ಗೃಹ ಭಾಗ್ಯ ಯೋಜನೆ, ಅರ್ಹ ಬಡ ಫಲಾನುಭವಿಗಳಿಗೆ ಉಚಿತ ಮನೆ ಸವಲತ್ತು
ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಅವರು ನಗರ ಪ್ರದೇಶದ ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ. ಬಡವರಿಗೆ ಉಚಿತ ಮನೆ ಸೌಲಭ್ಯವನ್ನು ಒದಗಿಸುವ ತಯಾರಿ ಆರಂಭವಾಗಿದೆ.

- ನಗರ ಪ್ರದೇಶದಲ್ಲಿ ಮನೆ ಇಲ್ಲದವರ ಪಟ್ಟಿ ಸಿದ್ಧಪಡಿಸಲು ಸೂಚನೆ
- ವಿವಿಧ ವಸತಿ ಯೋಜನೆಗಳ ಕಾಮಗಾರಿ ವೇಗವರ್ಧನೆಗೆ ತಾಕೀತು
- ಕುಡಿಯುವ ನೀರು ಮತ್ತು ತ್ಯಾಜ್ಯ ನಿರ್ವಹಣೆಯ ಮೇಲೂ ಪರಿಶೀಲನೆ
ಮಂಡ್ಯ ನಗರದಲ್ಲಿ (Mandya District) ಮನೆ ಇಲ್ಲದೆ ಜೀವನ ಸಾಗಿಸುತ್ತಿರುವ ಬಡ ಮತ್ತು ನಿವೇಶನ ರಹಿತ ಕುಟುಂಬಗಳಿಗಾಗಿ ಉಚಿತ ಮನೆ ಸವಲತ್ತನ್ನು (Free Housing Scheme) ನೀಡುವ ಗೃಹ ಭಾಗ್ಯ ಯೋಜನೆಗೆ ಕಾರ್ಯಚಟುವಟಿಕೆ ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ಸೂಚನೆ ನೀಡಿದ್ದಾರೆ.
ಸ್ಥಳೀಯ ನಗರ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ವಸತಿ ರಹಿತರ ಪಟ್ಟಿಯನ್ನು ತಕ್ಷಣ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅವರು ಸೂಚಿಸಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 21ನೇ ಕಂತು ಯಾವಾಗ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ
ಹೌದು, ನಗರದ ನಾನಾ ಭಾಗಗಳಲ್ಲಿ ಮನೆ ಇಲ್ಲದೇ ಬಾಡಿಗೆ (rent) ಬದುಕುತ್ತಿರುವ ಬಡ ಕುಟುಂಬಗಳಿಗೆ ಗೃಹ ಭಾಗ್ಯ ಯೋಜನೆಯಡಿ (Gruha Bhagya scheme) ಉಚಿತ ವಸತಿ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
ವಿಭಿನ್ನ ಯೋಜನೆಗಳಾದ ಪೌರಕಾರ್ಮಿಕರ ಗೃಹ ಭಾಗ್ಯ (Gruha Bhagya), ವಾಜಪೇಯಿ ನಗರ ವಸತಿ, ಅಂಬೇಡ್ಕರ್ ನಿವಾಸ್, ಪ್ರಧಾನಮಂತ್ರಿ ಆವಾಸ್ (PM Awas Yojana) ಅಡಿ ಮನೆ ನಿರ್ಮಾಣದ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ತಕ್ಷಣ ಸೌಲಭ್ಯ ನೀಡಬೇಕೆಂದು ತಾಕೀತು ಮಾಡಲಾಗಿದೆ.
ಇದೇ ವೇಳೆ ಅವರು ಕುಡಿಯುವ ನೀರಿನ ಗುಣಮಟ್ಟದ ಕುರಿತು ಬೆಳಕು ಚೆಲ್ಲುತ್ತಾ, ಪ್ರತಿದಿನ ಕನಿಷ್ಠ ಮೂರು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಬೇಕು. ನೀರಿನಲ್ಲಿ ಗುಣಮಟ್ಟ ಕಮ್ಮಿಯಾಗಿದ್ದರೆ ಕೂಡಲೇ ವರದಿ ಮಾಡಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಕೃಷಿ ಭೂಮಿ ಯೋಜನೆ, ಭೂಮಿ ಖರೀದಿಗೆ ಸಾಲ ಸೌಲಭ್ಯ!
ನಗರ ಭಾಗಗಳಲ್ಲಿ ತ್ಯಾಜ್ಯ ವಿಲೇವಾರಿಯ ಮೇಲೂ ವಿಶೇಷ ಗಮನ ಹರಿಸಬೇಕಿದೆ. ಅತಂತ್ರತೆ ಮುಂದುವರೆದರೆ ಟೆಂಡರ್ ರದ್ದುಪಡಿಸುವಂತೆ ತಾಕೀತು ಮಾಡಿದರು. ಈ ನಡುವೆ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಪಾವತಿಯಲ್ಲಿ ಹಿಂದುಳಿದಿರುವ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ನಗರಸಭೆಗಳ ಪದಾಧಿಕಾರಿಗಳು, ಇಂಜಿನಿಯರ್ಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು, ಬಡ ಕುಟುಂಬಗಳಿಗೆ ಮನೆ ಕಲ್ಪನೆ ನಿಜವಾಗುವ ಸಾಧ್ಯತೆಗಳತ್ತ ಹೆಜ್ಜೆ ಇಟ್ಟಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ (free housing benefit) ಮನೆ ನೀಡಲಾಗುವುದು ಎಂಬ ಭರವಸೆ ಇದೆ.
Free Houses Soon for Urban Poor Under Gruha Bhagya Scheme





