ಕಡೆಗೂ ಬಿಡುಗಡೆಯಾಯ್ತು BPL ಕಾರ್ಡ್ ರದ್ದಾದವರ ಪಟ್ಟಿ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ

ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಪ್ರಯೋಜನ ಸಿಗಲಿದೆ. ಇದೀಗ ಜುಲೈ ತಿಂಗಳಿನಲ್ಲಿ ಅನ್ನ ಭಾಗ್ಯ ಯೋಜನೆಯ ಹಣ ಖಾತೆಗೆ ಬಂದಿದ್ದರು ಆಗಸ್ಟ್ ಕಂತು ಬಿಡುಗಡೆ ಆಗಿಲ್ಲ.

ಕರ್ನಾಟಕ ರಾಜ್ಯ ಸರ್ಕಾರ ಒಂದರ ಹಿಂದೆ ಒಂದರಂತೆ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ, ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಅಂದ್ರೆ ಪ್ರತಿಯೊಬ್ಬರೂ ರೇಷನ್ ಕಾರ್ಡ್ (Ration Card) ಹೊಂದಿರುವುದು ಕಡ್ಡಾಯ.

ಅದರಲ್ಲೂ ಅಂತ್ಯೋದಯ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಹಾಗೂ ಅನ್ನಭಾಗ್ಯ ಯೋಜನೆಯ (Annabhagya Yojane) ಪ್ರಯೋಜನ ಸಿಗಲಿದೆ. ಇದೀಗ ಜುಲೈ ತಿಂಗಳಿನಲ್ಲಿ ಅನ್ನ ಭಾಗ್ಯ ಯೋಜನೆಯ ಹಣ ಖಾತೆಗೆ ಬಂದಿದ್ದರು ಆಗಸ್ಟ್ ಕಂತು ಬಿಡುಗಡೆ ಆಗಿಲ್ಲ.

ಇದರಿಂದ ಹಲವರು ಚಿಂತಿತರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಂಥವರ ರೇಷನ್ ಕಾರ್ಡ್ ರದ್ದಾಗಿರುವುದು (Ration Card Cancelation)

ಕಡೆಗೂ ಬಿಡುಗಡೆಯಾಯ್ತು BPL ಕಾರ್ಡ್ ರದ್ದಾದವರ ಪಟ್ಟಿ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ - Kannada News

ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡಲು ಬ್ಯಾಂಕ್ ಮುಂದೆ ಕ್ಯೂ ನಿಂತ ಮಹಿಳೆಯರು! ಆದ್ರೆ ಆಗಿದ್ದೇ ಬೇರೆ

ಪಡಿತರ ಚೀಟಿ ರದ್ದಾಗಿದ್ದೇಕೆ?

ಬಿಪಿಎಲ್ ಕಾರ್ಡ್ (BPL Card) ಪಡೆದುಕೊಳ್ಳಬೇಕು ಅಂದರೆ ಸರ್ಕಾರ ಆರು ಮಾನದಂಡಗಳನ್ನು ಹೇಳಿದೆ. ಈ ಮಾನದಂಡಗಳ ಅಡಿಯಲ್ಲಿ ಬರದೇ ಇರುವವರ ಪಡಿತರ ಚೀಟಿಯನ್ನು ರದ್ದುಪಡಿಸುವ ಕೆಲಸವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ.

ಇತ್ತೀಚೆಗೆ ನಾಲ್ಕು ಚಕ್ರದ ವಾಹನ ಹೊಂದಿರುವವರ ರೇಷನ್ ಕಾರ್ಡ್ ರದ್ದುಪಡಿಸಲಾಗುವುದು ಎನ್ನುವ ಮಾಹಿತಿ ಇತ್ತು ಆದರೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ತಿಳಿಸಿದ್ದರು.

ಆದಾಗ್ಯೂ ಹಲವರ ರೇಷನ್ ಕಾರ್ಡ್ ರದ್ದಾಗಿದೆ, ಇದಕ್ಕೆ ಮುಖ್ಯವಾಗಿರುವ ಕಾರಣ ಸರ್ಕಾರಿ ನೌಕರಿಯಲ್ಲಿ ಇದ್ದವರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವುದು ಹಾಗೂ ಇತರ ಸಮಸ್ಯೆಗಳು ಇರುವುದು.

