ವಾರ ಕಳೆದ್ರೂ ಗೃಹಲಕ್ಷ್ಮಿ ಹಣ ಬಂದಿಲ್ವಾ? ಹಾಗಾದ್ರೆ ಸರ್ಕಾರದ ಈ ನಂಬರ್ ಗೆ SMS ಮಾಡಿ, ಹಣಬರುತ್ತೆ!
ಸಹಾಯವಾಣಿ ನಂಬರ್, 8147500500 ಈ ನಂಬರ್ ಗೆ ನಿಮ್ಮ ರಿಜಿಸ್ಟರ್ ಮೊಬೈಲ್ ಅಥವಾ ಇತರ ಮೊಬೈಲ್ ಸಂಖ್ಯೆಯಿಂದ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಸ್ ಎಂ ಎಸ್ ಮಾಡಬೇಕು.
ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಈಗಾಗಲೇ ಜಾರಿಯಾಗಿದೆ. ಕಳೆದ ವಾರ ಮೈಸೂರಿನ ಕಾಲೇಜು ಆವರಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರ ಖಾತೆಗೆ 2000 ರೂ. ಗಳನ್ನು ಹಾಕುವುದಕ್ಕೆ ಸರ್ಕಾರದಿಂದ ಅಧಿಕೃತವಾಗಿ ಒಪ್ಪಿಗೆ ಸಿಕ್ಕಿತು.
ಈ ಕಾರ್ಯಕ್ರಮದ ಉದ್ಘಾಟನೆಯ ನಂತರ ಹಲವರ ಖಾತೆಗೆ 2000 ರೂ. ಜಮಾ ಕೂಡ ಆಗಿವೆ. ಈಗಾಗಲೇ ಹಣ ಜಮಾ ಆಗಿರುವವರು ಸರ್ಕಾರಕ್ಕೆ ಅಭಿನಂದನೆ ಹೇಳುತ್ತಿದ್ದರೆ ಇನ್ನೂ ಕೆಲವರು ತಮ್ಮ ಖಾತೆಗೆ (Bank Account) ಹಣವೇ ಬಂದಿಲ್ಲ ಎಂದು ಹಲವತ್ತುಕೊಳ್ಳುತ್ತಿದ್ದಾರೆ.
ಈಗಾಗಲೇ ಅನ್ನ ಭಾಗ್ಯ (Annabhagya scheme) ಯೋಜನೆಯ ಅಡಿಯಲ್ಲಿ ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಹಲವರು ಕಂಪ್ಲೇಂಟ್ ಮಾಡಿದ್ದಾರೆ ಇದರ ಜೊತೆಗೆ ಈಗಾಗಲೇ ಅರ್ಜಿ ಸಲ್ಲಿಸಿ ಅರ್ಜಿ ಯಶಸ್ವಿ ಆಗಿದ್ದರೂ ಕೂಡ ತಮ್ಮ ಖಾತೆಗೆ ಎರಡು ಸಾವಿರ ರೂಪಾಯಿಗಳು ಬರಲಿಲ್ಲ ಎಂದು ಗೃಹಿಣಿಯರು ಆತಂಕಗೊಂಡಿದ್ದಾರೆ.
ಗೃಹಜ್ಯೋತಿ, ಗೃಹಲಕ್ಷ್ಮಿ ನಂತರ ಅಂಥದ್ದೇ ಮತ್ತೊಂದು ಯೋಜನೆ ತರಲು ಮುಂದಾದ ಸರ್ಕಾರ
ಅರ್ಜಿ ಹಾಕಿದ ಫಲಾನುಭವಿಗಳು ಎಷ್ಟು?
ನಮ್ಮ ರಾಜ್ಯದಲ್ಲಿ ಸರ್ಕಾರ ಹೇಳುವ ಪ್ರಕಾರ ಒಟ್ಟು 1.28 ಗೃಹಿಣಿಯರು ಫಲಾನುಭವಿಗಳು, ಆದರೆ ಇದರಲ್ಲಿ ಇವರಿಗೆ ಸಲ್ಲಿಕೆಯಾಗಿರುವ ಅರ್ಜಿ 1. 11 ಕೋಟಿ ಮಹಿಳೆಯರು ಮಾತ್ರ. ಆದರೆ ಯೋಜನೆಗೆ ಇನ್ನೂ ಡೆಡ್ ಲೈನ್ ಘೋಷಣೆ ಮಾಡಿಲ್ಲದೆ ಇರುವ ಕಾರಣ ಇನ್ನೂ ಕೂಡ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು.
1.11 ಕೋಟಿ ಮಹಿಳೆಯರು ಅರ್ಜಿ (Application) ಸಲ್ಲಿಸಿದ್ದು ಅದರಲ್ಲಿ ಹಲವರಿಗೆ ಇನ್ನೂ ಹಣ ಬಂದಿಲ್ಲ ಹಾಗಾಗಿ ತಾವು ಅರ್ಜಿ ಸಲ್ಲಿಸಿ ಯಶಸ್ವಿಯಾಗಿದ್ದರು ಕೂಡ ಹಣ ಖಾತೆಗೆ ಬಂದು ತಲುಪಿಲ್ಲ ಎನ್ನುವುದು ಗೃಹಿಣಿಯರ ಸಮಸ್ಯೆಯಾಗಿದೆ.
