Karnataka NewsBengaluru News

ಇನ್ಮುಂದೆ ಸ್ಮಾರ್ಟ್ ರೇಷನ್ ಕಾರ್ಡ್ ಇದ್ರೆ ಮಾತ್ರ ರೇಷನ್ ಸಿಗೋದು! ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ

ಸರ್ಕಾರವು ರೇಷನ್ ಕಾರ್ಡ್ ಗೆ (Ration Card) ಸಂಬಂಧಿಸಿದ ಹಾಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ರೇಷನ್ ಕಾರ್ಡ್ ವಿಷಯದಲ್ಲಿ ದುರ್ಬಳಕೆ ನಡೆಯುತ್ತಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ.

ಇದನ್ನು ತಪ್ಪಿಸಲು ಸರ್ಕಾರ ಸ್ಮಾರ್ಟ್ ರೇಷನ್ ಕಾರ್ಡ್ (Smart Ration Card) ವ್ಯವಸ್ಥೆಯನ್ನು ತರುವುದಕ್ಕೆ ಮುಂದಾಗಿದೆ. ಈ ಮೂಲಕ ಜನರು ನ್ಯಾಯಬೆಲೆ ಅಂಗಡಿಯಲ್ಲಿ ಕೇವಲ ಒಂದು ಸ್ಕ್ಯಾನ್ ಮಾಡುವ ಮೂಲಕ ರೇಷನ್ ಪಡೆಯಬಹುದು, ಇದರಿಂದ ಆಗುವ ಸಮಸ್ಯೆಗಳು ತಪ್ಪುತ್ತದೆ.

Ration card in smart card model, know the benefits

ಇನ್ನುಮುಂದೆ ನಮ್ಮ ದೇಶದಲ್ಲಿ ಡಿಜಿಟಲೈಸೇಷನ್ (Digitalization) ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲೇ ರೇಷನ್ ಕಾರ್ಡ್ ಅನ್ನು ಕೂಡ ಡಿಜಿಟಲೈಸ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ ಸರ್ಕಾರ. ಈ ಮೂಲಕ ಕಡಿಮೆ ಸಮಯದಲ್ಲಿ ಎಲ್ಲಾ ಸೌಲಭ್ಯಗಳು ಕೂಡ ಜನರನ್ನು ತಲುಪುತ್ತದೆ..

ಕಡೆಗೂ ಬಿಡುಗಡೆಯಾಯ್ತು BPL ಕಾರ್ಡ್ ರದ್ದಾದವರ ಪಟ್ಟಿ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ

ಈ ರೀತಿಯಾಗಿ ಸ್ಮಾರ್ಟ್ ರೇಷನ್ ಕಾರ್ಡ್ ತರುವ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಸ್ಮಾರ್ಟ್ ಕಾರ್ಡ್ ಜನರನ್ನು ತಾಲುಪಿದರೆ, ಅದರ ಮೇಲೆ ಒಂದು QR ಕೋಡ್ ಇರುತ್ತದೆ, ಅದನ್ನು ಸ್ಕ್ಯಾನ್ ಮಾಡಿದರೆ ಎಲ್ಲಾ ಮಾಹಿತಿ ಸಿಗುತ್ತದೆ.

ಈಗ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಕೂಡ ಲಿಂಕ್ ಮಾಡಲಾಗಿದೆ.. ಹಾಗಾಗಿ ರೇಷನ್ ದುರ್ಬಳಕೆ ಆಗುವುದು ತಪ್ಪುತ್ತದೆ. ಹಾಗೆಯೇ ಆಯಾ ಕುಟುಂಬದವರಿಗೆ ಮಾತ್ರ ಸರಿಯಾದ ಪ್ರಯೋಜನ ಸಿಗುತ್ತದೆ.

ಸ್ಮಾರ್ಟ್ ರೇಷನ್ ಕಾರ್ಡ್ ನಲ್ಲಿ ಬರುವ ಕ್ಯುಆರ್ ಕೋಡ್ (QR Code) ಇಂದ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಎಲ್ಲಾ ಗ್ರಾಹಕರ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದರಲ್ಲಿ ಫೀಡಿಂಗ್ ಎಲೆಕ್ಟ್ರಾನಿಕ್ಸ್ ಇರುತ್ತದೆ.. ಈ ಸ್ಮಾರ್ಟ್ ರೇಷನ್ ಕಾರ್ಡ್ ಅನ್ನು ಸ್ಮಾರ್ಟ್ ರೀಡರ್ ಮತ್ತು ರೈಟರ್ ಇಂದ ಕೂಡಿರುತ್ತದೆ..ಇದು ಜನರಿಗೆ ಮಾತ್ರವಲ್ಲ, ರೇಷನ್ ನೀಡುವ ನ್ಯಾಯಬೆಲೆ ಅಂಗಡಿಯವರಿಗೂ ಸುಲಭ ಕೆಲಸ ಆಗುತ್ತದೆ.

ಬಸ್ ಪ್ರಯಾಣಕ್ಕೆ ಇನ್ಮೇಲೆ ಪುರುಷರು ಕೂಡ ಹಣಕೊಡುವ ಅಗತ್ಯವಿಲ್ಲ! ಸರ್ಕಾರದಿಂದ ಹೊಸ ರೂಲ್ಸ್

ಒಂದು ಸಾರಿ ಸ್ಕ್ಯಾನ್ ಮಾಡಿದರೆ, ಕುಟುಂಬದವರ ಬಗ್ಗೆ ಮಾಹಿತಿ, ಎಷ್ಟು ರೇಶನ್ ಕೊಡಬೇಕು ಎನ್ನುವ ಮಾಹಿತಿ ಎಲ್ಲವೂ ಸುಲಭವಾಗಿ ಸಿಗುತ್ತದೆ..

