ಗೃಹಜ್ಯೋತಿ ಯೋಜನೆ ಶುರುವಾದ ಒಂದೇ ತಿಂಗಳಿಗೆ ಸರ್ಕಾರದಿಂದ ಹೊಸ ನಿಯಮ! ಧಿಡೀರ್ ಬದಲಾವಣೆ

ಗೃಹಜ್ಯೋತಿ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು, ಆದರೆ ಈಗ ಸರ್ಕಾರ ತೆಗೆದುಕೊಂಡಿರುವ ಒಂದು ನಿರ್ಧಾರದಿಂದ ಜನರ ಕೋಪಕ್ಕೆ ಗುರಿಯಾಗಿದೆ.

ಕಾಂಗ್ರೆಸ್ ಸರ್ಕಾರದ 5 ಭರವಸೆಯ ಯೋಜನೆಗಳಿಂದ (Govt Schemes) ರಾಜ್ಯದ ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲ ಆಗುತ್ತದೆ ಎನ್ನುವ ದೃಷ್ಟಿಯಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಗೆಲ್ಲಿಸಿದರು.

ಕಾಂಗ್ರೆಸ್ ಪಕ್ಷ ಕೂಡ ಗೆದ್ದ ಬಳಿಕ ತಾವು ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುತ್ತ ಬರುತ್ತಿದೆ. ಎಲೆಕ್ಷನ್ ವೇಳೆ ಕಾಂಗ್ರೆಸ್ ಪಕ್ಷ ಕೊಟ್ಟಿದ್ದ 5 ಭರವಸೆಗಳ ಪೈಕಿ ಈಗ 4 ಯೋಜನೆಗಳು ಜಾರಿಗೆ ಬಂದಿದೆ. ಶಕ್ತಿ ಯೋಜನೆಯ ಮೂಲಕ ರಾಜ್ಯಾದ್ಯಂತ ಹೆಣ್ಣುಮಕ್ಕಳು ಉಚಿಯ ಬಸ್ ಪ್ರಯಾಣ ಮಾಡುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಿಂದ (Gruha Lakshmi Scheme) ಮನೆ ನಡೆಸುವ ಗೃಹಿಣಿಯರಿಗೆ ತಿಂಗಳಿಗೆ 2000 ರೂಪಾಯಿ ಸಿಗುತ್ತಿದೆ, ಅನ್ನಭಾಗ್ಯ ಯೋಜನೆಯ (Annabhagya Scheme) ಮೂಲಕ 5 ಕೆಜಿ ಅಕ್ಕಿ ಜೊತೆಗೆ ಇನ್ನು ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲಾಗುತ್ತಿದೆ.

ಗೃಹಜ್ಯೋತಿ ಯೋಜನೆ ಶುರುವಾದ ಒಂದೇ ತಿಂಗಳಿಗೆ ಸರ್ಕಾರದಿಂದ ಹೊಸ ನಿಯಮ! ಧಿಡೀರ್ ಬದಲಾವಣೆ - Kannada News

ಇನ್ಮುಂದೆ ಸ್ಮಾರ್ಟ್ ರೇಷನ್ ಕಾರ್ಡ್ ಇದ್ರೆ ಮಾತ್ರ ರೇಷನ್ ಸಿಗೋದು! ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ

ಯುವನಿಧಿ ಯೋಜನೆ ವರ್ಷಾಂತ್ಯಕ್ಕೆ ಚಾಲನೆಗೆ ಬರಲಿದೆ. ಇನ್ನು ಗೃಹಜ್ಯೋತಿ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (Free Electricity) ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು, ಆದರೆ ಈಗ ಸರ್ಕಾರ ತೆಗೆದುಕೊಂಡಿರುವ ಒಂದು ನಿರ್ಧಾರದಿಂದ ಜನರ ಕೋಪಕ್ಕೆ ಗುರಿಯಾಗಿದೆ.

ಅದು ಯಾಕೆ ಎಂದರೆ ಇದೀಗ ತಮ್ಮ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದ ಸರ್ಕಾರಕ್ಕೆ ಆರ್ಥಿಕವಾಗಿ ತೊಂದರಯಾಗಿದೆ. ಹಾಗಾಗಿ ಆ ಸಮಸ್ಯೆಯನ್ನು ಸರಿ ಮಾಡಿಕೊಳ್ಳಲು ಸರ್ಕಾರ ಈಗ ಹೊಸದೊಂದು ನಿರ್ಧಾರವನ್ನು ಮಾಡಿದ್ದು, ಇದರಿಂದ ಜನರ ಕೋಪಕ್ಕೆ ಗುರಿಯಾಗಿದೆ.

