ಇಂತಹವರ ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ಗೆ ಬಂದರೂ ಕೈಗೆ ಸಿಗೋಲ್ಲ! ಬ್ಯಾಂಕ್ ಹೊಸ ನಿರ್ಧಾರ
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಲವು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ, ಆದರೆ ಅವರ ಅಕೌಂಟ್ ಇಂದ ಹಣ ಬಂದಿದೆಯಾದರು ಆ ಹಣ ಅವರ ಕೈ ಸೇರಿಲ್ಲ
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ತಾವು ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆಗಳನ್ನು ಸರ್ಕಾರ ಈಗ ಜಾರಿಗೆ ತರುತ್ತಿದೆ. 5 ಗ್ಯಾರಂಟಿ ಯೋಜನೆಗಳಲ್ಲಿ (Govt Schemes) 4 ಯೋಜನೆ ಜಾರಿಗೆ ಬಂದಿದೆ.
ಗೃಹಲಕ್ಷ್ಮಿ ಯೋಜನೆ ಕೂಡ ಇದರಲ್ಲಿ ಒಂದು. ಇದು ರಾಜ್ಯದಲ್ಲಿ ಮನೆಯನ್ನು ನಡೆಸಿಕೊಂಡು ಹೋಗುವ ಎಲ್ಲಾ ಮಹಿಳೆಯರಿಗೆ ಸರ್ಕಾರದ ಕಡೆಯಿಂದ 2000 ರೂಪಾಯಿ ಪ್ರತಿ ತಿಂಗಳು ಅವರ ಬ್ಯಾಂಕ್ ಅಕೌಂಟ್ ಗೆ ತಲುಪುತ್ತದೆ.
ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರದಿಂದ ಸಿಗುತ್ತಿರುವ ಪ್ರೋತ್ಸಾಹ ಆಗಿದ್ದು, ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ (Bank Account) ಹಣ ಹಾಕುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಅದೇ ರೀತಿ ಕಳೆದ ಒಂದು ತಿಂಗಳ ಹಿಂದೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಕೂಡ ಶುರುವಾಗಿದೆ..
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಎಷ್ಟು ದಿನ ಇರುತ್ತೆ ಗೊತ್ತಾ? ಕಾಂಗ್ರೆಸ್ ನಾಯಕರು ಕೊಟ್ಟ ಸ್ಪಷ್ಟನೆ ಏನು?
ಈಗಾಗಲೇ ಸುಮಾರು 1.10 ಕೋಟಿ ಮಹಿಳೆಯರು ಅರ್ಜಿ ಹಾಕಿದ್ದು, ಆಗಸ್ಟ್ 30ರಂದು ಈ ಯೋಜನೆಗೆ ಚಾಲನೆ ಸಿಕ್ಕಿ, ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ 2000 ರೂಪಾಯಿ ಡೆಪಾಸಿಟ್ ಆಗಿದೆ..
ಯೋಜನೆಗೆ ಚಾಲನೆ ಸಿಕ್ಕಿ, ಹಣ ಬಂದಿದೆ ಎಂದು ಗೊತ್ತಾದ ತಕ್ಷಣವೆ ಮಹಿಳೆಯರು ಹಣ ಪಡೆಯುವುದಕ್ಕಾಗಿ ಬ್ಯಾಂಕ್ ಗೆ ಬರುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಬ್ಯಾಂಕ್ ಗೆ ಬರುತ್ತಿದ್ದು ಅವರನ್ನು ಕಂಟ್ರೋಲ್ ಮಾಡುವುದು ಬ್ಯಾಂಕ್ ಸಿಬ್ಬಂದಿಗಳಿಗೆ ಒಂದು ರೀತಿ ಕಷ್ಟವಾಗುತ್ತಿದೆ.