ಇದರಿಂದ ರೇಷನ್ ನೀಡಲು ಸುಲಭ, ತಪ್ಪುಗಳು ನಡೆಯುವುದಿಲ್ಲ.. ರೇಷನ್ ಕಾರ್ಡ್ ಮೂಲಕ, ಸರ್ಕಾರಕ್ಕೆ ದತ್ತಾಂಶ ಸಹ ರವಾನೆ ಆಗುತ್ತದೆ. ಇದನ್ನು ಸರ್ಕಾರ ಟ್ರ್ಯಾಕ್ ಮಾಡಿ ಸರಿಯಾದ ರೀತಿಯಲ್ಲಿ ಗ್ರಾಹಕರಿಗೆ ಸೌಲಭ್ಯ ತಲುಪಿಸುತ್ತದೆ..

ಇದರಿಂದ ಸರ್ಕಾರ, ಜನರು ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಕೆಲಸ ಮಾಡುವ ಎಲ್ಲರಿಗು ಅನುಕೂಲವಾಗಲಿದ್ದು ಕೆಲಸಗಳು ಸುಲಭವಾಗಿ ನಡೆಯುತ್ತದೆ. ಶುರುವಿನಲ್ಲಿ ಕೆಲವು ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಗೆ ಬರಲಿದ್ದು ನಂತರ ಇಡೀ ದೇಶದಲ್ಲಿ ಸ್ಮಾರ್ಟ್ ರೇಷನ್ ಕಾರ್ಡ್ ಲಭ್ಯವಿರುತ್ತದೆ. ಸ್ಮಾರ್ಟ್ ರೇಷನ್ ಕಾರ್ಡ್ ಪಡೆಯಲು ನೀವು ಆಹಾರ ನಾಗರಿಕ ಸರಬರಾಜು ಇಲಾಖೆಯನ್ನು ಸಂಪರ್ಕಿಸಬಹುದು.

ಇದಕ್ಕಾಗಿ ಬೇಕಾಗುವ ಪ್ರಮುಖ ದಾಖಲೆಗಳು..

smart ration card*ಆಧಾರ್ ಕಾರ್ಡ್
*ವಸತಿ ಪ್ರಮಾಣ ಪತ್ರ
*ಹಳೆಯ ರೇಷನ್ ಕಾರ್ಡ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.

ಸ್ಮಾರ್ಟ್ ರೇಷನ್ ಕಾರ್ಡ್ ಗೆ ಎಷ್ಟು ಶುಲ್ಕ ವಿಧಿಸಬಹುದು ಎಂದು ನೋಡುವುದಾದರೆ, ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದರ ಇರುತ್ತದೆ. 17 ರೂಪಾಯಿಯಿಂದ 70 ರೂಪಾಯಿಯ ಒಳಗೆ ಹಣವನ್ನು ವಿಧಿಸಲಾಗುತ್ತದೆ.

ಇನ್ನು ಕೆಲವು ರಾಜ್ಯಗಳು ಉಚಿತವಾಗಿ ಸ್ಮಾರ್ಟ್ ಕಾರ್ಡ್ ತಯಾರಿಸಿ ನೀಡುತ್ತಿದೆ.. ಉತ್ತರಾಖಂಡ್ ನಲ್ಲಿ ಸ್ಮಾರ್ಟ್ ಕಾರ್ಡ್ ಗೆ 17 ರೂಪಾಯಿ ಪಡೆಯುತ್ತಿದೆ.. ಒಂದು ವೇಳೆ ಸ್ಮಾರ್ಟ್ ರೇಷನ್ ಕಾರ್ಡ್ ಕಳೆದು ಹೋದರೆ, ಮತ್ತೆ ಪಡೆಯಲು 25 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ದರ ಇರುತ್ತದೆ..

ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡಲು ಬ್ಯಾಂಕ್ ಮುಂದೆ ಕ್ಯೂ ನಿಂತ ಮಹಿಳೆಯರು! ಆದ್ರೆ ಆಗಿದ್ದೇ ಬೇರೆ

ಸ್ಮಾರ್ಟ್ ರೇಷನ್ ಕಾರ್ಡ್ ಪಡೆಯುವುದು ಹೇಗೆ

*ಮೊದಲಿಗೆ ಆಹಾರ ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

*ಹೋಮ್ ಪೇಜ್ ನಲ್ಲಿ ರೇಷನ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅದರಲ್ಲಿ ಸ್ಮಾರ್ಟ್ ರೇಷನ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ಸ್ಮಾರ್ಟ್ ರೇಷನ್ ಕಾರ್ಡ್ ಗೆ ಅಪ್ಲೈ ಮಾಡುವ ಅರ್ಜಿ ಸಿಗುತ್ತದೆ ಅದನ್ನು ಡೌನ್ಲೋಡ್ ಮಾಡಿ.

*ಅಪ್ಲಿಕೇಶನ್ ನಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿ, ಅದಕ್ಕೆ ಅಗತ್ಯವಿರುವ ದಾಖಲೆಗಳನ್ನು ಸೇರಿಸಿ, ನಿಮ್ಮ ಹತ್ತಿರದ ಪಡಿತರ ಚೀಟಿ ಕಚೇರಿಗೆ ಕಳಿಸಿ.

*ಹೀಗೆ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

you will get ration only if you have a smart ration card

Our Whatsapp Channel is Live Now 👇

Whatsapp Channel

Related Stories