ಕೇವಲ 10ನೇ ತರಗತಿ ಪಾಸ್ ಆಗಿದ್ರು ಸಾಕು, ಜಿಲ್ಲಾ ನ್ಯಾಯಾಲಯದಲ್ಲಿ ಸಿಗುತ್ತೆ ಕೆಲಸ; 37 ಸಾವಿರ ವೇತನ

ಹಾಸನ ಜಿಲ್ಲಾ ನ್ಯಾಯಾಲಯವು (Hassan District court Recruitment) ತನ್ನ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ (Jobs) ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ (Interested Candidate) ಅರ್ಜಿ ಆಹ್ವಾನ ಮಾಡಿದೆ.

ಸರ್ಕಾರಿ ಉದ್ಯೋಗದ (Government Job) ಕನಸು ಕಾಣುತ್ತಿರುವವರಿಗೆ ಇದು ಒಂದು ಸುವರ್ಣ ಅವಕಾಶ, ಅದರಲ್ಲೂ ನೀವು ಕೇವಲ 10ನೇ ತರಗತಿ ಉತ್ತೀರ್ಣರಾಗಿದ್ದರೆ ನಿಮಗೆ ಒಂದು ಅತ್ಯುತ್ತಮವಾದ ಅವಕಾಶ ಇದಾಗಿದ್ದು ಈ ಹುದ್ದೆಗೆ ತಕ್ಷಣ ಅರ್ಜಿ ಸಲ್ಲಿಸಿ (Apply for Job).

ಜಿಲ್ಲಾ ನ್ಯಾಯಾಲಯದಲ್ಲಿ ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ, ಈ ಉದ್ಯೋಗದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ವಾರ ಕಳೆದ್ರೂ ಗೃಹಲಕ್ಷ್ಮಿ ಹಣ ಬಂದಿಲ್ವಾ? ಹಾಗಾದ್ರೆ ಸರ್ಕಾರದ ಈ ನಂಬರ್ ಗೆ SMS ಮಾಡಿ, ಹಣಬರುತ್ತೆ!

ಕೇವಲ 10ನೇ ತರಗತಿ ಪಾಸ್ ಆಗಿದ್ರು ಸಾಕು, ಜಿಲ್ಲಾ ನ್ಯಾಯಾಲಯದಲ್ಲಿ ಸಿಗುತ್ತೆ ಕೆಲಸ; 37 ಸಾವಿರ ವೇತನ - Kannada News

ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇದೆ ಹುದ್ದೆಗಳು;

ಹಾಸನ ಜಿಲ್ಲಾ ನ್ಯಾಯಾಲಯವು (Hassan District court Recruitment) ತನ್ನ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ (Jobs) ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ (Interested Candidate) ಅರ್ಜಿ ಆಹ್ವಾನ ಮಾಡಿದೆ.

ಸರ್ವರ್ ಹಾಗೂ ಪ್ಯೂನ್ ಹುದ್ದೆಗಳು (Server and Peon Posts) ಖಾಲಿಯಿದ್ದು ಕೇವಲ 10ನೇ ತರಗತಿ ಉತ್ತೀರ್ಣರಾಗಿರುವವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು, ಜೊತೆಗೆ ಆಕರ್ಷಕವಾದ ವೇತನ ಕೂಡ ಸಿಗುತ್ತದೆ.

ಅರ್ಹತೆಗಳು:

ಹಾಸನ ಜಿಲ್ಲಾ ನ್ಯಾಯಾಲಯ ಅಧಿಕೃತ ಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಉತ್ತೀರ್ಣರಾಗಿರುವ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು:

ಹಾಸನ ನ್ಯಾಯಾಲಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಗರಿಷ್ಠ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಇನ್ನು ವಯೋಮಿತಿ ಸಡಿಲಿಕೆ ಕೂಡ ನೀಡಲಾಗಿದ್ದು SC/ST/Cat-I ಅಭ್ಯರ್ಥಿಗಳಿಗೆ 5 ವರ್ಷ, Cat-2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ PWD/ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

Govt job vacancyಹುದ್ದೆಗಳ ವಿವರ:

ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 43 ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ 11 ಸರ್ವರ್ ಹುದ್ದೆಗಳು ಹಾಗೂ 32 ಪ್ಯೂನ್ ಹುದ್ದೆಗಳು ಖಾಲಿ ಇವೆ. ಆಯ್ಕೆಯಾದ ಅಭ್ಯರ್ಥಿಗಳು ಹಾಸನದಲ್ಲಿಯೇ ಉದ್ಯೋಗ ಮಾಡಬೇಕು.

ಇನ್ನು ವೇತನವನ್ನು ನೋಡುವುದಾದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ 17,000ರೂ.ಗಳಿಂದ 37,900 ರೂ.ಗಳ ವರೆಗೆ ವೇತನ ನೀಡಲಾಗುವುದು. ಸರ್ವರ್ ಹುದ್ದೆಗೆ ರೂ.19950-37900 ಹಾಗೂ ಪ್ಯೂನ್ ಹುದ್ದೆಗೆ ರೂ.17000-28950 ವೇತನ ಸಿಗಲಿದೆ.

ಆಯ್ಕೆ ಪ್ರಕ್ರಿಯೆ:

ಮೆರಿಟ್, ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹಾಸನ ಜಿಲ್ಲಾ ನ್ಯಾಯಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು ಅಕ್ಟೋಬರ್ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಚಲನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 5, 2023.

ಅರ್ಜಿ ಶುಲ್ಕ: (Application Fee)

ಎಸ್ ಸಿ, ಎಸ್ ಟಿ, Cat-I ಮತ್ತು PWD ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಅದೇ ಸಾಮಾನ್ಯ/ಕ್ಯಾಟ್-2ಎ/2ಬಿ/3ಎ/3ಬಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ರೂ.200ನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. ನೀವು ಕೂಡ ಈ ಮೇಲಿನ ಅರ್ಹತೆ ಹೊಂದಿದ್ದು ಈ ಹುದ್ದೆ ಪಡೆದುಕೊಳ್ಳಲು ಆಸಕ್ತರಾಗಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ.

Only passing 10th class is enough to get a Government job in District Court

Follow us On

FaceBook Google News

Only passing 10th class is enough to get a Government job in District Court