ಗಣೇಶ ಹಬ್ಬ ಆಚರಣೆಗೆ ಸರ್ಕಾರದಿಂದ ಹೊಸ ರೂಲ್ಸ್, ಈ ರೀತಿ ಮಾಡಿದರೆ ದಂಡ ಕಟ್ಟಬೇಕಾಗುತ್ತೆ!
Ganesha Chaturthi : ಗಣೇಶ ಹಬ್ಬದ ವೇಳೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬಿಬಿಎಂಪಿ (BBMP) ಈಗ ಕೆಲವು ಹೊಸ ರೂಲ್ಸ್ (New Rules) ಗಳನ್ನು ಜಾರಿ ಮಾಡಿದೆ, ಒಂದು ವೇಳೆ ಈ ರೂಲ್ಸ್ ಗಳನ್ನು ಮೀರಿದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ
ಸೆಪ್ಟೆಂಬರ್ ತಿಂಗಳು ಬಂತು ಎಂದರೆ ಗಣೇಶ ಹಬ್ಬದ (Ganesha Chaturthi) ಸಂಭ್ರಮ ಶುರುವಾಗುತ್ತದೆ. ಈ ಹಬ್ಬಕ್ಕೆ ತಯಾರಿಕೆಗಳು ಕೂಡ ಶುರುವಾಗುತ್ತದೆ. ಅದರಲ್ಲೂ ಹುಡುಗರಿಗೆ ಸಡಗರ ಹೆಚ್ಚು.
ಪ್ರತಿ ಬೀದಿಗಳಲ್ಲಿ ಕೂಡ ಗಣೇಶನ ಮೂರ್ತಿಯನ್ನು (Ganesha Festival) ಕೂರಿಸಿ, ಪೂಜೆ ಮಾಡುತ್ತಾರೆ, ದೊಡ್ಡ ಸಂಭ್ರಮವಾಗಿ ಆಚರಣೆ ಮಾಡುತ್ತಾರೆ. ಈಗಂತೂ ವಿಭಿನ್ನವಾದ ರೀತಿಯ ಗಣೇಶನ ಮೂರ್ತಿಗಳನ್ನು ಸಹ ನೋಡಬಹುದು.
ಹೀಗೆ ಗಣೇಶ ಹಬ್ಬ ಬಂತು ಎಂದರೆ ಗಣೇಶನನ್ನು ತಂದು, ಪ್ರತಿಷ್ಠಾಪಿಸಿ ಆಚರಣೆ ಮಾಡಿ, ಪೂಜೆ (Ganesha Puja), ನಂತರ ಗಣೇಶನನ್ನು ವಿಸರ್ಜನೆ ಮಾಡುವುದು ಹೀಗೆ ಒಂದೊಂದು ವಿಚಾರವು ಸಂಭ್ರಮವಾಗಿಯೇ ಇರುತ್ತದೆ.. ಜೊತೆಗೆ ಬೀದಿ ಬೀದಿಯಲ್ಲಿ ಬಣ್ಣ ಬಣ್ಣದ ಗಣೇಶನ ವಿಗ್ರಹಗಳು ಕಾಣುತ್ತದೆ ಎಂದು ಹೇಳಬಹುದು. ದೇಶದ ಪ್ರತಿ ಊರಿನಲ್ಲೂ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚಾರಣೆ ಮಾಡುತ್ತಾರೆ ಎನ್ನುವುದು ಗೊತ್ತಿರುವ ವಿಚಾರ ಆಗಿದೆ.
ಫ್ರೀ ಕರೆಂಟ್! ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಸರ್ಕಾರದಿಂದ ರಾತ್ರೋ ರಾತ್ರಿ ಬಿಗ್ ಅಪ್ಡೇಟ್
ಹಾಗೆಯೇ ನಮ್ಮ ರಾಜ್ಯದಲ್ಲಿ ಅದರಲ್ಲು ಬೆಂಗಳೂರಿನಲ್ಲಿ (Bengaluru) ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಹೀಗಿರುವಾಗ ಗಣೇಶ ಹಬ್ಬದ ವೇಳೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬಿಬಿಎಂಪಿ (BBMP) ಈಗ ಕೆಲವು ಹೊಸ ರೂಲ್ಸ್ (New Rules) ಗಳನ್ನು ಜಾರಿ ಮಾಡಿದೆ, ಒಂದು ವೇಳೆ ಈ ರೂಲ್ಸ್ ಗಳನ್ನು ಮೀರಿದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಹಾಗಿದ್ದರೆ ಆ ಹೊಸ ನಿಯಮಗಳು ಯಾವುವು ಎಂದು ತಿಳಿಯೋಣ ಬನ್ನಿ..