ಆದರೆ ಈಗ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಬರುತ್ತಿರುವ ಮಹಿಳೆಯರಿಗೆ ಬ್ಯಾಂಕ್ ನ ಹೊಸ ನಿರ್ಧಾರದ ಬಗ್ಗೆ ಗೊತ್ತಾಗಿ, ಅವರೆಲ್ಲರೂ ಈಗ ಬಿಗ್ ಶಾಕ್ ಸಿಕ್ಕಿದೆ
ಇನ್ನೂ ನಿಮಗೆ ಅನ್ನಭಾಗ್ಯ ಯೋಜನೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ ಸಾಕು! ನಿಮ್ಮ ಖಾತೆಗೆ ಹಣ ಬರುತ್ತದೆ
ಅಷ್ಟಕ್ಕೂ ಏನಾಗಿದೆ ಎಂದರೆ.. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಲವು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ (Money Transferred To Bank Account), ಆದರೆ ಅವರ ಅಕೌಂಟ್ ಇಂದ ಹಣ ಬಂದಿದೆಯಾದರು ಆ ಹಣ ಅವರ ಕೈ ಸೇರಿಲ್ಲ.
ಅದಕ್ಕೆ ಕಾರಣ, ಕೆಲವು ನಗರ ಪ್ರದೇಶದ ಮತ್ತು ಹಳ್ಳಿ ಪ್ರದೇಶದ ಮಹಿಳೆಯರು ಬೇರೆ ಬೇರೆ ಕಾರಣಕ್ಕೆ ಬ್ಯಾಂಕ್ ಇಂದ ಸಾಲ (Bank Loan) ಪಡೆದಿರುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ ಕಟ್ಟಲು, ಬಡ್ಡಿ ಕಟ್ಟಲು ಆಗಿರುವುದಿಲ್ಲ.
ಇದರಿಂದ ಸಾಲದ ಬಡ್ಡಿ (Loan Interest) ಕೂಡ ಬೆಳೆದಿರುತ್ತದೆ. ಈ ರೀತಿ ಆಗಿದ್ದರೆ, ಅಂಥ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಂದಿದ್ದರು ಕೂಡ, ಬ್ಯಾಂಕ್ ಗಳು ಹಳೆಯ ಸಾಲವನ್ನು (Bank Loan) ಈ ಹಣದ ಮೂಲಕ ಜಮೆ ಆಗುವ ಹಾಗೆ ಮಾಡಿಕೊಳ್ಳುತ್ತಿದೆ.
ವಿದ್ಯುತ್ ಬಿಲ್ ಬಾಕಿ ಇದ್ದವರಿಗೆ ಗೃಹಜ್ಯೋತಿ ಯೋಜನೆ ಬಗ್ಗೆ ನಿಯಮ ಬದಲಾವಣೆ ಮಾಡಿದ ಸರ್ಕಾರ
ಈ ಕಾರಣದಿಂದ ಹಲವು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್ ಅಕೌಂಟ್ ಗೆ ಬಂದಿದ್ದರು ಕೂಡ ಅದು ಅವರ ಕೈಯೇ ಸಿಕ್ಕಿಲ್ಲ..ಈ ಯೋಜನೆಯಿಂದ ರಾಜ್ಯದ ಹಲವು ಬಡ ಕುಟುಂಬಕ್ಕೆ ಸಹಾಯ ಆಗುತ್ತಿತ್ತು, ಕೆಲವರು ಬೇರೆ ಬ್ಯಾಂಕ್ ಅಕೌಂಟ್ ನಂಬರ್ ಕೊಟ್ಟಿದ್ದರೂ ಕೂಡ ಹಳೆಯ ಬ್ಯಾಂಕ್ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿದೆ. ಈ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಕೆಲವರಿಗೆ ಸಿಗುತ್ತಿಲ್ಲ. ಹಾಗೆಯೇ ಬ್ಯಾಂಕ್ ಗಳು ಈ ಸಮಯದಲ್ಲಿ ಸಾಲ ವಜಾ ಮಾಡಿಕೊಳ್ಳುತ್ತಿದೆ.
Gruha Lakshmi Yojana money cannot reach Such People Hands