ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಎಷ್ಟು ದಿನ ಇರುತ್ತೆ ಗೊತ್ತಾ? ಕಾಂಗ್ರೆಸ್ ನಾಯಕರು ಕೊಟ್ಟ ಸ್ಪಷ್ಟನೆ ಏನು?
ವಿಧಾನಸಭೆ ಚುನಾವಣೆ (Vidhana Sabha Election) ಮುಗಿದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವು, ಜನರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು (Govt Schemes) ಜಾರಿಗೆ ತರುವ ಭರವಸೆ ನೀಡಿತ್ತು. ಅದೇ ರೀತಿ 5 ಯೋಜನೆಗಳನ್ನು ಈಗ ಜಾರಿಗೆ ತರುತ್ತಿದೆ.
ಯಾವುದೇ ರಾಜ್ಯಗಳಲ್ಲಿ ಚುನಾವಣೆ ಬಂತು ಎಂದರೆ ಸಾಕು ಎಲ್ಲಾ ರಾಜಕೀಯ ಪಕ್ಷಗಳು ಜನರನ್ನು ಆಕರ್ಷಿಸಲು ಅನೇಕ ಯೋಜನೆಗಳು, ಅಭಿವೃದ್ಧಿಗಳನ್ನು ನಡೆಸುವುದಾಗಿ ಭರವಸೆ ನೀಡುತ್ತಾರೆ.
ನಮ್ಮ ರಾಜ್ಯದಲ್ಲಿಯೂ ಇತ್ತೀಚೆಗೆ ವಿಧಾನಸಭೆ ಚುನಾವಣೆ (Vidhana Sabha Election) ಮುಗಿದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವು, ಜನರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು (Govt Schemes) ಜಾರಿಗೆ ತರುವ ಭರವಸೆ ನೀಡಿತ್ತು. ಅದೇ ರೀತಿ 5 ಯೋಜನೆಗಳನ್ನು ಈಗ ಜಾರಿಗೆ ತರುತ್ತಿದೆ.
ಇನ್ನೂ ನಿಮಗೆ ಅನ್ನಭಾಗ್ಯ ಯೋಜನೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ ಸಾಕು! ನಿಮ್ಮ ಖಾತೆಗೆ ಹಣ ಬರುತ್ತದೆ
ಈಗಾಗಲೇ 4 ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣುಮಕ್ಕಳಿಗೆ ಉಚಿತವಾಗಿ ಬಸ್ ನಲ್ಲಿ ಓಡಾಡಲು ಶಕ್ತಿ ಯೋಜನೆ, ಮನೆಯನ್ನು ನಡೆಸುವ ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆ, ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆ, ಉಚಿತವಾಗಿ ವಿದ್ಯುತ್ ನೀಡಲು ಗೃಹಜ್ಯೋತಿ ಯೋಜನೆ, ಮತ್ತು ನಿರುದ್ಯೋಗಿ ಯುವಪೀಳಿಗೆಗೆ ಯುವನಿಧಿ ಯೋಜನೆ.
5 ರಲ್ಲಿ 4 ಯೋಜನೆಗಳು ಲಾಂಚ್ ಆಗಿದೆ.. ಇನ್ನು ಮುಂದಿನ ವರ್ಷ ಲೋಕಸಭಾ ಚುನಾವಣೆ (Loksabha Election) ಬರುತ್ತದೆ. ಕಾಂಗ್ರೆಸ್ ಪಕ್ಷ ಇದರಲ್ಲೂ ಮೇಲುಗೈ ಸಾಧಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪ್ಲಾನ್ ಮಾಡಿಕೊಂಡಿದೆ.
ಈ ವೇಳೆ ಲೋಕಸಭಾ ಚುನಾವಣೆ ನಂತರ ಗ್ಯಾರೆಂಟಿ ಯೋಜನೆಗಳು ನಿಂತು ಹೋಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದರ ಬಗ್ಗೆ ಈಗ ಕಾಂಗ್ರೆಸ್ ನಾಯಕರೇ ಸ್ಪಷ್ಟನೆ ನೀಡಿದ್ದಾರೆ.