ಗೃಹಜ್ಯೋತಿ ಯೋಜನೆ ಶುರುವಾದ ಒಂದೇ ತಿಂಗಳಿಗೆ ಸರ್ಕಾರದಿಂದ ಹೊಸ ನಿಯಮ! ಧಿಡೀರ್ ಬದಲಾವಣೆ
ಗೃಹಲಕ್ಷ್ಮಿ ಹಣ ಖಾತೆಗೆ ಬಾರದೇ ಇರಲು ಕಾರಣವೇನು
ಆದರೆ ಸಾಕಷ್ಟು ಜನರ ಬ್ಯಾಂಕ್ ಖಾತೆ ಹಾಗೂ ಆಧಾರ್ ಜೊತೆಗೆ ಫೋನ್ ನಂಬರ್ ಲಿಂಕ್ ಆಗಿಲ್ಲ, ಆಧಾರ್ ಸೀಡಿಂಗ್ ಆಗದೇ ಇರುವ ಕಾರಣದಿಂದ ಕೂಡ ಹಲವು ಗೃಹಿಣಿಯರಿಗೆ ಅವರ ಖಾತೆಗೆ 2000 ಬಂದು ತಲುಪಿಲ್ಲ. ಇದಕ್ಕಾಗಿ ಗ್ರಹಿಣಿಯರು ಬ್ಯಾಂಕ್ ಗೆ ಹೋಗಿ ಅಥವಾ ಆಧಾರ್ ಕೇಂದ್ರಗಳಲ್ಲಿ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಬೇಕು. ಎಲ್ಲವೂ ಸರಿಯಾಗಿದ್ದರೆ ನೀವು ಬ್ಯಾಂಕ್ ನಲ್ಲಿ ಖಾತೆಯನ್ನು ಅಪ್ಡೇಟ್ ಮಾಡಿಕೊಳ್ಳಬಹುದು.
ಇನ್ಮುಂದೆ ಸ್ಮಾರ್ಟ್ ರೇಷನ್ ಕಾರ್ಡ್ ಇದ್ರೆ ಮಾತ್ರ ರೇಷನ್ ಸಿಗೋದು! ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ
ಇನ್ನು ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಪಡಿತರ ಚೀಟಿ ಮನೆಯ ಯಜಮಾನಿಯ ಹೆಸರಿನಲ್ಲಿ ಇರಬೇಕು ಒಂದು ವೇಳೆ ಈ ರೀತಿ ಹೆಸರು ಬದಲಾಗದೆ ಇದ್ದಲ್ಲಿ ನೀವು ತಕ್ಷಣವೇ ಪಡಿತರ ಚೀಟಿಯಲ್ಲಿ ಹೆಸರು ಬದಲಾಯಿಸಿಕೊಳ್ಳಬಹುದು.
ಸೆಪ್ಟೆಂಬರ್ 1ರಿಂದ 10ನೇ ತಾರೀಖಿನವರೆಗೆ ಪಡಿತರ ಚೀಟಿಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳಲು ಅಥವಾ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಈಗ ಈ ಅವಧಿಯನ್ನು ಸಪ್ಟೆಂಬರ್ 14ನೇ ತಾರೀಕಿನವರೆಗೆ ಅಂದರೆ ಇನ್ನೂ ಹೆಚ್ಚುವರಿಯಾಗಿ ನಾಲ್ಕು ದಿನ ಅವಕಾಶ ನೀಡಲಾಗಿದೆ.
ಇದರಿಂದಾಗಿ ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ತಿದ್ದುಪಡಿ ಸಮಸ್ಯೆ ಇದ್ದರೂ ತಕ್ಷಣವೇ ಅದನ್ನು ಮಾಡಿಸಿಕೊಂಡು ನಿಮ್ಮ ಖಾತೆಗೆ ಹಣ ಬರುವಂತೆ ಮಾಡಬಹುದು.
ಸರ್ಕಾರದ ಸಹಾಯವಾಣಿಗೆ ಕಳುಹಿಸಿ ಮೆಸೇಜ್
ಸಹಾಯವಾಣಿ ನಂಬರ್, 8147500500 ಈ ನಂಬರ್ ಗೆ ನಿಮ್ಮ ರಿಜಿಸ್ಟರ್ ಮೊಬೈಲ್ ಅಥವಾ ಇತರ ಮೊಬೈಲ್ ಸಂಖ್ಯೆಯಿಂದ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಸ್ ಎಂ ಎಸ್ ಮಾಡಬೇಕು.
ಹೀಗೆ ಮಾಡಿದರೆ ತಕ್ಷಣವೇ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಸ್ಥಿತಿ ಏನಾಗಿದೆ ಎಂಬುದು ಮೆಸೇಜ್ ಮೂಲಕವೇ ನಿಮಗೆ ತಿಳಿಯುತ್ತದೆ. ಸರ್ಕಾರ ಹಿಂತಿರುಗಿ ಕಳುಹಿಸಿರುವ ಮೆಸೇಜ್ ಮೂಲಕ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
ಒಂದು ವೇಳೆ ಅರ್ಜಿ ಸಲ್ಲಿಕೆ ಆಗಿಲ್ಲ ಎಂಬುದಾಗಿ ಬಂದರೆ ನೀವು ತಕ್ಷಣವೇ ಹೋಗಿ ಮತ್ತೊಮ್ಮೆ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಸರ್ವರ್ ಸಮಸ್ಯೆಯಿಂದಾಗಿ ನೀವು ಸಲ್ಲಿಸಿರುವ ಅರ್ಜಿ ಸರ್ಕಾರಕ್ಕೆ ತಲುಪದೇ ಇದ್ದಿರಬಹುದು. ಹಾಗಾಗಿ ಈ ರೀತಿಯಾಗಿ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ 2,000 ರೂ.ಗಳನ್ನು ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು.
Helpline Number For Check Gruha Lakshmi Scheme Application Status
Follow us On
Google News |