ಮೈಸೂರು ಹೊರವಲಯದಲ್ಲಿ ಯುವತಿಯ ಶವ ಪತ್ತೆ! ಅತ್ಯಾಚಾರ ಮತ್ತು ಕೊಲೆ ಶಂಕೆ

ಮೈಸೂರಿನ ಹೊರವಲಯದ ಕಾಲೇಜು ಹತ್ತಿರ ಯುವತಿಯ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ಮತ್ತು ಕೊಲೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

  • ಮೈಸೂರಿನ ಹೊರವಲಯದ ಕಾಲೇಜು ಹತ್ತಿರ ಶವ ಪತ್ತೆ
  • ಮಂಗಳವಾರದಿಂದ ಯುವತಿ ಕಾಣೆಯಾಗಿದ್ದಳು
  • ಶವದ ಮೇಲೆ ಅನುಮಾನಾಸ್ಪದ ಗುರುತುಗಳು

ಮೈಸೂರಿನ (Mysuru) ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರ ಹತ್ತಿರ ಯುವತಿಯೊಬ್ಬಳ ಶವ ಪತ್ತೆಯಾಗಿದ್ದು, ಅತ್ಯಾಚಾರ (rape) ಮತ್ತು ಕೊಲೆ (murder) ಶಂಕೆ ವ್ಯಕ್ತವಾಗಿದೆ.

ಮಂಗಳವಾರದಿಂದ ಕಾಣೆಯಾಗಿದ್ದ ಯುವತಿಯ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಶವದ ಸ್ಥಿತಿ, ಬಟ್ಟೆಗಳ ಸ್ಥಿತಿಗತಿ ಎಲ್ಲವೂ ಇದು ಸಾಮಾನ್ಯ ಸಾವಲ್ಲ ಎಂಬುದನ್ನು ಸ್ಪಷ್ಟಗೊಳಿಸುತ್ತಿದೆ.

ಮೃತ ಯುವತಿ ಕಳೆದ ಮೂರು ವರ್ಷಗಳಿಂದ ಮಕ್ಕಳ ಡೇ ಕೇರ್ (Day Care) ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಕೆ.ಆರ್. ಆಸ್ಪತ್ರೆಗೆ (KR Hospital) ಹೋಗಿ ಬರುತ್ತೇನೆಂದು ಹೇಳಿ ಹೊರಟ ಯುವತಿ ಆ ನಂತರ ಮನೆಗೆ ವಾಪಸ್ಸಾಗಿರಲಿಲ್ಲ.

ಇದನ್ನೂ ಓದಿ: ಬೆಂಗಳೂರು ಆನೇಕಲ್ ಬಳಿ ಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ

ಆಸ್ಪತ್ರೆಯಿಂದ ಹೊರಡುವ ವೇಳೆ ತಂದೆಗೆ ಕರೆ ಮಾಡಿ, ಮಳೆ ಬರುತ್ತಿದೆ, ಆಟೋ ಹಿಡಿದು ಬರುತ್ತೇನೆ ಎಂದು ತಿಳಿಸಿದ್ದರು. ಆದರೆ ಮನೆಗೆ ವಾಪಸ್ಸು ಬರಲಿಲ್ಲ, ಕೊನೆಗೆ ಶವವಾಗಿ ಪತ್ತೆಯಾಗಿರುವುದು ಮನಕಲುಕುವ ವಿಷಯ.

ಈ ಕುರಿತಾಗಿ ಯುವತಿಯ ಸೋದರ ಮಾವ ಆಕ್ರೋಶ ವ್ಯಕ್ತಪಡಿಸಿದ್ದು, ಪ್ಯಾಂಟ್ ಉಲ್ಟಾ ಹಾಕಿರುವ ದೃಷ್ಟಿಯಿಂದ ಅತ್ಯಾಚಾರದ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕೆಂಬುದು ನಮ್ಮ ಬೇಡಿಕೆ ಎಂದು ಅವರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಮೈಸೂರು ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವೈದ್ಯಕೀಯ ವರದಿಯ ನಂತರ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಮತ್ತು ತನಿಖೆ ಮುಂದುವರೆದಿದೆ.

Girl’s Body Found Near Mysore College, Rape-Murder Suspect

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories