ರಾಜ್ಯ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆಗಳಲ್ಲಿ (guarantee schemes) ನಾಲ್ಕು ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಜಾರಿಗೆ ತಂದಿದೆ. ಅವುಗಳಲ್ಲಿ ಇತ್ತೀಚಿಗೆ ಬಿಡುಗಡೆಯಾದ ಗೃಹ ಲಕ್ಷ್ಮಿ ಯೋಜನೆಯ (Gruha Lakshmi Scheme) ಬಗ್ಗೆ ಜನರಲ್ಲಿ ಬಹಳ ದೊಡ್ಡ ನಿರೀಕ್ಷೆ ಇತ್ತು.

ಯಾಕಂದ್ರೆ ರಾಜ್ಯದ ಪ್ರತಿ ಮನೆಯ ಹಿರಿಯ ಗೃಹಿಣಿಗೆ ಉಚಿತವಾಗಿ ಪ್ರತಿ ತಿಂಗಳು 2000ರೂ. ಗಳನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುವುದು. ಗೃಹಿಣಿಯರು ಅರ್ಜಿ ಸಲ್ಲಿಸಿದ್ದು ಅದರಲ್ಲಿ ಸಾಕಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿಗಳು ಖಾತೆಗೆ ಜಮಾ (Bank Account) ಆಗಿದೆ.

Do this immediately if Gruha Lakshmi Yojana money has not yet arrived

ರಾಜ್ಯದಲ್ಲಿ ಸುಮಾರು 1.28 ಕೋಟಿ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಈಗಾಗಲೇ 1.13 ಲಕ್ಷ ಗೃಹಿಣಿಯರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ಸರ್ಕಾರ ತಿಳಿಸಿದೆ.

7ನೇ ಕ್ಲಾಸ್ ಪಾಸಾದವರಿಗೆ ಸರ್ಕಾರಿ ನೌಕರಿ, ಇಂದೇ ಕೊನೆಯ ದಿನಾಂಕ, ಕೂಡಲೇ ಅರ್ಜಿ ಸಲ್ಲಿಸಿ!

ಆದರೆ ಇನ್ನೂ ಉಳಿದ ಲಕ್ಷಾಂತರ ಜನರ ಖಾತೆಗೆ ಹಣ ಬಂದಿಲ್ಲ ಇದರಿಂದ ಅರ್ಜಿ ಸಲ್ಲಿಸಿರುವ ಗೃಹಿಣಿಯರು ಆತಂಕಗೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ರೂ. ಹಣ ಹಲವರ ಖಾತೆಗೆ ಜಮಾ (DBT) ಆಗದೇ ಇರುವುದಕ್ಕೆ ಅವರ ಖಾತೆಯಲ್ಲಿ ಕೊಟ್ಟಿರುವ ಮಾಹಿತಿ ಅಥವಾ ಆಧಾರ್ ಸೀಡಿಂಗ್ ಸರಿಯಾಗಿಲ್ಲ, ಜೊತೆಗೆ ಬ್ಯಾಂಕ್ ಅಕೌಂಟ್ (Bank Account) ನಂಬರ್ ಆಕ್ಟಿವ್ ಆಗಿಲ್ಲ

ಈ ಕಾರಣದಿಂದ ಅಂಥವರ ಖಾತೆಗೆ ಹಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ (State Government) 17,500 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಜುಲೈ 19 ರಿಂದ ಅವಕಾಶ ನೀಡಲಾಗಿತ್ತು, ಅದೇ ರೀತಿ ಕಳೆದ ಒಂದು ವಾರದ ಹಿಂದೆ ಈ ಯೋಜನೆಗೆ ಚಾಲನೆ ಸಿಕ್ಕಿದ್ದು ಹಲವು ಗೃಹಿಣಿಯರ ಖಾತೆಗೆ 2,000ಗಳನ್ನು ನೇರ ಡೆಬಿಟ್ ಮಾಡಲಾಗಿದೆ. ಆದರೆ ಈ ನಡುವೆ ಹಲವರಿಗೆ ಹಣ ಬಂದಿಲ್ಲ.

