ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government) ಕೇಂದ್ರ ಸರ್ಕಾರ (Central Government) ಉಚಿತವಾಗಿ ಕೊಡುತ್ತಿರುವ 5 ಕೆಜಿ ಅಕ್ಕಿಗಳ (Free Rice) ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ರಾಜ್ಯದ ಫಲಾನುಭವಿಗಳಿಗೆ ನೀಡುವುದಾಗಿ ಭರವಸೆ ಕೊಟ್ಟಿದ್ದು, ಆದರೆ ಬೇಕಾಗಿರುವಷ್ಟು ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗದೆ ಇರುವ ಕಾರಣ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿಗೆ ತಲಾ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ (DBT) ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವೇ.
ಜುಲೈ ಹಾಗೂ ಆಗಸ್ಟ್ ತಿಂಗಳ ಅನ್ನ ಭಾಗ್ಯ ಯೋಜನೆ (Annabhagya Scheme) ಈಗಾಗಲೇ ಬಿಡುಗಡೆಯಾಗಿದೆ ಹಾಗೂ ಸಾಕಷ್ಟು ಜನರ ಖಾತೆಗೆ ಹಣ ಕೂಡ ಹೋಗಿದೆ, ಆದರೆ ಇನ್ನೂ ಹಲವರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯಾಗಲಿ ಹಣವಾಗಲಿ (No Money No Rice) ಸಿಕ್ಕಿಲ್ಲ.
ವಾರ ಕಳೆದ್ರೂ ಗೃಹಲಕ್ಷ್ಮಿ ಹಣ ಬಂದಿಲ್ವಾ? ಹಾಗಾದ್ರೆ ಸರ್ಕಾರದ ಈ ನಂಬರ್ ಗೆ SMS ಮಾಡಿ, ಹಣಬರುತ್ತೆ!
ಸುಮಾರು 29 ಲಕ್ಷ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ತಾಂತ್ರಿಕ ದೋಷದ (Technical error) ಕಾರಣದಿಂದ ಇಂತಹ ಕುಟುಂಬಗಳಿಗೆ ಹಣ ನೀಡಲಾಗಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ.
ಫಲಾನುಭವಿಗಳ ಕುಟುಂಬದಲ್ಲಿ ಇರುವವರ ಸಂಖ್ಯೆ ಕನಿಷ್ಠ ಮಿತಿಯನ್ನು ದಾಟಿದೆ ಹಾಗೂ ಸತತ ಮೂರು ತಿಂಗಳಿನಿಂದ ಪಡಿತರ ಪಡೆಯದೆ ಇರುವವರಿಗೆ ಹಣ ನೇರ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.
ಸ್ಥಗಿತಗೊಂಡ ಡಿ ಬಿ ಟಿ:
ತಾಂತ್ರಿಕ ದೋಷದಿಂದ 29 ಲಕ್ಷ ಪಡಿತರ ಕುಟುಂಬಗಳಿಗೆ ಯೋಜನೆಯ ನೇರ ಹಣ ವರ್ಗಾವಣೆ (DBT) ಮಾಡುವುದನ್ನು ಸ್ಥಗಿತಗೊಳಿಸಿದ್ದೇವೆ ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಅಲ್ಲದೆ ಯಾರಿಗೆ ಪಡಿತರ ಸಿಕ್ಕಿಲ್ಲವೋ ಅಂತವರು ತಮ್ಮ ಪಡಿತರ ಚೀಟಿಯನ್ನು ಕೂಡಲೇ ತಿದ್ದುಪಡಿ ಮಾಡಿಕೊಂಡರೆ ಮತ್ತೆ ಈ ಸೌಲಭ್ಯ ಸಿಗುತ್ತದೆ ಎಂದಿದ್ದಾರೆ.