ಫ್ರೀ ವಿದ್ಯುತ್! ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಪಡೆದಿರುವ ಎಲ್ಲರಿಗೂ ಮತ್ತೊಂದು ಅಪ್ಡೇಟ್

ಸಿಗುವುದಿಲ್ಲ ಸರ್ಕಾರದ ಯೋಜನೆಯ ಬೆನಿಫಿಟ್;

ಕಳೆದ ತಿಂಗಳು ಅನ್ನ ಭಾಗ್ಯ ಯೋಜನೆಯ ಹಣ ಬಂದಿದ್ದವರಿಗೆ ಅಗಸ್ಟ್ ತಿಂಗಳ ಹಣ ಖಾತೆಗೆ ಜಮಾ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ಅಂಥವರ ರೇಷನ್ ಕಾರ್ಡ್ ರದ್ದಾಗಿದೆ. ಇನ್ನು ರೇಷನ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿಗಳು ಕೂಡ ಸಿಗುವುದಿಲ್ಲ.

ಈಗಾಗಲೇ ಹಲವು ಲೋಪದೋಷಗಳು ಇರುವ ರೇಷನ್ ಕಾರ್ಡ್ ಅನ್ನು ರದ್ದು ಪಡಿಸಲಾಗಿದ್ದು ಆಹಾರ್‍ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ನೀವು ರದ್ದಾಗಿರುವ ರೇಷನ್ ಕಾರ್ಡ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಇಂತಹವರ ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್​ಗೆ ಬಂದರೂ ಕೈಗೆ ಸಿಗೋಲ್ಲ! ಬ್ಯಾಂಕ್ ಹೊಸ ನಿರ್ಧಾರ

BPL Ration Cardರೇಷನ್ ಕಾರ್ಡ್ ರದ್ದಾಗಿರುವುದನ್ನು ತಿಳಿದುಕೊಳ್ಳುವುದು ಹೇಗೆ?

• ಮೊದಲಿಗೆ https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಇಲ್ಲಿ ಇ- ಸರ್ವಿಸ್ ಅಥವಾ ಇ- ಸೇವೆ ಎನ್ನುವ ಆಯ್ಕೆ ಕಾಣಿಸುತ್ತದೆ.

• ಇ- ಸರ್ವಿಸ್ ಮೇಲೆ ಕ್ಲಿಕ್ ಮಾಡಿದರೆ, ಬಲಭಾಗದಲ್ಲಿ ‘ಇ -ರೇಷನ್ ಕಾರ್ಡ್’ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

• ಕೆಳಭಾಗದಲ್ಲಿ show cancelled/suspended list ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

• ನಂತರ ಎಡ ಭಾಗದಲ್ಲಿ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು ತಿಂಗಳು ಹಾಗೂ ವರ್ಷವನ್ನು ಆಯ್ಕೆ ಮಾಡಿಕೊಂಡು ’ಗೋ’ ಮೇಲೆ ಕ್ಲಿಕ್ ಮಾಡಿದರೆ ಕಾರಣ ಸಹಿತ ಯಾರದ್ದೆಲ್ಲಾ ರೇಷನ್ ಕಾರ್ಡ್ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ.

ಇನ್ನು ಇದೇ ರೀತಿ ಈ ರೇಷನ್ ಕಾರ್ಡ್ ನಲ್ಲಿ show village list (ಹಳ್ಳಿಗಳ ಪಟ್ಟಿ) ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನೀವು ಈ ಮೇಲಿನ ಮಾಹಿತಿಯನ್ನು ನೀಡಿದರೆ ಯಾರ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದೆ ಎಂಬ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು.

ಈ ರೀತಿ ಮಾಡುವುದರಿಂದ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಅಥವಾ ಇನ್ನೂ ಚಾಲ್ತಿಯಲ್ಲಿ ಇದೆಯೋ ಎಂಬುದನ್ನು ತಿಳಿದುಕೊಳ್ಳಬಹುದು. ನೀವು ಸರ್ಕಾರ ಹೇಳಿರುವ ಮಾನದಂಡಗಳ ಒಳಗೆ ಬರುತ್ತಿದ್ದು, ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೂಡ, ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ತಕ್ಷಣವೇ ಆಹಾರ ಇಲಾಖೆಯಲ್ಲಿ ಅದನ್ನು ಮರು ಪರಿಶೀಲನೆ ಮಾಡಿಕೊಳ್ಳಬಹುದು. ಒಂದು ವೇಳೆ ಸರ್ಕಾರ ಹೇಳಿರುವ ಮಾನದಂಡಗಳ ಒಳಗೆ ಬರದೇ ಇರುವ ರೇಷನ್ ಕಾರ್ಡ್ ರದ್ದಾಗಿದ್ದರೆ ಮತ್ತೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ.

BPL Ration card cancellation list Was released

Follow us On

FaceBook Google News

BPL Ration card cancellation list Was released