ಗೃಹಲಕ್ಷ್ಮಿ ಯೋಜನೆ ನೋಂದಣಿ ಸ್ಥಗಿತ, ಇನ್ನೂ ಅರ್ಜಿ ಹಾಕದವರಿಗೆ ನಿರಾಸೆ! ಸದ್ಯಕ್ಕಂತೂ ಅಪ್ಲೈ ಮಾಡಲು ಸಾಧ್ಯವಿಲ್ಲ

ನೋಂದಣಿ ಪ್ರಕ್ರಿಯೆ ಸ್ಥಗಿತ

Gruha Lakshmi Yojaneಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಟೆಡ್ ಲೈನ್ ಇಲ್ಲ. ಮಹಿಳೆಯರು ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿತ್ತು. ಇವತ್ತು ಬಂದಿರುವ ಮಾಹಿತಿಯ ಪ್ರಕಾರ ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆ ಲಾಭ ಈಗಾಗಲೇ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಸಿಗಬೇಕು, ಅದಾದ ಬಳಿಕ ಹೊಸ ನೋಂದಣಿ ಆರಂಭಿಸಲಾಗುವುದು ಎಂದು ಮಾಹಿತಿ ಸಿಕ್ಕಿದೆ. ಆದರೆ ಈ ಸುದ್ದಿ ನಿಜವೋ ಸುಳ್ಳು ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಯಾಕೆಂದರೆ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ನನಗೆ ಈ ವಿಷಯದ ಬಗ್ಗೆ ಕ್ಲಾರಿಟಿ ಇಲ್ಲ ಎಂಬುದಾಗಿ ಹೇಳಿದ್ದು ಜನರಲ್ಲಿ ಇನ್ನಷ್ಟು ಗೊಂದಲ ಉಂಟುಮಾಡಿದೆ.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್! ಇಂಥವರಿಗೆ ಇನ್ಮುಂದೆ 5 ಕೆ.ಜಿ ಅಕ್ಕಿ ಹಣ ಕೂಡ ಸಿಗೋದಿಲ್ಲ

ಎಸ್ಎಂಎಸ್ ಮೂಲಕ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಇನ್ನು ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಸರ್ಕಾರದ 8147500500 ಈ ಸಂಖ್ಯೆಗೆ ನಿಮ್ಮ ರೇಷನ್ ಕಾರ್ಡ್ ನಂಬರ್ (ration Card Number) ಎಸ್ಎಂಎಸ್ (SMS) ಮಾಡಿದರೆ ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಇನ್ನು ಈ ತಿಂಗಳು ಯಾರ ಖಾತೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೋ ಯಾರ ಬ್ಯಾಂಕ್ ಅಕೌಂಟ್ ಚಾಲ್ತಿಯಲ್ಲಿ ಇಲ್ಲವೋ ಅಂತವರಿಗೆ ಹಣ ಬರುವುದಿಲ್ಲ. ಎಲ್ಲ ಸಮಸ್ಯೆಗಳನ್ನು ಬೇಗ ಸರಿಪಡಿಸಿಕೊಂಡರೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಸುಲಭವಾಗಿ ಪಡೆದುಕೊಳ್ಳಬಹುದು. ಇದರ ಜೊತೆಗೆ ಆಧಾರ್ ಕಾರ್ಡ್ (Adhaar card) ನಲ್ಲಿ ಅಗತ್ಯವಿರುವ ತಿದ್ದುಪಡಿಗಳನ್ನು ಕೂಡ ಮಾಡಿಕೊಳ್ಳಲು ಸರಕಾರ ಅವಕಾಶ ನೀಡಿದೆ.

Government brought new rules for Gruha lakshmi Yojana, Many People not received money to Bank Account