ಸರ್ಕಾರಕ್ಕೆ ಈಗ ಹಣಕಾಸಿನ ವಿಚಾರಾದಲ್ಲಿ ಸಮಸ್ಯೆಗಳು ಉಂಟಾಗಿ, ಆರ್ಥಿಕ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ, ಜನರ ಮೇಲೆ ಟ್ಯಾಕ್ಸ್ ಹಾಕಲಾಗುತ್ತಿದೆ, ಇದರಿಂದ ಬರುವ ಹಣದಲ್ಲಿ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಲಾಗಿದೆ..

Gruha Jyothi Schemeಇದೇ ಕಾರಣಕ್ಕೆ ಎಲ್ಲಾ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ, ಜನರ ಮೇಲೆ ತೆರಿಗೆ ಹೇರಿಕೆ ಮಾಡಲಾಗುತ್ತಿದೆ. ಇನ್ನು ಗೃಹಜ್ಯೋತಿ ಯೋಜನೆ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಈ ಯೋಜನೆಯನ್ನು ಜಾರಿಗೆ ತಂದ ನಂತರ ಕೂಡ, ಸರ್ಕಾರಕ್ಕೆ ವಿದ್ಯುತ್ ದರದ (Electricity Rate) ವಿಚಾರದಲ್ಲಿ ಆರ್ಥಿಕವಾಗಿ ತೊಂದರೆ ಆಗುತ್ತಿರುವ ಕಾರಣದಿಂದಲೇ ವಿದ್ಯುತ್ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ. ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಎಸ್ಕಾಂ ಇಂದ ಸರ್ಕಾರಕ್ಕೆ ಮನವಿ ಬಂದಿದೆ. ಆದರೆ ಈಗ ಪ್ರತಿ ಯೂನಿಟ್ ಗೆ ಎಷ್ಟು ವಿದ್ಯುತ್ ಏರಿಸಬೇಕು ಎನ್ನುವುದೇ ಸಮಸ್ಯೆ ಆಗಿದೆ..

ನಾಯಿ ಸಾಕಿರುವ ಬೆಂಗಳೂರು ಜನಕ್ಕೆ BBMP ಹೊಸ ರೂಲ್ಸ್! ರಾತ್ರೋರಾತ್ರಿ ಜಾರಿಗೊಂಡ ಹೊಸ ನಿಯಮ

ಮೊದಲಿಗೆ ಸರ್ಕಾರವು ಬಜೆಟ್ ನ ಹಣ ಖಾಲಿ ಆಗುವವರೆಗೂ ವಿದ್ಯುತ್ ದರ ಏರಿಸುವುದಿಲ್ಲ ಎಂದು ಹೇಳಿತ್ತು, ಆದರೆ ಈಗ ಬೆಲೆ ಏರಿಕೆಗೆ ತೀರ್ಮಾನ ಮಾಡಿದೆ. ಇನ್ನು ಬೆಲೆ ಏರಿಕೆ ಎಷ್ಟಾಗಬಹುದು ಎಂದು ನೋಡುವುದಾದರೆ, ಸೆಸ್ಕಾಂ (SESCOM) 82 ಪೈಸೆ, ಹೆಸ್ಕಾಂ (HESCOM) 1.69ಪೈಸೆ, ಬೆಸ್ಕಾಂ (BESCOM) 1 ರಿಂದ 15 ರೂಪಾಯಿ, ಮೆಸ್ಕಾಂ (MESCOM) 1.35 ಪೈಸೆ, ಜೆಸ್ಕಾಂ (GESCOM) 70 ಪೈಸೆ. ಇಷ್ಟು ಮೊತ್ತ ಬೆಲೆ ಜಾಸ್ತಿಯಾಗಬಹುದು ಎಂದು ಮಾಹಿತಿ ಸಿಕ್ಕಿದೆ.

ಸರ್ಕಾರವು ಇಂಧನ ಶುಲ್ಕ ಮತ್ತು ಹೊಂದಣಿಕೆ ಬೆಲೆಯ ಆಧಾರದ ಮೇಲೆ ನಿರ್ಧಾರ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಬೆಲೆ ಏರಿಕೆ ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿರುವ ಜನರಿಗಾಗಿ ಅಲ್ಲ, ಕಮರ್ಷಿಯಲ್ ಆಗಿ ವಿದ್ಯುತ್ ಬಳಕೆ ಮಾಡುವವರಿಗೆ ಆಗಿದೆ.

A new rule from the government within a month of the start of Gruha Jyothi Yojana

Follow us On

FaceBook Google News

A new rule from the government within a month of the start of Gruha Jyothi Yojana