*ಹಬ್ಬದ ಆಚರಣೆ ಸಮಯದಲ್ಲಿ ಸಾರ್ವಜನಿಕ ಕಡೆಗಳಲ್ಲಿ ದೊಡ್ಡ ದೊಡ್ಡ ಬ್ಯಾನರ್ ಗಳು ಮತ್ತು ಫ್ಲೆಕ್ಸ್ ಗಳನ್ನು ಹಾಕುವ ಹಾಗಿಲ್ಲ.
*ಸ್ಯಾಂಕಿ ಲೇಕ್, ಅಲಸೂರ್ ಲೇಕ್, ಯಡಿಯೂರು ಲೇಕ್, ಹೆಬ್ಬಾಳ ಲೇಕ್, ಹಾಗೂ ಬೇರೆ ಜಾಗಗಳಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುವುದಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಸೂಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
*ಗಣೇಶನ ಸಣ್ಣ ವಿಗ್ರಹಗಳನ್ನು ವಿಸರ್ಜನೆ ಮಾಡಲು ಮೊಬೈಲ್ ಟ್ಯಾಂಕ್ ಗಳ ವ್ಯವಸ್ಥೆಯನ್ನು ಕೂಡ ಮಾಡಲು ಮಾಹಿತಿ ನೀಡಲಾಗಿದೆ.
*ಗಣೇಶ ವಿಸರ್ಜನೆ ಸಮಯದಲ್ಲಿ ಜನರು ಬಳಸುವ ಪೂಜೆಯ ವಸ್ತುಗಳು ಮತ್ತು ಇನ್ನಿತರ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು, ಬೇರೆಡೆಗೆ ಹಾಕಲು ಸಿಬ್ಬಂದಿಗಳ ನೇಮಕ ಆಗಬೇಕು.
ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇರುವುದಕ್ಕೆ ಇದು ಕೂಡ ಕಾರಣ ಇರಬಹುದು! ಇಂದೇ ಸರಿಪಡಿಸಿಕೊಳ್ಳಿ
*ಯಾವುದೇ ತೊಂದರೆ ಆಗದ ಹಾಗೆ ನೋಡಿಕೊಳ್ಳಲು ಪೊಲೀಸರನ್ನು ನೇಮಿಸಬೇಕಾಗುತ್ತದೆ.
*ಗಣೇಶನ ಮೆರವಣಿಗೆ ವೇಳೆ ದೊಡ್ಡ ಪಟಾಕಿ ಸಿಡಿಸಿ, ಜನರಿಗೆ ತೊಂದರೆ ಕೊಡಬಾರದು.
*ಗಣೇಶನ ವಿಸರ್ಜನೆ ಮಾಡುವ ಕೆರೆಗಳು ಮತ್ತು ಇನ್ನಿತರ ಸ್ಥಳಗಳಲ್ಲಿ ಸರಿಯಾದ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು.
*ಹಾಗೆಯೇ ವಿಸರ್ಜನೆ ನಡೆಯುವ ಸ್ಥಳದಲ್ಲಿ ಜೀವ ರಕ್ಷಣೆ ಮಾಡುವ ಸಿಬ್ಬಂದಿಯನ್ನು ಕೂಡ ನೇಮಿಸಬೇಕು.
*ಸಿಸಿಟಿವಿ ಕ್ಯಾಮೆರಾ ಮತ್ತು ಲೈಟ್ ಗಳನ್ನು ಹಾಕಬೇಕು.
*ಕೆಮಿಕಲ್ ಬಳಸಿದ ಮತ್ತು ಪಿಒಪಿ ಬಳಸಿದ ವಿಗ್ರಹಗಳನ್ನು ಬ್ಯಾನ್ ಮಾಡಲಾಗಿದೆ.
New rules from the government for the celebration of Ganesha festival