ಕೇವಲ 10ನೇ ತರಗತಿ ಪಾಸ್ ಆಗಿದ್ರು ಸಾಕು, ಜಿಲ್ಲಾ ನ್ಯಾಯಾಲಯದಲ್ಲಿ ಸಿಗುತ್ತೆ ಕೆಲಸ; 37 ಸಾವಿರ ವೇತನ
ಇಷ್ಟು ಕುಟುಂಬಗಳು ಮೂರು ತಿಂಗಳಿನಿಂದ ರೇಷನ್ ಪಡೆದಿಲ್ಲ:
ಇನ್ನು ರಾಜ್ಯದಲ್ಲಿ ಸುಮಾರು 5.41 ಲಕ್ಷ ಕುಟುಂಬಗಳು ಹಾಗೂ ಸುಮಾರು 3.50 ಲಕ್ಷ ಕುಟುಂಬಗಳು ಗರಿಷ್ಠ ಸದಸ್ಯರ ಸಂಖ್ಯೆಯನ್ನು ಮೀರಿರುವ ಕಾರಣ ಅಂತಹ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
ಆದರೆ ಇಂಥವರಿಗೆ ಅನ್ನ ಭಾಗ್ಯ ಯೋಜನೆಯ ಹಣ ಬರುವುದಿಲ್ಲ ಅಷ್ಟೇ, ಉಳಿದಂತೆ ಸರ್ಕಾರದಿಂದ ಸಿಗುವ ಐದು ಕೆಜಿ ಅಕ್ಕಿ ಸಿಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.
ಕಳೆದ ಎರಡು ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯ ನೇರಹಣ ವರ್ಗಾವಣೆಯ ಲಾಭ ಪಡೆದುಕೊಂಡವರಿಗೆ ಸರ್ಕಾರದ ಈ ಹೊಸ ರೂಲ್ಸ್ (Rules) ನಿರಾಸೆ ಮೂಡಿಸಿದೆ. ಯಾರ ಮನೆಯಲ್ಲಿ ಮೂರು ತಿಂಗಳಿನಿಂದ ರೇಷನ್ (ration) ಪಡೆದುಕೊಂಡಿಲ್ಲವೋ ಹಾಗೂ ಗರಿಷ್ಠ ಸದಸ್ಯರ ಸಂಖ್ಯೆಯನ್ನು ಹೊಂದಿದೆಯೋ ಅಂತವರಿಗೆ ಹೆಚ್ಚುವರಿ ಅಕ್ಕಿ ಹಾಗೂ ಹಣ ಎರಡು ಕೂಡ ಸಿಗದೇ ಇರುವುದು ಹಲವರ ಬೇಸರಕ್ಕೆ ಕಾರಣವಾಗಿದೆ.
ಗೃಹಲಕ್ಷ್ಮಿ ಯೋಜನೆಯಲ್ಲೂ ದೊಡ್ಡ ಬದಲಾವಣೆ:
ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಯ ಅಡಿಯಲ್ಲಿಯೂ ಕೂಡ 2000 ರೂಪಾಯಿಗಳನ್ನು ಹಲವು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಹಿಂದೆಯೇ ತಿಳಿಸಿರುವಂತೆ, ಆದಾಯ ತೆರಿಗೆ ಹಾಗೂ ಜಿ ಎಸ್ ಟಿ (GST) ಪಾವತಿ ಮಾಡುವವರು ಸರ್ಕಾರಿ ನೌಕರಿಯಲ್ಲಿ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಇರಲಿಲ್ಲ
ಆದರೂ ಹಲವು ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಪಡಿತರ ಚೀಟಿ ಮನೆಯ ಯಜಮಾನನ ಹೆಸರಿನಲ್ಲಿ ಇದ್ದರೆ ಕೂಡ ಅಂಥವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.
ಆದ್ದರಿಂದ ಸರ್ಕಾರ ಕೊಟ್ಟಿರುವ ಅವಧಿಯ ಒಳಗೆ (ಸಪ್ಟೆಂಬರ್ 14) ನೀವು ನಿಮ್ಮ ಪಡಿತರ ಚೀಟಿಯಲ್ಲಿ ಯಜಮಾನನ ಹೆಸರನ್ನು ಬದಲಾಯಿಸಿ ಯಜಮಾನಿ ಹೆಸರಿಗೆ ಪಡಿತರ ಚೀಟಿ ಮಾಡಿಸಿಕೊಳ್ಳುವುದು ಅತ್ಯವಶ್ಯಕ.
ತಿದ್ದುಪಡಿಗೂ ಕೂಡ ಹೆಚ್ಚು ಸಮಯ ಇಲ್ಲದೆ ಇರುವ ಕಾರಣ ಸರ್ವರ್ ಸಮಸ್ಯೆಯೂ ಇರುವುದರಿಂದ ತಿದ್ದುಪಡಿ ಮಾಡಿಕೊಳ್ಳಲು ಕೂಡ ಜನಪರದಾಡುವಂತೆ ಆಗಿದೆ.
Annabhagya Yojana New Update, Such people will not get money for even 5 kg of rice
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.