ಮೊಬೈಲ್‌ಗೆ ಮೆಸೇಜ್ ಬಂದು ಗೃಹಲಕ್ಷ್ಮಿ ಯೋಜನೆ ಹಣ ಅಕೌಂಟ್‌ಗೆ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ದರು ಕೂಡ ಹಣ ಬಂದಿಲ್ಲ. ಮೆಸೇಜ್ ಬಂದಿದ್ದರು ಕೆಲವರಿಗೆ ಹಣ ಕ್ರೆಡಿಟ್ ಆಗಿಲ್ಲ. ಅಂಥವರಿಗೆ ಏನು ಸಮಸ್ಯೆ ಆಗಿರುತ್ತದೆ ಎಂದು ತಿಳಿಯಿರಿ
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಆಗಸ್ಟ್ 30ರಂದು ಚಾಲನೆ ಸಿಕ್ಕಿದೆ. ಈ ಯೋಜನೆಯ ಮೂಲಕ ಮನೆಯ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ (bank Account) ₹2000 ರೂಪಾಯಿ ಪ್ರತಿ ತಿಂಗಳು ಜಮೆ ಆಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಒಂದು ತಿಂಗಳಿನಿಂದ ಶುರುವಾಗಿದೆ. ಸುಮಾರು 1.10 ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಮಹಿಳೆಯರ ಅಕೌಂಟ್ ಗೆ ಹಣವನ್ನು ಕೂಡ ಡೆಪಾಸಿಟ್ (Deposit) ಮಾಡಿದೆ. ಆದರೆ ಹಲವು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿಲ್ಲ..
ಫ್ರೀ ಕರೆಂಟ್! ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಸರ್ಕಾರದಿಂದ ರಾತ್ರೋ ರಾತ್ರಿ ಬಿಗ್ ಅಪ್ಡೇಟ್
ಇದಕ್ಕೆ ಕಾರಣ ಏನು ಎಂದು ತಿಳಿಯುವುದಾದರೆ, ಮೊದಲನೆಯದಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ (Ration Card) ಮನೆಯ ಮುಖ್ಯಸ್ಥರು ಮಹಿಳೆಯೇ ಆಗಿರಬೇಕು. ಮಹಿಳೆಯ ಹೆಸರು ಇದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ (Annabhagya Scheme) ಫಲ ನಿಮಗೆ ಸಿಗುತ್ತದೆ.
ಇಲ್ಲದೆ ಹೋದರೆ ಈ ಎರಡು ಯೋಜನೆಯ ಹಣ ಸಿಗುವುದಿಲ್ಲ. ಈ ಕಾರಣದಿಂದ ಮೊದಲಿಗೆ ನೀವು ರೇಷನ್ ಕಾರ್ಡ್ ಚೆಕ್ ಮಾಡಿ, ಮನೆಯ ಮುಖ್ಯಸ್ಥೆ ಮಹಿಳೆ ಆಗಿಲ್ಲ ಎಂದರೆ ಮೊದಲಿಗೆ ಅಪ್ಡೇಟ್ (Update Ration Card) ಮಾಡಿಸಿ, ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು, ಸೆಪ್ಟೆಂಬರ್ 10ರ ವರೆಗು ಸಮಯ ನೀಡಲಾಗಿದೆ.
ಇನ್ನು ಕೆಲವರಿಗೆ ಇದೆಲ್ಲವೂ ಸರಿ ಇದ್ದು ಯೋಜನೆಗೆ ಅಪ್ಲೈ ಮಾಡಿದ್ದರು ಕೂಡ ಹಣ ಬಂದಿಲ್ಲ. ಮೆಸೇಜ್ ಬಂದಿದ್ದರು ಕೆಲವರಿಗೆ ಹಣ ಕ್ರೆಡಿಟ್ ಆಗಿಲ್ಲ. ಅಂಥವರಿಗೆ ಏನು ಸಮಸ್ಯೆ ಆಗಿರುತ್ತದೆ ಎಂದು ನೋಡುವುದಾದರೆ, ಮೊದಲಿಗೆ ನೀವು ಆಧಾರ್ ಕಾರ್ಡ್ ನಲ್ಲಿ (Aadhaar Card) NCPI ಮ್ಯಾಪಿಂಗ್ ಯಾವ ಬ್ಯಾಂಕ್ ಅಕೌಂಟ್ ಗೆ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದರ ಆಧಾರದ ಮೇಲೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಡೆಪಾಸಿಟ್ ಆಗುತ್ತದೆ.
ಗಣೇಶ ಹಬ್ಬ ಆಚರಣೆಗೆ ಸರ್ಕಾರದಿಂದ ಹೊಸ ರೂಲ್ಸ್, ಈ ರೀತಿ ಮಾಡಿದರೆ ದಂಡ ಕಟ್ಟಬೇಕಾಗುತ್ತೆ!
ಇದನ್ನು ಚೆಕ್ ಮಾಡಲು ಮೊದಲಿಗೆ ನೀವು resident.uidai.gov ಗೆ ಹೋಗಿ ವೆಬ್ಸೈಟ್ ಚೆಕ್ ಮಾಡಬೇಕು. ಈ ವೆಬ್ಸೈಟ್ ನಲ್ಲಿ ಆಧಾರ್ ಕಾರ್ಡ್ ಸೀಡಿಂಗ್ ಸ್ಟೇಟಸ್ ಚೆಕ್ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡ್ ಸೀಡಿಂಗ್ ಸ್ಟೇಟಸ್ ಆಪ್ಶನ್ ಸೆಲೆಕ್ಟ್ ಮಾಡಿ. ಅಲ್ಲಿ ಮನೆಯ ಮುಖ್ಯಸ್ಥೆಯ ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿ, ನಂತರ ಸೆಕ್ಯೂರಿಟಿ ಕೋಡ್ ಹಾಕಿ, OTP ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ OTP ಬರುತ್ತದೆ.. ಆ OTP ಎಂಟರ್ ಮಾಡಿ ಸಬ್ಮಿಟ್ ಮಾಡಿ.
ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇರುವುದಕ್ಕೆ ಇದು ಕೂಡ ಕಾರಣ ಇರಬಹುದು! ಇಂದೇ ಸರಿಪಡಿಸಿಕೊಳ್ಳಿ
ಈಗ ನಿಮ್ಮ ಎದುರು ಆಧಾರ್ ಮ್ಯಾಪಿಂಗ್ ಬಗ್ಗೆ ಮೆಸೇಜ್ (Message)ಬರುತ್ತದೆ.. ಮ್ಯಾಪಿಂಗ್ ಆದ ನಂತರ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಅನ್ನಭಾಗ್ಯ ಯೋಜನೆಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಎರಡು ಕೂಡ ಕ್ರೆಡಿಟ್ ಆಗುತ್ತದೆ.. ಒಂದು ವೇಳೆ ಕ್ರೆಡಿಟ್ ಆಗದೆ ಹೋದರೆ, ಕೆಲ ದಿನಗಳಲ್ಲಿ ಈ ಹಣ ಕ್ರೆಡಿಟ್ (Money will Credit) ಆಗುತ್ತದೆ.
Do This if Gruha Lakshmi Yojana money has not Deposit to Your Bank Account