ವಿದ್ಯುತ್ ಬಿಲ್ ಬಾಕಿ ಇದ್ದವರಿಗೆ ಗೃಹಜ್ಯೋತಿ ಯೋಜನೆ ಬಗ್ಗೆ ನಿಯಮ ಬದಲಾವಣೆ ಮಾಡಿದ ಸರ್ಕಾರ
ಈ ಬಗ್ಗೆ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಸಂಸತ್ತಿನ ಚುನಾವಣೆ ನಂತರ ಕೂಡ ಇದೇ ವ್ಯವಸ್ಥೆಯನ್ನು ಮುಂದುವರೆಸುತ್ತದೆ. ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎನ್ನುವ ಬಗ್ಗೆ ಯಾವುದೇ ಅನುಮಾನ ಬೇಡ. ಎಲ್ಲವೂ ಹೀಗೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ..
ಮುಂದುವರೆದು ಮಾತನಾಡಿ, ನಮ್ಮ ಪಕ್ಷದ ಸಮಯದಲ್ಲಿ ನರೇಗಾ ಯೋಜನೆ ಜಾರಿಗೆ ಬಂದಿತು, ಆಗ ಮೋದಿ ಅವರು ಆ ಯೋಜನೆಯನ್ನು ಟೀಕಿಸಿದ್ದರು ಆದರೆ ಕೋವಿಡ್ ಸಮಯದಲ್ಲಿ ಅವರಿಗು ಇದೇ ಯೋಜನೆ ಬೇಕಾಯಿತು ಎಂದು ಹೇಳಿದ್ದಾರೆ.
ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿದ್ರೆ ಈ ಹೊಸ ರೂಲ್ಸ್ ತಿಳಿಯಿರಿ! ಹೊಸ ನಿಯಮ ತಂದ ಸರ್ಕಾರ
ಈ ಮೂಲಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ರಾಜಕೀಯದ ಬೆಳವಣಿಗೆ ಬಗ್ಗೆ ಮಾತನಾಡಿ, ಸಿಎಂ ಸ್ಥಾನ ಬದಲಾಗುವ ಬಗ್ಗೆ ನನ್ನಲ್ಲಿ ಆಸಕ್ತಿ ಇಲ್ಲ, ಸಣ್ಣ ಸಮುದಾಯದ ಜನರಿಗೆ ಅಧಿಕಾರ ಸಿಕ್ಕಿದೆ..
ಕಾಂಗ್ರೆಸ್ ನಲ್ಲಿ ನನಗೆ ಅಧಿಕಾರ ಸಿಗಬೇಕು ಎಂದು ಹೋರಾಟ ಮಾಡಲು ನನ್ನಿಂದ ಆಗೋದಿಲ್ಲ. ರಾಜ್ಯದ ಜನರಿಗೆ ಒಳ್ಳೆಯದಾಗಬೇಕು ಅಷ್ಟೇ. ದೇವರಾಜ ಅರಸು ಅವರು ಹೇಳಿದ ಹಾಗೆ, ಎಲ್ಲಾ ಜನರಿಗು ಸಮಬಾಳು ಸಮಪಾಲು ಎನ್ನುವ ವ್ಯವಸ್ಥೆ ಜಾರಿಗೆ ಬರಬೇಕು ಅಷ್ಟೇ.. ನಮ್ಮ ಗುರಿ ಇದು.
ಆಪರೇಶನ್ ಕಮಲ ಎನ್ನುವ ಮಾತು ಕೇಳಿಬರುತ್ತಿದೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.. ಎಂದಿದ್ದಾರೆ. ಹಾಗೆಯೇ ಇಸ್ರೋ ಕಾರ್ಯವನ್ನು ಕೂಡ ಹಾಡಿ ಹೊಗಳಿದ್ದಾರೆ.
ಮೊಬೈಲ್‌ಗೆ ಮೆಸೇಜ್ ಬಂದು ಗೃಹಲಕ್ಷ್ಮಿ ಯೋಜನೆ ಹಣ ಅಕೌಂಟ್‌ಗೆ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ
Do you know how long they will be Gruha Lakshmi and Gruha Jyothi Schemes