕರವಾಗಿ ಕೊಂದು ಪರಾರಿಯಾದ ಘಟನೆ ನಡೆದಿದೆ.

18 ವರ್ಷದ ಮೋನಿಕಾ ಮೋತಿರಾಮ ಜಾಧವ್ ಎಂಬ ಯುವತಿಯನ್ನು ಅವಳ ತಂದೆ ಮೋತಿರಾಮ ಜಾಧವ್ ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಮಗಳಿಗೆ ತಂದೆ ಹಲವಾರು ಬಾರಿ ಪ್ರೀತಿಯಿಂದ ದೂರವಿರು, ನಾನು ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿಸುತ್ತೇನೆ ಎಂದು ತಿಳಿಸಿದ್ದ. ಆದರೆ ಮೋನಿಕಾ ತನ್ನ ಪ್ರೀತಿಯನ್ನೇ ಉಳಿಸಿಕೊಂಡು ಹೋಗಲು ನಿರ್ಧರಿಸಿದ್ದಳು.

ಲವ್ ಮಾಡಿದ ಮಗಳು, ದೊಣ್ಣೆಯಿಂದ ಹೊಡೆದು ಕೊಂದ ತಂದೆ!

ಬುದ್ಧಿ ಮಾತು ಹೇಳಿದ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಂದ ಪತಿ

ಮಗಳ ಈ ಹಠಕ್ಕೆ ಕೋಪಗೊಂಡ ತಂದೆ, ಕೊನೆಗೂ ಕಠಿಣ ನಿರ್ಧಾರ ತೆಗೆದುಕೊಂಡು, ದೊಣ್ಣೆಯಿಂದ ಭೀಕರ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಮೋನಿಕಾ ಸ್ಥಳದಲ್ಲೇ ಕೊನೆಯುಸಿರೆಳೆದಳು. ಈ ಘಟನೆಗೆ ಸಂಬಂಧಿಸಿದಂತೆ ತಾಯಿ ಭಾಗುಬಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಸ್‌ ಮತ್ತು ಬೈಕ್ ನಡುವೆ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು

ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Father Murders Daughter for Love Affair

English Summary

Our Whatsapp Channel is Live Now 👇

Whatsapp Channel

Related Stories